ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ! ನಕಲಿ ದಾಖಲೆ ತಯಾರಿಸ್ತಿದ್ದವನ ಬಂಧನ

ಕಡಲತಡಿ ಮಂಗಳೂರಿನಲ್ಲೊಂದು ನಕಲಿ ಸಾಮ್ರಾಜ್ಯವೇ ಇತ್ತು. ಕಳೆದ ಮೂರು ವರ್ಷಗಳಿಂದ ಅದೆಷ್ಟೊ ನಕಲಿಗಳನ್ನು ಆತ ಹುಟ್ಟಿ ಹಾಕಿದ್ದಾನೆ. ದೂರದ ಬಾಂಗ್ಲದೇಶದವರಿಗೂ ಆತ ಕರಾವಳಿಯಲ್ಲಿ ನೆಲೆ ಕೊಡಿಸಿದ್ದ. ಸದ್ಯ ಆತ ಈಗ ಪೊಲೀಸರ ಅತಿಥಿಯಾಗುವ ಮೂಲಕ ಒಂದು ದೊಡ್ಡ ನಕಲಿ ಸಾಮ್ರಾಜ್ಯದ ಅನಾವರಣ ಆಗುತ್ತಿದೆ.

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ! ನಕಲಿ ದಾಖಲೆ ತಯಾರಿಸ್ತಿದ್ದವನ ಬಂಧನ
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 07, 2023 | 9:00 PM

ದಕ್ಷಿಣ ಕನ್ನಡ, ಅ.07: ಮಂಗಳೂರು ಪೊಲೀಸರು(Mangalore Police) ಒಂದು ನಕಲಿ ಸಾಮ್ರಾಜ್ಯದ ಅನಾವರಣ ಮಾಡಿದ್ದಾರೆ. ಮಂಗಳೂರಿನ ಬಿಕರ್ಣಕಟ್ಟೆಯ ಬಜ್ಜೋಡಿ ಬಳಿಯ ಇನ್ ಫ್ಯಾಟ್ ಮೇರಿ ಚರ್ಚ್ ಹತ್ತಿರದ ನಿವಾಸಿಯಾಗಿದ್ದ ಆರೋಪಿ ಬರ್ನಾಡ್ ರೋಶನ್ ಮೆಸ್ಕರೆನಸ್(41), ಕಳೆದ ಮೂರು ವರ್ಷಗಳಿಂದ ಕಂಕನಾಡಿ-ಪಂಪ್ವೆಲ್ ರಸ್ತೆಯ ವಿಶ್ವಾಸ್ ಕ್ರೌನ್ ಅಪಾರ್ಟ್ಮೆಂಟ್ ನ ನೆಲ ಅಂತಸ್ತಿನಲ್ಲಿರುವ ಹೆಲ್ಪ್ ಲೈನ್ ಮಂಗಳೂರು ಎನ್ನುವ ಶಾಪ್ ಇಟ್ಟಿದ್ದ. ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಸರ್ಕಾರಿ ಸೇವೆಗಳನ್ನು ಮಾಡಿಕೊಡುತ್ತಿದ್ದ. ಆದ್ರೆ, ಮುಂದೆ ಇತನೇ ಎಲ್ಲಾ ರೀತಿಯ ನಕಲಿ ಐಡಿ(Fake ID)ಗಳನ್ನು ಮಾಡಿಕೊಡಲು ಮುಂದಾಗಿದ್ದ. ಬಾಂಗ್ಲದೇಶದಿಂದ ನುಸುಳಿ ಪಶ್ಚಿಮ ಬಂಗಾಳದಲ್ಲಿ ನೆಲೆನಿಂತು ಉದ್ಯೋಗಕ್ಕೆಂದು ಮಂಗಳೂರಿಗೆ ಬಂದು ನೆಲೆಸಿದವರಿಗೆ ಎಲ್ಲ ರೀತಿಯ ಕಾರ್ಡ್​ಗಳನ್ನು ಮಾಡಿಕೊಟ್ಟು, ಇಲ್ಲಿನ ವಾಸದ ದೃಢೀಕರಣ ಪತ್ರ ಕೊಡಿಸಿದ್ದಾನೆ.

ಇನ್ನು ಅದೆಷ್ಟೋ ಜನರು, ಇತ ಮಾಡಿಕೊಟ್ಟ ನಕಲಿ ದಾಖಲೆಯನ್ನು ಬಳಸಿ ರೆಕಾರ್ಡ್ ಕ್ರಿಯೇಟ್ ಮಾಡಿ ಹೆಸರಾಂತ ಬ್ಯಾಂಕ್ ಗಳಲ್ಲಿ ಲೋನ್ ಪಡೆದಿದ್ದಾರೆ. ಇದೀಗ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ‘ ಈತನಿಂದ ಲಾಭಪಡೆದ ಈತನ ಕಸ್ಟಮರ್​ಗಳ ಪತ್ತೆಗೆ ಮುಂದಾಗಿದ್ದೇವೆ. ಆರೋಪಿ ಏನೇನು ಮಾಡುತ್ತಿದ್ದ. ಈತನಿಗೆ ಓರಿಜಿನಲ್ ಹಾಗೆ ಫೇಕ್ ಐಡಿ ಮಾಡುವಲ್ಲಿ ಸರ್ಕಾರಿ ಅಧಿಕಾರಿಗಳ ಸಹಕಾರ ಇದೆಯಾ? ಎನ್ನುವ ಬಗ್ಗೆಯೂ  ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಈತನಿಂದ ಲಾಭ ಪಡೆದವರನ್ನು ಕರೆದು ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ನಕಲಿ ದಾಖಲಾತಿ ದಂಧೆ; ವಿದೇಶಿ ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದ ಆರೋಪಿ ಅರೆಸ್ಟ್

ಸದ್ಯ ಈತನಿಂದ ನಕಲಿ ಸರ್ಟಿಫಿಕೇಟ್, ಐಡಿ ಕಾರ್ಡ್​ಗಳನ್ನು ಮಾಡಿಸಿಕೊಂಡವರು ಅದೆಷ್ಟು ಜನರಿದ್ದಾರೋ ಗೊತ್ತಿಲ್ಲ. ಅದನ್ನು ಪಡೆದವರು ಅದೆಲ್ಲೆಲ್ಲಿ ಮೋಸ ಮಾಡುತ್ತಿದ್ದಾರೊ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬರಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ