AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಬ್ರಹ್ಮಣ್ಯ ಗುಂಡ್ಯ ಹೆದ್ದಾರಿ ಸಮೀಪವೇ ನಕ್ಸಲ್ ಚಟುವಟಿಕೆ ಶಂಕೆ: ಪೊಲೀಸ್, ಎಎನ್‌ಎಫ್ ತಂಡದಿಂದ ತೀವ್ರಗೊಂಡ ಶೋಧ ಕಾರ್ಯ

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮತ್ತೆ ನಕ್ಸಲ್ ಚಟುವಟಿಕೆಯ ಅನುಮಾನ ಬಲವಾಗಿದೆ. ಇತ್ತೀಚೆಗೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಚೇರು ಎಂಬಲ್ಲಿ ಅರಣ್ಯದ ಅಂಚಿನಲ್ಲಿರುವ ಮನೆಯೊಂದಕ್ಕೆ ಶಂಕಿತ ನಕ್ಸಲರು ಬಂದು ಹೋಗಿರುವ ಕಾರಣ ಆ ಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ಶೋಧಕಾರ್ಯ ತೀವ್ರಗೊಳಿಸಿದ್ದಾರೆ.

ಸುಬ್ರಹ್ಮಣ್ಯ ಗುಂಡ್ಯ ಹೆದ್ದಾರಿ ಸಮೀಪವೇ ನಕ್ಸಲ್ ಚಟುವಟಿಕೆ ಶಂಕೆ: ಪೊಲೀಸ್, ಎಎನ್‌ಎಫ್ ತಂಡದಿಂದ ತೀವ್ರಗೊಂಡ ಶೋಧ ಕಾರ್ಯ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Apr 08, 2024 | 7:36 AM

Share

ಮಂಗಳೂರು, ಏಪ್ರಿಲ್ 8: ಕಡಬ ತಾಲೂಕಿನ ಬಿಳಿನೆಲೆ (Bilinele) ಗ್ರಾಮದ ಚೇರು ಎಂಬಲ್ಲಿ ಅರಣ್ಯದ ಅಂಚಿನಲ್ಲಿರುವ ಮನೆಯೊಂದಕ್ಕೆ ಗುರುವಾರ ರಾತ್ರಿ ಮುಸುಕು ಹಾಕಿಕೊಂಡು, ಆಯುಧಗಳ ಸಮೇತ ಬಂದಿದ್ದ ಶಂಕಿತ ನಕ್ಸಲರ (Naxals) ತಂಡದಲ್ಲಿ ಆರು ಮಂದಿ ಸದಸ್ಯರಿದ್ದರು ಎಂದು ಮೂಲಗಳು ಖಚಿತಪಡಿಸಿವೆ. ಸದಸ್ಯರೆಲ್ಲರೂ ಒಂದೇ ತರಹದ ಡ್ರೆಸ್, ಬೂಟುಗಳನ್ನು ಧರಿಸಿ ದೊಡ್ಡ ಬ್ಯಾಗ್​​ಗಳನ್ನು ಹಿಡಿದುಕೊಂಡಿದ್ದರು. ಅವರ ಬ್ಯಾಗ್‌ಗಳಲ್ಲಿ ಗನ್‌ನಂತಹ ಸಾಧನಗಳು ಇದ್ದವು ಎಂದು ಮನೆ ಮಂದಿ ಹೇಳಿದ್ದಾರೆ.

ಶಂಕಿತ ನಕ್ಸಲರ ಗ್ಯಾಂಗ್ ಸದಸ್ಯರು ಮನೆಯೊಂದಕ್ಕೆ ನುಗ್ಗಿ ಅಲ್ಲಿನ ಲೈಟ್‌ಗಳನ್ನು ಆಫ್ ಮಾಡಿದ್ದರು. ಮನೆಯ ಮಾಲೀಕರಿಗೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಲು ಹೇಳಿದ್ದರು. ನಂತರ ಟಿವಿಯ ವಾಲ್ಯೂಮ್ ಕೂಡ ಹೆಚ್ಚಿಸಿದ್ದರು. ಇನ್ನು ನಾಲ್ವರು ಮನೆಯ ಮುಂಭಾಗ ಮತ್ತು ಹಿತ್ತಲಲ್ಲಿ ಕಾವಲುಗಾರರಾಗಿ ನಿಂತಿದ್ದರು.

ನಂತರ ನಕ್ಸಲರು ಆಹಾರ ತಯಾರಿಸಲು ಹೇಳಿ ಅನ್ನ ಮತ್ತು ಚಿಕನ್ ಕರಿ ಸೇವಿಸಿದ್ದಾರೆ. ಮನೆಯವರು ನೋಡುತ್ತಿದ್ದ ಟಿವಿ ಧಾರಾವಾಹಿಯನ್ನೂ ನೋಡಿ ಮನೆಯಿಂದ ದಿನಸಿ ಸಾಮಾನುಗಳನ್ನು ತೆಗೆದುಕೊಂಡು ಕಾಡಿಗೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ತಂಗಿದ್ದ ಸಮಯದಲ್ಲಿ ಅವರ ಆರು ಮೊಬೈಲ್ ಫೋನ್ ಹ್ಯಾಂಡ್‌ಸೆಟ್‌ಗಳು ಮತ್ತು ಲ್ಯಾಪ್‌ಟಾಪ್ ಅನ್ನು ಮನೆಯಲ್ಲಿ ಚಾರ್ಜ್ ಮಾಡಿದ್ದಾರೆ. ಮನೆಯ ಸದಸ್ಯರು ನೀಡಿದ ಮಾಹಿತಿಯಂತೆ ಕನ್ನಡ ಹಾಗೂ ಇತರೆ ಭಾಷೆಗಳಲ್ಲಿ ಮಾತನಾಡುತ್ತಿದ್ದರು.

ನಕ್ಸಲರ ಭೇಟಿಯ ಸುಳಿವು ದೊರೆತ ತಕ್ಷಣ ಪೊಲೀಸರು ಮತ್ತು ನಕ್ಸಲ್ ನಿಗ್ರಹ ಪಡೆಯ (ಎಎನ್‌ಎಫ್) ಅಧಿಕಾರಿಗಳು ಮಾಹಿತಿ ಸಂಗ್ರಹಿಸಲು ಮನೆಗೆ ಧಾವಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ಯಾಂಗ್‌ಗಾಗಿ ಹುಡುಕಾಟ ನಡೆಸಿದ್ದಾರೆ. ನಕ್ಸಲರು ಭೇಟಿ ನೀಡಿದ ಮನೆ ಸುಬ್ರಹ್ಮಣ್ಯ-ಗುಂಡ್ಯ ಹೆದ್ದಾರಿಯಿಂದ ಸ್ವಲ್ಪ ದೂರದಲ್ಲಿರುವ ಕಾಡಿನ ಅಂಚಿನಲ್ಲಿದೆ.

10 ರಿಂದ 12 ವರ್ಷಗಳ ನಂತರ ಈ ಪ್ರದೇಶಕ್ಕೆ ನಕ್ಸಲರು ಆಗಾಗ ಭೇಟಿ ನೀಡುತ್ತಿರುವುದು ಕಂಡು ಬರುತ್ತಿದೆ. ಪರಿಣಾಮವಾಗಿ ಸ್ಥಳೀಯರು ಭಯಭೀತರಾಗಿದ್ದಾರೆ. ಆ ಪ್ರದೇಶದಲ್ಲಿ ಪೊಲೀಸರು ಬೀಟ್‌ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ನಕ್ಸಲರ ಚಲನವಲನ: ಮನೆಗೆ ಬಂದು ಊಟ ಮಾಡಿದ ಶಂಕಿತರು

ಈ ಮಧ್ಯೆ, ನಕ್ಸಲ್ ನಿಗ್ರಹ ಪಡೆಯ ಕಾರ್ಯಾಚರಣೆ ಚುರುಕುಗೊಂಡಿದೆ.

ಉಡುಪಿ ಜಿಲ್ಲೆಯ ಕೆಲವು ಕಡೆ ಸಹ ನಕ್ಸಲರು ಭೇಟಿ ನೀಡಿದ್ದ ಬಗ್ಗೆ ಇತ್ತೀಚೆಗೆ ವರದಿಗಾಗಿತ್ತು. ಇತ್ತೀಚೆಗೆ ಕೆಲವು ಮನೆಗಳಿಗೆ ಶಸ್ತ್ರಸಜ್ಜಿತ ನಕ್ಸಲರು ಭೇಟಿ ನೀಡಿದ್ದರು ಎಂದು ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಸ್ಥರು ಹೇಳಿಕೊಂಡಿದ್ದರು. ಹೀಗಾಗಿ ಉಡುಪಿ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಇದೀಗ ಕಣ್ಗಾವಲು ಹೆಚ್ಚಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!