ಮಂಗಳೂರು: ಪಕ್ಕದ ಮನೆಯ ಬಾತ್​ರೂಮ್​ನಲ್ಲಿ ಮೊಬೈಲ್​ ಇಟ್ಟು ಯುವತಿಯ ಅಣ್ಣನ ಕೈ ಸಿಕ್ಕಿಬಿದ್ದ ಯುವಕ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 05, 2023 | 11:17 AM

ಮಂಗಳೂರು ನಗರ ಹೊರವಲಯದ ಮುಲ್ಕಿಯ ಪಕ್ಷಿಕರೆಯಲ್ಲಿ ಪಕ್ಕದ ಮನೆಯ ಯುವತಿಯ ಸ್ನಾನದ ವಿಡಿಯೋಗಾಗಿ ಯುವಕನೊಬ್ಬ ಮೊಬೈಲ್ ಇಟ್ಟು ಸಿಕ್ಕಿಬಿದ್ದ ಘಟನೆ ನಡೆದಿದೆ. ಸುಮಂತ್ ಪೂಜಾರಿ(22) ಮೊಬೈಲ್​ಯಿಟ್ಟ ಯುವಕ.

ಮಂಗಳೂರು: ಪಕ್ಕದ ಮನೆಯ ಬಾತ್​ರೂಮ್​ನಲ್ಲಿ ಮೊಬೈಲ್​ ಇಟ್ಟು ಯುವತಿಯ ಅಣ್ಣನ ಕೈ ಸಿಕ್ಕಿಬಿದ್ದ ಯುವಕ
ಮಂಗಳೂರು
Follow us on

ದಕ್ಷಿಣ ಕನ್ನಡ, ಆ.5: ಮಂಗಳೂರು(Mangalore) ನಗರ ಹೊರವಲಯದ ಮುಲ್ಕಿಯ ಪಕ್ಷಿಕರೆಯಲ್ಲಿ ಪಕ್ಕದ ಮನೆಯ ಯುವತಿಯ ಸ್ನಾನದ ವಿಡಿಯೋಗಾಗಿ ಯುವಕನೊಬ್ಬ ಮೊಬೈಲ್(Mobile) ಇಟ್ಟು ಸಿಕ್ಕಿಬಿದ್ದ ಘಟನೆ ನಡೆದಿದೆ. ಸುಮಂತ್ ಪೂಜಾರಿ(22) ಮೊಬೈಲ್​ಯಿಟ್ಟ ಯುವಕ. ಹೌದು, ಪಕ್ಕದ ಮನೆಯ ಯುವತಿಯ ಸ್ನಾನದ ವಿಡಿಯೋಗಾಗಿ ಮೊಬೈಲ್ ಇಟ್ಟಿದ್ದ ಸುಮಂತ್. ಆದರೆ, ಯುವತಿಯ ಬದಲಾಗಿ ಯುವತಿಯ ಅಣ್ಣ ಬಚ್ಚಲು ಮನೆಗೆ ಸ್ನಾನಕ್ಕಾಗಿ ಬಂದಿದ್ದ. ಈ ವೇಳೆ ಮೊಬೈಲ್ ಇರುವುದನ್ನು ಗಮನಿಸಿದ ಯುವತಿಯ ಅಣ್ಣ, ರೆಡ್​ ಹ್ಯಾಂಡ್​ ಆಗಿ ಹಿಡಿದು ಆರೋಪಿ ಸುಮಂತ್​ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಸುಮಂತ್ ಪೂಜಾರಿ

ಉಡುಪಿಯ ಖಾಸಗಿ ಕಾಲೇಜೊಂದರಲ್ಲಿ ಮೂಬೈಲ್​ ಚಿತ್ರೀಕರಣ ಈಗಾಗಲೇ ದೊಡ್ಡ ಮಟ್ಟದ ಸುದ್ದಿ ಮಾಡುತ್ತಿದೆ. ಇದರ ಬೆನ್ನಲ್ಲೇ ಇದೀಗ ಇಂತಹದೊಂದು ಘಟನೆ ನಡೆದಿದೆ. ಇನ್ನು ಆರೋಪಿ ಸುಮಂತ್ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾನೆ. ಇದೀಗ ಇತನ ವಿರುದ್ದ ಮುಲ್ಕಿ ಠಾಣೆಯಲ್ಲಿ ಯುವತಿಯ ಅಣ್ಣ ಪ್ರಜ್ವಲ್ ದೂರು ನೀಡಿದ್ದು, ಆರೋಪಿ ಸುಮಂತ್ ಪೂಜಾರಿಯನ್ನು ಮುಲ್ಕಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಕಾಫಿನಾಡಿನ ಬಿಂಡಿಗ ದೇವಿರಮ್ಮನ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ, ಸಂಪ್ರದಾಯಿಕ ಉಡುಗೆ ಧರಿಸದರೆ ಮಾತ್ರ ಎಂಟ್ರಿ

ಗಾಂಜಾ ಸಾಗಿಸುತ್ತಿದ್ದವನ ಬಂಧನ

ದಕ್ಷಿಣ ಕನ್ನಡ: ಡ್ರಗ್ಸ್​ ಮುಕ್ತ ಮಂಗಳೂರು ಮಾಡುವತ್ತ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಅದರಂತೆ ಇದೀಗ ಮಂಗಳೂರಿನ ಪಂಪ್ವೆಲ್ ಬಳಿ ಗಾಂಜಾ ಸಾಗಿಸುತ್ತಿದ್ದ ಕೋಡಿಕಲ್ ನಿವಾಸಿ ಮೊಹಮ್ಮದ್ ಅಜೀಜ್​​(40)ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 2 ಕೆಜಿ ಗಾಂಜಾ, ಬೈಕ್, ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:22 am, Sat, 5 August 23