ಮಂಗಳೂರು: ಬಾವಿಯಲ್ಲಿ ಪ್ರಿಯಕರನ ಜೊತೆ ವಿವಾಹಿತೆಯ ಶವಪತ್ತೆ

ದಕ್ಷಿಣ ಕನ್ನಡದ ಮೂಡಬಿದಿರೆ ತಾಲೂಕಿನಲ್ಲಿ ಭೀಕರ ಘಟನೆ ನಡೆದಿದೆ. ವಿವಾಹಿತೆ ಜೊತೆಗೆ ಪ್ರಿಯಕರನ ಮೃತದೇಹ ಬಾವಿಯಲ್ಲಿ ಪತ್ತೆಯಾಗಿರುವಂತಹ ಘಟನೆ ನಡೆದಿದೆ. ಮೊದಲಿಗೆ ವಿವಾಹಿತೆಯನ್ನು ಬಾವಿಗೆ ತಳ್ಳಿದ್ದ ಪ್ರಿಯಕರ ಬಳಿಕ ತಾನು ಕೂಡ ಅದೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಬಾವಿಯಲ್ಲಿ ಪ್ರಿಯಕರನ ಜೊತೆ ವಿವಾಹಿತೆಯ ಶವಪತ್ತೆ
ಸಾಂದರ್ಭಿಕ ಚಿತ್ರ
Image Credit source: People matters
Edited By:

Updated on: May 29, 2025 | 1:46 PM

ಮಂಗಳೂರು, ಮೇ 29: ಬಾವಿಯಲ್ಲಿ ಪ್ರಿಯಕರನ ಜೊತೆ ವಿವಾಹಿತೆಯ ಶವಪತ್ತೆ (found dead) ಆಗಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ (Mudbidri) ತಾಲೂಕಿನ ಬಡಗಮಿಜಾರು ಮರಕಡ ಎಂಬಲ್ಲಿ ನಡೆದಿದೆ. ಬಡಗಮಿಜಾರು ನಿವಾಸಿ ನಮೀಕ್ಷಾ ಶೆಟ್ಟಿ ಮತ್ತು ಪ್ರಿಯಕರ ನಿಡ್ಡೋಡಿಯ ಪ್ರಶಾಂತ್ ಮೃತದೇಹ ಪತ್ತೆ ಆಗಿದೆ. ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಶಾಂತ್ ಮೂಲತ: ಬಾಗಲಕೋಟೆ ನಿವಾಸಿಯಾಗಿದ್ದು, ಮದುವೆಯಾಗಿ ವಿಚ್ಛೇದನ ಆಗಿದೆ. ನಮೀಕ್ಷಾ ಶೆಟ್ಟಿಗೆ ಇನ್​ಸ್ಟಾಗ್ರಾಂ ಮೂಲಕ ಪ್ರಶಾಂತ್ ಪರಿಚಯವಾಗಿತ್ತು. ನಮೀಕ್ಷಾ ಗಂಡನ ಜೊತೆ ಸಂಸಾರ ಸರಿ ಬಾರದೆ ತನ್ನ ಮಕ್ಕಳೊಂದಿಗೆ ತಂದೆಯ ಮನೆಯಲ್ಲಿಯೇ ವಾಸವಾಗಿದ್ದರು. ಪ್ರಿಯಕರ ಪ್ರಶಾಂತ್ ಆಗಾಗ ಬಂದು ಹೋಗುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಜಿಮ್ ಡಂಬಲ್​​ನಿಂದ ಹೆಂಡತಿಯ ತಲೆ ಜಜ್ಜಿದ ಗಂಡ: ಪಾಪ ಪ್ರಜ್ಞೆಯಿಂದ ತಾನೂ ಆತ್ಮಹತ್ಯೆಗೆ ಶರಣು

ನಿನ್ನೆ ಮನೆಯಲ್ಲಿ ಯಾರೂ ಇಲ್ಲದಾಗ ಪ್ರಶಾಂತ್ ಬಂದಿದ್ದು, ಈ ವೇಳೆ ಪ್ರಶಾಂತ್​-ನಮೀಕ್ಷಾ ಮಧ್ಯೆ ಜಗಳ ನಡೆದಿದೆ. ಪಕ್ಕದಲ್ಲಿದ್ದ ಬಾವಿಗೆ ಆಕೆಯನ್ನು ತಳ್ಳಿದ್ದನ್ನು ನಮೀಕ್ಷಾ ಪುತ್ರ ನೋಡಿದ್ದಾನೆ. ಇದನ್ನು ಕಂಡ ಪ್ರಶಾಂತ್ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಬಾವಿಯಿಂದ ಮೇಲೆತ್ತಿದ್ದಾರೆ.

10 ಬಾರಿ ಚಾಕುವಿನಿಂದ ಇರಿದು ಪತ್ನಿಯ ಬರ್ಬರ ಹತ್ಯೆ ಕೇಸ್​: ಆತ್ಮಹತ್ಯೆಗೆ ಯತ್ನಿಸಿದ್ದ ಪತಿ

10 ಬಾರಿ ಚಾಕುವಿನಿಂದ ಇರಿದು ಪತ್ನಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಅವಿನಾಶ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಚಂದ್ರದ್ರೋಣ ಪರ್ವತದ ಅರಣ್ಯದಲ್ಲಿ ನಡೆದಿದೆ. ನಿನ್ನೆ ಚಿಕ್ಕಮಗಳೂರು ತಾಲೂಕಿನ ಕೈಮರ ಗ್ರಾಮದಲ್ಲಿ ಪತ್ನಿ ಕೀರ್ತಿಯನ್ನು ಕೊಂದು ಅವಿನಾಶ್ ಪರಾರಿಯಾಗಿದ್ದ.​

ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದವಳನ್ನ 10 ಬಾರಿ ಇರಿದು ಕೊಂದ ಪತಿ: ಪ್ರೀತಿಕೊಂದ ಕೊಲೆಗಾರನಿಗೆ ಶೋಧ

ಹತ್ಯೆ ಮಾಡಿ ಚಂದ್ರದ್ರೋಣ ಪರ್ವತದ ಅರಣ್ಯದಲ್ಲಿದ್ದ ಅವಿನಾಶ್​ಗಾಗಿ 8 ಗಂಟೆಗಳ ಕಾಲ ನಿರಂತರವಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿಯನ್ನ ರಕ್ಷಿಸಿ ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ತವರುಮನೆ ವಿಚಾರವಾಗಿ ಹತ್ಯೆ ಮಾಡಿದ್ದಾಗಿ ಅವಿನಾಶ್ ಒಪ್ಪಿಕೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.