ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ: ಶಾರಿಕ್​ನ ​ಪಿಡಿಎಫ್ ಫೈಲ್ ಗಳ ರಹಸ್ಯ ಪತ್ತೆ

ಶಂಕಿತ ಉಗ್ರ ಶಾರೀಕ್ ಸಂಬಂಧಿಸಿದಂತೆ ಎನ್​ಐಎ(NIA) ಇಂಚಿಂಚು ಪರಿಶೀಲನೆ ನಡೆಸಿದ್ದು ಗೌಪ್ಯತೆಗಳು ಅಡಗಿರುವ ಪೆನ್ ಡ್ರೈವ್ ಹಾಗೂ ಅದ್ರಲ್ಲಿದ್ದ PDF ಪೈಲ್‌ಗಳು ಸಿಕ್ಕಿವೆ.

ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ: ಶಾರಿಕ್​ನ ​ಪಿಡಿಎಫ್ ಫೈಲ್ ಗಳ ರಹಸ್ಯ ಪತ್ತೆ
ಶಂಕಿತ ಉಗ್ರ ಶಾರಿಕ್ ಮತ್ತು ಎನ್​ಐಎ ತಂಡ
Follow us
ಆಯೇಷಾ ಬಾನು
|

Updated on:Apr 05, 2023 | 11:51 AM

ಮಂಗಳೂರು: ಮಂಗಳೂರಿನ ನಾಗುರಿ ಬಳಿ 2022ರ ನವೆಂಬರ್ 19 ರ ಸಂಜೆ 4.30 ರ ಸುಮಾರಿಗೆ ಆಟೋದಲ್ಲಿ ಕುಕ್ಕರ್ ಬಾಂಬ್(Mangaluru Cooker Blast) ಸ್ಪೋಟಗೊಂಡಿತ್ತು. ಈ ಘಟನೆಗೆ ಸಂಬಂಧಿಸಿ ಶಂಕಿತರ ಹೆಜ್ಜೆ ಗುರುತು ಹುಡುಕುತ್ತಾ ಹೋದಂತೆ ಹೊಸ ಹೊಸ ರಹಸ್ಯಗಳು ಬೆಳಕಿಗೆ ಬರುತ್ತಿವೆ. ಶಂಕಿತ ಉಗ್ರ ಶಾರೀಕ್ ಸಂಬಂಧಿಸಿದಂತೆ ಎನ್​ಐಎ(NIA) ಇಂಚಿಂಚು ಪರಿಶೀಲನೆ ನಡೆಸಿದ್ದು ಗೌಪ್ಯತೆಗಳು ಅಡಗಿರುವ ಪೆನ್ ಡ್ರೈವ್ ಹಾಗೂ ಅದ್ರಲ್ಲಿದ್ದ PDF ಪೈಲ್‌ಗಳು ಸಿಕ್ಕಿವೆ.

NIA ತಂಡ ಶಾರಿಕ್ ಬಳಿ 80GBಯ ಪೆನ್ ಡ್ರೈವ್ ಪತ್ತೆ ಹಚ್ಚಿದೆ. ಆ ಪೆನ್ ಡ್ರೈವ್​ನಲ್ಲಿ ಶಂಕಿತರ ಹಲವಾರು ಸ್ಫೋಟಕ PDFನ ರಹಸ್ಯ ಫೈಲ್​ಗಳು ಪತ್ತೆಯಾಗಿವೆ. ಹಲವು ಪ್ರಚೋದನಕಾರಿ ವಿಡಿಯೋಗಳು, ಹಿಟ್ ಸ್ಕ್ವಾಡ್ ಬಗೆಗಿನ ಮಾಹಿತಿ, ಕೋಮು‌ ವಿಧ್ವಂಸಕ ಕೃತ್ಯಗಳ ಪ್ಲಾನಿಂಗ್ ಸೇರಿ ಹಲವು ಮಾಹಿತಿಗಳು ಸಿಕ್ಕಿವೆ. ಕುಕೃತ್ಯ ನಡೆಸಲು ಎಲ್ಲೆಲ್ಲಿ ಪ್ಲಾನಿಂಗ್ ಮಾಡಿದ್ದರು ಅದರ ಸ್ಥಳದ ವಿಡಿಯೋಗಳು ಪತ್ತೆಯಾಗಿವೆ. 80 ಜಿಬಿ ಪೆನ್ ಡ್ರೈವ್ ನಲ್ಲಿ ಭಾಷಣಗಳು‌, ವಿಧ್ವಂಸಕ ಕೃತ್ಯಕ್ಕೆ ಬೇಕಾದ ಒಂದಷ್ಟು ಅಂಶಗಳು ಸಿಕ್ಕಿವೆ. ಅಲ್ಲದೆ ಶಾರಿಕ್‌ ಹಾಗೂ ಮತಿನ್ ಇಬ್ಬರೂ ಕಾನೂನು ಸುವ್ಯವಸ್ಥೆ ಹದಗೆಡಲು ಏನೇನು ಮಾಡಬೇಕೋ ಎಂಬ ಬಗ್ಗೆ ತನ್ನ ಸಹಚರರಿಗೆ ವಿಡಿಯೋ ಮಾಡಿ ಸೂಚನೆ ನೀಡಿದ್ದರು.

ಇದನ್ನೂ ಓದಿ: ಬೆಳಗಾವಿ ಕುಕ್ಕರ್ ಒಡೆದರೆ ಕೇವಲ ಅದೊಂದು ಕುಟುಂಬ ಒಡೆಯುತ್ತೆ, ಮಂಗಳೂರು ಕುಕ್ಕರ್ ಒಡೆದರೆ ದೇಶವೇ ಸಿಡಿಯುತ್ತೆ -ನಳಿನ್ ಕುಮಾರ್ ಕಟೀಲು ವ್ಯಾಖ್ಯಾನ

ಪೆನ್​ಡೈವ್​ನಲ್ಲಿ ಪತ್ತೆಯಾದ ವಿಡಿಯೋದಲ್ಲಿದ್ದ ಮೌಲ್ವಿಗಾಗಿ ಹುಡುಕಾಟ

ಮುಖ್ಯವಾಗಿ ಆರ್ಟಿಕಲ್ 370 ರದ್ದು ಬಗ್ಗೆಯೇ ಹೆಚ್ಚು ಪ್ರಚೋದನಕಾರಿ ವಿಡಿಯೋಗಳು ಪೆನ್ ಡ್ರೈವ್​ನಲ್ಲಿ ಪತ್ತೆಯಾಗಿವೆ. ಸದ್ಯ ಎಲ್ಲಾ ವಿಡಿಯೋಗಳನ್ನು NIA ಪರಿಶೀಲನೆ ಮಾಡುತ್ತಿದೆ. 2017ರಲ್ಲಿ ತೀರ್ಥಹಳ್ಳಿಯಲ್ಲಿ ಆದ ಮೌಲ್ವಿ ಭಾಷಣ ಪತ್ತೆಯಾಗಿದೆ. ‘ಕಾಫೀರರನ್ನ( ಮುಸ್ಲಿಮೇತರನ್ನು) ಮಟ್ಟ ಹಾಕುವ ಸಮಯ ಬಂದಿದೆ’ ಜಿಹಾದಿ ಮೂಲಕ ಇಸ್ಲಾಂನ್ನು ಉಳಿಸೋಣ ಎಂದೆಲ್ಲ ಮೌಲ್ವಿ ಭಾಷಣ ಮಾಡಿದ್ದಾರೆ. ಈ ಭಾಷಣದಿಂದ ಹಲವು ಯುವಕರು ಪ್ರಚೋದಿತರಾಗಿ ಉಗ್ರವಾದಕ್ಕೆ ವಾಲಿದ್ದರು. ಪೆನ್ ಡ್ರೈವ್ ನಲ್ಲಿ ಭಾಷಣದ ತುಣುಕು ಪತ್ತೆಯಾದ ಕೂಡಲೆ ಮೌಲ್ವಿಗಾಗಿ ಎನ್​ಐಎ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ವೀರಪ್ಪನ್ ಮಾದರಿ ಆಹಾರ ಸಂಗ್ರಹ

ಇನ್ನು ಮತ್ತೊಂದೆಡೆ ಶಂಕಿತ ಉಗ್ರ ಶಾರಿಕ್ ವಿಚಾರಣೆ ವೇಳೆ ಅನೇಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾನೆ. ಶಿವಮೊಗ್ಗದ ಕಾಡುಗಳಲ್ಲಿ ಕೆಲವು ಶಂಕಿತರು ನೆಲೆಸಿದ್ದು ಇವರೆಲ್ಲ ವೀರಪ್ಪನ್ ಮಾದರಿಯಲ್ಲಿ ಆಹಾರ ಸಂಗ್ರಹಣೆ ಮಾಡಿದ್ದ ಬಗ್ಗೆ ಶಾರಿಕ್ ಮಾಹಿತಿ ನೀಡಿದ್ದಾನೆ. ಮತೀನ್ ಜೊತೆ ಸೇರಿ ಮಾಡಿದ್ದ ಪ್ಲಾನಿಂಗ್ ಬಗ್ಗೆ ಬಾಯಿಬಿಟ್ಟಿದ್ದಾನೆ. ಪ್ಲಾಸ್ಟಿಕ್ ಡ್ರಮ್​ಗಳನ್ನ ನೆಲದಲ್ಲಿ ಹೂತು ಆಹಾರ ಸಂಗ್ರಹಣೆ ಮಾಡಿದ್ದರು. ಆಹಾರವನ್ನ ಕೆಡದಂತೆ ಸಂಗ್ರಹಿಸಿಡಲು ಪ್ಲಾಸ್ಟಿಕ್ ಡ್ರಮ್​ಗಳನ್ನು ಬಳಸಲಾಗುತ್ತಿತ್ತಂತೆ. ಶಾರಿಕ್ ಅಂಡ್ ಗ್ಯಾಂಗ್ ನಿರಂತರವಾಗಿ ಕಾಡಿನಲ್ಲಿ ತರಬೇತಿ ಹಾಗೂ ಪ್ಲಾನಿಂಗ್ ಮಾಡಲು ಕಾಡುಗಳ ಮೊರೆ ಹೋಗುತ್ತಿದ್ದರು. ಈ ಹಿನ್ನಲೆ ಆಹಾರ ವಸ್ತುಗಳ ಅಗತ್ಯತೆ ಹೆಚ್ಚಾಗಿತ್ತು. ಹೀಗಾಗಿ ಶಿವಮೊಗ್ಗದ ಕಾಡುಗಳಲ್ಲಿ ಆಹಾರ ಪದಾರ್ಥ ಸಂಗ್ರಹ ಮಾಡ್ತಿದ್ದರು. ಸದ್ಯ ಪೆನ್ ಡ್ರೈವ್​ನಲ್ಲಿ ಸಿಕ್ಕ ಒಂದೊಂದು ಅಂಶದ ಬಗ್ಗೆ ಕೂಡ ಎನ್​ಐಎ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:51 am, Wed, 5 April 23

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?