Sign In

By signing in or creating an account, you agree with Associated Broadcasting Company's Terms & Conditions and Privacy Policy.

Mangaluru News: ನೀರಿನ ಅಭಾವದಿಂದ ಕಂಗೆಟ್ಟಿದ್ದ ಮಂಗಳೂರು ನಿವಾಸಿಗಳು ನಿರಾಳ; ತುಂಬೆ ಡ್ಯಾಂನಲ್ಲಿ ಹೆಚ್ಚಿತು ನೀರಿನ ಮಟ್ಟ

ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿತ್ತು. ಜೂನ್ 5 ರಂದು, ನೀರಿನ ಮಟ್ಟವು ಕೇವಲ 1.65 ಮೀಟರ್ ಆಗಿತ್ತು.

Mangaluru News: ನೀರಿನ ಅಭಾವದಿಂದ ಕಂಗೆಟ್ಟಿದ್ದ ಮಂಗಳೂರು ನಿವಾಸಿಗಳು ನಿರಾಳ; ತುಂಬೆ ಡ್ಯಾಂನಲ್ಲಿ ಹೆಚ್ಚಿತು ನೀರಿನ ಮಟ್ಟ
ಮಂಗಳೂರು ನಗರದಲ್ಲಿ ಶುಕ್ರವಾರ ಸಂಜೆ ಭಾರೀ ಮಳೆ ಸುರಿಯಿತು
Follow us
Ganapathi Sharma
|

Updated on: Jun 09, 2023 | 8:35 PM

ಮಂಗಳೂರು: ನೀರಿನ ಅಭಾವದಿಂದ ಕಂಗೆಟ್ಟಿದ್ದ ಮಂಗಳೂರು ನಗರ (Mangalore) ಹಾಗೂ ಸುತ್ತಲಿನ ಜನತೆ ಕೊನೆಗೂ ನಿರಾಳರಾಗುವಂತಾಗಿದೆ. ಒಂದೆಡೆ ಮುಂಗಾರು ಮಳೆ(Monsoon Rain) ಆಗಮನವಾಗುತ್ತಿದ್ದರೆ ಮತ್ತೊಂದೆಡೆ ಬಿಪರ್‌ಜೋಯ್ ಚಂಡಮಾರುತ ಪರಿಣಾಮವಾಗಿ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿಯೂ ಭಾರೀ ಮಳೆಯಾದ ಪರಿಣಾಮ ನೇತ್ರಾವತಿ ನದಿಯ ಒಳಹರಿವು ಹೆಚ್ಚಾಗಿದೆ. ತುಂಬೆಯಲ್ಲಿ ನೀರಿನ ಮಟ್ಟ 4.30 ಮೀಟರ್‌ಗೆ ಹೆಚ್ಚಳಗೊಂಡಿದೆ. ಹೀಗಾಗಿ ನಗರದಲ್ಲಿ ತಲೆದೋರಿದ್ದ ನೀರಿನ ಅಭಾವ ಸದ್ಯಕ್ಕೆ ಬಗೆಹರಿದಿದೆ.

ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿತ್ತು. ಜೂನ್ 5 ರಂದು, ನೀರಿನ ಮಟ್ಟವು ಕೇವಲ 1.65 ಮೀಟರ್ ಆಗಿತ್ತು.

ನೇತ್ರಾವತಿಯಲ್ಲಿ ಒಳಹರಿವು ಹೆಚ್ಚಾದಂತೆ ಶಂಭೂರಿನ ಎಎಂಆರ್ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಾಗತೊಡಗಿದೆ. ಅದರಂತೆ ಎಎಂಆರ್ ಡ್ಯಾಂನಿಂದ ತುಂಬೆ ವೆಂಟೆಡ್ ಡ್ಯಾಂಗೆ ನೀರು ಹರಿಸಲಾಗಿದೆ. ಗುರುವಾರ ತುಂಬೆ ವೆಂಟೆಡ್ ಅಣೆಕಟ್ಟೆಯ ನೀರಿನ ಮಟ್ಟ 4.3 ಮೀಟರ್ ಆಗಿತ್ತು.

ಪ್ರಸ್ತುತ ನಗರಕ್ಕೆ ಪರ್ಯಾಯ ದಿನಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.

ಇದನ್ನೂ ಓದಿ: Kateel Temple: ಕಟೀಲು ದೇಗುಲದಲ್ಲಿ ನೀರಿಗಾಗಿ ಹಾಹಾಕಾರ, ದೇವಿ ನಮ್ಮ ಕೈಬಿಡಲ್ಲ ಎಂದ ಅರ್ಚಕರು

ಈ ಮಧ್ಯೆ, ಬಿಪರ್‌ಜೋಯ್ ಚಂಡಮಾರುತದ ಪರಿಣಾಮವಾಗಿ ರಾಜ್ಯದ ಕೆಲವೆಡೆ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜೂನ್ 9 ರಿಂದ 12 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Managaluru News: ಬಿಪೊರ್​ಜೊಯ್​​ ಚಂಡಮಾರುತ ಆರ್ಭಟ: ಸಮುದ್ರ ತೀರಗಳಿಗೆ ತೆರಳದಂತೆ ಹವಾಮಾನ ಇಲಾಖೆ ಸೂಚನೆ

ಮಂಗಳೂರಿನಿಂದ ಕಾರವಾರದವರೆಗೆ ಕರಾವಳಿ ಕರ್ನಾಟಕದ ಸಮುದ್ರ ತೀರದಲ್ಲಿ 2.5 ರಿಂದ 3.3 ಮೀಟರ್ ಎತ್ತರದ ಅಲೆಗಳು ಏಳುವ ನಿರೀಕ್ಷೆಯಿದೆ. ದ.ಕ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಈ ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ