Mangaluru News: ಕಳ್ಳತನವಾಗಿದ್ದ 124 ಪೈಕಿ 39 ಮೊಬೈಲ್​ಗಳು CEIR ಪೋರ್ಟಲ್​ ಮೂಲಕ ಪತ್ತೆ, ಮಾಲೀಕರಿಗೆ ವಾಪಸ್

ಕಳ್ಳತನವಾಗಿದ್ದ 124 ಮೊಬೈಲ್​ ಫೋನ್​ಗಳ ಪೈಕಿ 39 ಮೊಬೈಲ್​ಗಳನ್ನು ಸಿಇಐಆರ್​ ಪೋರ್ಟಲ್ ಮೂಲಕ ಪತ್ತೆ ಹಚ್ಚಲಾಗಿದೆ. ಗುರುವಾರದಂದು ಪೊಲೀಸ್​ ಆಯುಕ್ತ ಕುಲದೀಪ್​ ಕುಮಾರ್​ ಆರ್​ ಜೈನ್​ ವಾರಸುದಾರರಿಗೆ ಹಸ್ತಾಂತರಿಸಿದರು.

Mangaluru News: ಕಳ್ಳತನವಾಗಿದ್ದ 124 ಪೈಕಿ 39 ಮೊಬೈಲ್​ಗಳು CEIR ಪೋರ್ಟಲ್​ ಮೂಲಕ ಪತ್ತೆ, ಮಾಲೀಕರಿಗೆ ವಾಪಸ್
ಪೊಲೀಸ್​ ಆಯುಕ್ತ ಕುಲದೀಪ್​ ಕುಮಾರ್​ ಆರ್​ ಜೈನ್Image Credit source: newskannada.com
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 17, 2023 | 8:16 PM

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಕಳ್ಳತನವಾದ (Mobile Theft) ಅಥವಾ ಸುಲಿಗೆಯಾದ ಮೊಬೈಲ್​ ಫೋನ್​ಗಳ  ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಸಿಇಐಆರ್​ ಪೋರ್ಟಲ್ (Central Equipment Identity Register -CEIR)  ಎಂಬ ನೂತನ ವ್ಯವಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಇಲಾಯಿಂದ ಜಾರಿಗೆ ತರಲಾಗಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಕಳ್ಳತನವಾದ 124 ಮೊಬೈಲ್​ ಫೋನ್​ಗಳ ಪೈಕಿ 39 ಮೊಬೈಲ್​ಗಳನ್ನು ಗುರುವಾರದಂದು ಪೊಲೀಸ್​ ಆಯುಕ್ತ ಕುಲದೀಪ್​ ಕುಮಾರ್​ ಆರ್​ ಜೈನ್​ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ​ ಮಾತನಾಡಿದ ಅವರು, ಕಳೆದ 5 ತಿಂಗಳಲ್ಲಿ ನಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ 402 ಜನರು ಮೊಬೈಲ್​ ಕಳೆದುಕೊಂಡಿರುವ ಬಗ್ಗೆ ದೂರು ನಿಡಿದ್ದಾರೆ. ಆ ಪೈಕಿ ಕಳ್ಳತನವಾದ 124 ಮೊಬೈಲ್​ ಫೋನ್​ಗಳನ್ನು ಪತ್ತೆ ಹಚ್ಚಿ 39 ಮೊಬೈಲ್​ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದೇವೆ. ಪತ್ತೆ ಹಚ್ಚಿರುವ ಒಟ್ಟು ಮೊಬೈಲ್ ಫೋನ್​ಗಳ ಬೆಲೆ ಸುಮಾರು 7 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಉಳಿದ ಮೊಬೈಳ್​ಗನ್ನು ಕೂಡ ಶೀಘ್ರದಲ್ಲಿ ಜಪ್ತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ​

ಸಿಇಐಆರ್​ ಪೋರ್ಟಲ್​​ನ್ನು ಪೊಲೀಸರು ಮತ್ತು ಮೊಬೈಲ್ ಕಳೆದುಕೊಂಡವರು ಇದನ್ನು ಬಳಕೆ ಮಾಡಬಹುದಾಗಿದೆ. ಇದರಿಂದ ಮೊಬೈಲ್ ಫೋನ್ ಪತ್ತೆಗೆ ಮತ್ತು ಅದರ ಮಾಲೀಕರಿಗೆ ಮರಳಿಸಲು ಸಹಾಯವಾಗುತ್ತದೆ ಎಂದರು.

ಇದನ್ನೂ ಓದಿ: Mangaluru University: 4 ವರ್ಷಗಳ ಬಿಕಾಂ ಕೋರ್ಸ್‌ಗೆ ಅನುಮೋದನೆ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯ

ಕಳ್ಳತನ ಅಥವಾ ಬೇರೆ ಯಾವುದೇ ರೀತಿಯಲ್ಲಿ ಮೊಬೈಲ್​ ಕಳೆದುಕೊಂಡರೆ ಅದನ್ನು ಬ್ಲಾಕ್​ ಮಾಡಲು ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಜಾರಿಗೆ ತಂದಿರುವ ಹೊಸ ವಿಧಾನವೇ ಸಿಇಐಆರ್​ ಪೋರ್ಟಲ್. ಮೊಬೈಲ್ ಕಳೆದುಹೋದ ಕೂಡಲೇ ಹತ್ತಿರದ ಪೊಲೀಸ್​ ಠಾಣೆಯಲ್ಲಿ ಅಥವಾ ಕೆಎಸ್​ಪಿ ಆ್ಯಪ್​ನಲ್ಲಿ ದೂರ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು. IMEI ಸಂಖ್ಯೆ ಸೇರಿದಂತೆ ವಿವರಗಳನ್ನು CEIR ಪೋರ್ಟಲ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಮತ್ತು ಪೊಲೀಸರಿಗೆ ದೂರು ನೀಡಿದಾಗ ಫೋನ್ ಬ್ಲಾಕ್ ಆಗುತ್ತದೆ.

ಇದನ್ನೂ ಓದಿ: ಇದೊಂದು ಹೊಸ ಟ್ರೆಂಡ್​ ಶುರುವಾಗಿದೆ! ಮೊಬೈಲ್ ಕಳೆದುಕೊಂಡವರು ಸೀದಾ ಈ ವೆಬ್​ಸೈಟ್​​ಗೆ ಭೇಟಿ ನೀಡ್ತಿದಾರೆ! ತಡವೇಕೆ? ಮೊಬೈಲ್ ಕಳೆದಿದ್ದರೆ ನೀವೂ ಹೀಗೆ ಮಾಡಿ!

ಯಾರಾದರೂ ಮತ್ತೊಂದು ಸಿಮ್ ಕಾರ್ಡ್‌ನೊಂದಿಗೆ ಫೋನ್​ನ್ನು ಬಳಸಲು ಪ್ರಯತ್ನಿಸಿದಾಗ, ಅಧಿಕಾರಿಗಳಿಗೆ ತಕ್ಷಣವೇ ಸೂಚನೆ ಹೋಗುತ್ತದೆ. ಆ ಮೂಲಕ ಮೊಬೈಲ್​ನ್ನು ಟ್ರ್ಯಾಕ್ ಮಾಡಬಹುದಾಗಿದೆ. ಪತ್ತೆಯಾದ ಯಾವುದೇ ಫೋನ್‌ಗಳನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಲು ಮತ್ತು ಮರುಪಡೆಯಲು ಪೋರ್ಟಲ್​ನ್ನು ವ್ಯಾಪಕವಾಗಿ ಬಳಸುವಂತೆ ಕುಲದೀಪ್​ ಕುಮಾರ್​ ಆರ್​ ಜೈನ್​ ಜನರಲ್ಲಿ ಮನವಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:49 pm, Fri, 17 March 23