ಮಂಗಳೂರು: ಕಾಡಾನೆ ಪತ್ತೆ ಕಾರ್ಯಾಚರಣೆ ವೇಳೆ ವಾಹನಗಳ ಮೇಲೆ ಕಲ್ಲು ತೂರಾಟ, 7 ಮಂದಿ ಅರೆಸ್ಟ್

| Updated By: ಆಯೇಷಾ ಬಾನು

Updated on: Feb 24, 2023 | 3:26 PM

ಕಾಡಾನೆ ಪತ್ತೆ ಕಾರ್ಯಾಚರಣೆ ವೇಳೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದ್ದು ಈ ಪ್ರಕರಣ ಸಂಬಂಧ 7 ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು: ಕಾಡಾನೆ ಪತ್ತೆ ಕಾರ್ಯಾಚರಣೆ ವೇಳೆ ವಾಹನಗಳ ಮೇಲೆ ಕಲ್ಲು ತೂರಾಟ, 7 ಮಂದಿ ಅರೆಸ್ಟ್
ಕಾಡಾನೆ ಪತ್ತೆ ಕಾರ್ಯಾಚರಣೆ ವೇಳೆ ವಾಹನಗಳ ಮೇಲೆ ಕಲ್ಲು ತೂರಾಟ
Follow us on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಮೀನಾಡಿಯಲ್ಲಿ ಆನೆ ದಾಳಿ(Elephant Attack) ಕೇಸ್​ಗೆ ಸಂಬಂಧಿಸಿ ಕಾಡಾನೆ ಪತ್ತೆ ಕಾರ್ಯಾಚರಣೆ ವೇಳೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದ್ದು ಈ ಪ್ರಕರಣ ಸಂಬಂಧ 7 ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಕಡಬ ಗ್ರಾಮದ ಉಮೇಶ್, ರಾಜೇಶ್, ಜನಾರ್ದನ ರೈ, ಕೋಕಿಲ ನಂದ, ತೀರ್ಥಕುಮಾರ, ಗಂಗಾಧರ ಗೌಡ, ಅಜಿತ್ ಕುಮಾರ್ ಬಂಧಿತರು.

ಕಾಡಾನೆ ಪತ್ತೆ ಕಾರ್ಯಾಚರಣೆಯಲ್ಲಿದ್ದ ಅರಣ್ಯಾಧಿಕಾರಿಗಳು, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ದಾಂಧಲೆ ಮಾಡಲಾಗಿತ್ತು. ಹಾಗೂ ಪೊಲೀಸ್, ಅರಣ್ಯ ಇಲಾಖೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಒಂದು ಆನೆಯನ್ನಷ್ಟೇ ಹಿಡಿದಿದ್ದೀರೀ ಎಂದು ಆರೋಪಿಸಿ ಕಲ್ಲು ತೂರಾಟ ನಡೆದಿದೆ. ಕಾರ್ಯಾಚರಣೆ ನಿಲ್ಲಿಸಿಲ್ಲ. ನಾಳೆ ಬರುತ್ತೇವೆ ಎಂದರೂ ಕೇಳದೇ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಎರಡು ಪೊಲೀಸ್ ಜೀಪ್, ಅರಣ್ಯ ಇಲಾಖೆಯ ಒಂದು ಜೀಪ್, ರೇಂಜರ್ ಒಬ್ಬರ ಬ್ರೀಝಾ ಗಾಡಿಗಳು ಜಖಂ ಆಗಿವೆ. ಡಿವೈಎಸ್ಪಿ ಸೇರಿ ಅರಣ್ಯ ಇಲಾಖೆಗೆ ಸೇರಿದ ವಾಹನಗಳ ಗಾಜು ಪುಡಿ ಪುಡಿಯಾಗಿದೆ.

3 ದಿನಗಳ ಕಾರ್ಯಚರಣೆಯಲ್ಲಿ ನಿನ್ನೆ(ಫೆ.23) ಒಂಟಿ ಸಲಗ ಸೆರೆಯಾಗಿತ್ತು. 5 ಸಾಕಾನೆಗಳಿಂದ, ನುರಿತ ತಜ್ಞ ವೈದ್ಯರು, ಅರಣ್ಯ ಅಧಿಕಾರಿಗಳು, ಶಾರ್ಪ್ ಶೂಟರ್ ಗಳಿಂದ ಕಾರ್ಯಾಚರಣೆ ಮುಂದುವರೆದಿದೆ. ಕಡಬದ ಕೊಂಬಾರು ಎಂಬಲ್ಲಿನ ಮಂಡೆಕರ ಪ್ರದೇಶದ ದಟ್ಟಾರಣ್ಯದಲ್ಲಿ ನಿನ್ನೆ ಒಂದು ಕಾಡಾನೆ ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ: ಮಂಗಳೂರು: ಇಬ್ಬರನ್ನು ಬಲಿಪಡೆದ ಕಾಡಾನೆ ಸೆರೆಗೆ ‘ಆಪರೇಷನ್ ಎಲಿಫೆಂಟ್’ ಕಾರ್ಯಾಚರಣೆ ಶುರು

ಘಟನೆ ಹಿನ್ನೆಲೆ

ಪೇರಡ್ಕ ಸೊಸೈಟಿ ಸಿಬ್ಬಂದಿಯಾಗಿರುವ ರಂಜಿತಾ ಎಂದಿನಂತೆ ತನ್ನ ಕೆಲಸಕ್ಕೆ ಹೊರಟ್ಟಿದ್ದಳು. ಆದರೆ ಮಾರ್ಗಮಧ್ಯದಲ್ಲಿ ಎದುರಿಗೆ ಆನೆ ಪ್ರತ್ಯಕ್ಷವಾಗಿದೆ. ಇದರಿಂದ ಭಯಗೊಂಡ ರಂಜಿತಾ ಕಿರುಚುತ್ತಾ ಓಡಲು ಆರಂಭಿಸಿದ್ದಾರೆ. ಮನೆಯ ಸಮೀಪ ಯುವತಿ ಕಿರುಚುವ ಧ್ವನಿ ಕೇಳಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ರಮೇಶ್​ ರೈ ಕೂಡ ಮನೆಯಿಂದ ಹೊರ ಬಂದಿದ್ದಾರೆ. ಆದರೆ ಅಲ್ಲೇ ಇದ್ದ ಇನ್ನೊಂದು ಆನೆ ರಮೇಶ್​ ರೈನನ್ನು ಬೆನ್ನಟ್ಟಿದೆ. ಆನೆಯ ಅಟ್ಟಹಾಸಕ್ಕೆ ರಮೇಶ್​ ರೈ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ರೆ ಇತ್ತ ಆನೆ ದಾಳಿಗೆ ಒಳಗಾದ ರಂಜಿತಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.

ಮೀನಾಡಿ ಪ್ರದೇಶ ಅರಣ್ಯ ಸಂರಕ್ಷಿತ ಪ್ರದೇಶವಲ್ಲದೇ ಇದ್ದರೂ ಸಹ ಕಳೆದ ಅನೇಕ ದಿನಗಳಿಂದ ಇಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಪ್ರತಿನಿತ್ಯ ವಿದ್ಯಾರ್ಥಿಗಳು ಓಡಾಡುವ ಈ ಮಾರ್ಗದಲ್ಲಿ ಸಾಕಷ್ಟು ಜನರಿಗೆ ಏಳೆಂಟು ಆನೆ ಕಾಣ ಸಿಕ್ಕಿದೆ. ಈ ಬಗ್ಗೆ ಬೇಸತ್ತಿದ್ದ ಜನರು ಅರಣ್ಯ ಇಲಾಖೆಗೆ ದೂರನ್ನೂ ನೀಡಿದ್ದರು. ಆದರೆ ಅರಣ್ಯ ಇಲಾಖೆಯ ಜಾಣ ಮೌನದಿಂದಾಗಿ ಇಬ್ಬರು ಅಮಾಯಕರು ಜೀವ ಹೋಗಿದೆ. ಈ ಘಟನೆ ಬೆಳಕಿಗೆ ಬರ್ತಿದ್ದಂತೆ ತಂಡೋಪತಂಡವಾಗಿ ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡುವವರೆಗೂ ನಾವು ಮೃತದೇಹ ತೆಗೆಯಲು ಬಿಡೋದಿಲ್ಲ ಅಂತಾ ಪ್ರತಿಭಟನೆ ನಡೆಸಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:26 pm, Fri, 24 February 23