AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು ಅಬುಧಾಬಿ ಮಧ್ಯೆ ಪ್ರತಿ ದಿನ ಏರ್ ಇಂಡಿಯಾ ಎಕ್ಸ್​ಪ್ರೆಸ್ ಸೇವೆ: ಇಲ್ಲಿದೆ ವೇಳಾಪಟ್ಟಿ

ಮಂಗೂರಿನ ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರಯಾಣಿಕರಿಗೆ ಏರ್ ಇಂಡಿಯಾ ಎಕ್ಸ್​​ಪ್ರೆಸ್ ಶುಭ ಸುದ್ದಿ ನೀಡಿದೆ. ಮಂಗಳೂರು - ಬೆಂಗಳೂರು ವಿಮಾನಗಳ ಸಂಖ್ಯೆ ಹೆಚ್ಚಿಸಲು ಸಂಸ್ಥೆ ಮುಂದಾಗಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಗೆ ಪ್ರತಿ ದಿನ ವಿಮಾನ ಹಾರಾಟವನ್ನು ಜುಲೈ 22ರಿಂದ ಆರಂಭಿಸಲಿದೆ. ಹೊಸ ವಿಮಾನಗಳ ವೇಳಾಪಟ್ಟಿ ಇಲ್ಲಿದೆ.

ಮಂಗಳೂರು ಅಬುಧಾಬಿ ಮಧ್ಯೆ ಪ್ರತಿ ದಿನ ಏರ್ ಇಂಡಿಯಾ ಎಕ್ಸ್​ಪ್ರೆಸ್ ಸೇವೆ: ಇಲ್ಲಿದೆ ವೇಳಾಪಟ್ಟಿ
ಮಂಗಳೂರು ಅಬುಧಾಬಿ ಮಧ್ಯೆ ಪ್ರತಿ ದಿನ ಏರ್ ಇಂಡಿಯಾ ಎಕ್ಸ್​ಪ್ರೆಸ್ ಸೇವೆ: ಇಲ್ಲಿದೆ ವೇಳಾಪಟ್ಟಿ (ಸಾಂದರ್ಭಿಕ ಚಿತ್ರ)Image Credit source: PTI
Ganapathi Sharma
|

Updated on: Jul 17, 2024 | 8:03 AM

Share

ಮಂಗಳೂರು, ಜುಲೈ 17: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜುಲೈ 22 ರಿಂದ ಪ್ರತಿ ದಿನ ವಿಮಾನ ಸಂಚಾರ ಆರಂಭಿಸಲಿದೆ. ಪ್ರತಿ ದಿನದ ವಿಮಾನಗಳ ವೇಳಾಪಟ್ಟಿಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇದೀಗ ಪ್ರಕಟಿಸಿದೆ.

ಜುಲೈ 22 ರಿಂದ ಫ್ಲೈಟ್ IX 819 ರ ಸಂಚಾರದೊಂದಿಗೆ ಪ್ರತಿ ದಿನ ವಿಮಾನ ಸೇವೆ ಪ್ರಾರಂಭವಾಗಲಿದೆ. ಇದು ರಾತ್ರಿ 8:15 ಕ್ಕೆ ಅಬುಧಾಬಿಗೆ ಹೊರಡಲಿದೆ. ಅಲ್ಲಿಂದ ಬರುವ ವಿಮಾನ IX 820 ಬೆಳಿಗ್ಗೆ 5:20 ಕ್ಕೆ ಮಂಗಳೂರಿಗೆ ಆಗಮಿಸುತ್ತದೆ.

ಈಗಾಗಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್ (IX) ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರದಂದು ಅಬುಧಾಬಿಗೆ ವಾರದಲ್ಲಿ 4 ವಿಮಾನಗಳ ಸಂಚಾರ ನಿರ್ವಹಿಸುತ್ತಿದೆ. ಇದೀಗ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಹೊಸ ವಿಮಾನ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಬುಧಾಬಿ, ಬಹ್ರೇನ್, ದುಬೈ, ದಮನ್, ದೋಹಾ, ಜೆಡ್ಡಾ, ಕುವೈತ್ ಮತ್ತು ಮಸ್ಕತ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇಂಡಿಗೋದಿಂದಲೂ ಅಬುಧಾಬಿಗೆ ವಿಮಾನ ಸೇವೆ

2024 ರ ಆಗಸ್ಟ್ 9 ರಿಂದ ಅಬುಧಾಬಿಗೆ ದೈನಂದಿನ ವಿಮಾನಯಾನ ಸೇವೆ ಒದಗಿಸುವುದಾಗಿ ಇಂಡಿಗೋ ಏರ್​ಲೈನ್ಸ್ ಸಹ ಘೋಷಿಸಿದೆ. ಆ ಮೂಲಕ ಮೂಲಕ ಸ್ಪರ್ಧೆಯನ್ನು ಹೆಚ್ಚಿಸಲಿದೆ.

ಫ್ಲೈಟ್ 6E 1443 ಅಬುಧಾಬಿಯಿಂದ ಸಂಜೆ 4:00 ಗಂಟೆಗೆ ಆಗಮಿಸಲಿದೆ ಮತ್ತು ರಾತ್ರಿ 9:40 ಕ್ಕೆ 6E 1442 ವಿಮಾನ ಅಬುಧಾಬಿಗೆ ತೆರಳಲಿದೆ. ಇದರೊಂದಿಗೆ ಅಬುಧಾಬಿಗೆ ವಾರದಲ್ಲಿ 14 ವಿಮಾನ ಸೇವೆ ಲಭ್ಯವಾಗಲಿದೆ. ಸದ್ಯ ವಾರದಲ್ಲಿ 4 ವಿಮಾನಗಳಷ್ಟೇ ಸಂಚರಿಸುತ್ತಿವೆ.

ಇದನ್ನೂ ಓದಿ: ಮಂಗಳೂರು ಅಬುಧಾಬಿ ಮಧ್ಯೆ ಪ್ರತಿ ದಿನ ಸಂಚರಿಸಲಿದೆ ಏರ್ ಇಂಡಿಯಾ ಎಕ್ಸ್​ಪ್ರೆಸ್

ಮಂಗಳೂರು ಬೆಂಗಳೂರು ಮಧ್ಯೆ ಮತ್ತೊಂದು ವಿಮಾನ

ದೇಶೀಯ ವಲಯದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜುಲೈ 22 ರಿಂದ ಮಂಗಳೂರು ಹಾಗೂ ಬೆಂಗಳೂರು ಮಧ್ಯೆ ಹೊಸ ವಿಮಾನ ಸೇವೆ ಆರಂಭಿಸಲಿದೆ. ವಿಮಾನ ಸಂಖ್ಯೆ IX 1789 ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಸಂಜೆ 6:45 ಕ್ಕೆ ಮಂಗಳೂರನ್ನು ತಲುಪಲಿದೆ ಮತ್ತು ಮಂಗಳವಾರ, ಗುರುವಾರ ಮತ್ತು ಶನಿವಾರಗಳಂದು ಬೆಳಿಗ್ಗೆ 7:05 ಕ್ಕೆ ಮಂಗಳೂರಿನಿಂದ ಹೊರಡಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ