Mangaluru: ಮಹಿಳಾ ಸಿಬ್ಬಂದಿಗಳಿಗೆ ಕಿರುಕುಳ; ವೈದ್ಯ ಡಾ.ರತ್ನಾಕರ್ ಪೊಲೀಸರ ವಶಕ್ಕೆ
ಟಿವಿ9 ಡಾ. ರತ್ನಾಕರ್ನ ರಂಗಿನಾಟ ಬಯಲು ಮಾಡಿತ್ತು. ರತ್ನನ್ ರಂಗೀನ್ ಪ್ರಪಂಚ ಕಾರ್ಯಕ್ರಮದಡಿ ವರದಿ ಮಾಡಿತ್ತು. ಇದೀಗ ರತ್ನಾಕರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು: ಇಲ್ಲಿನ ಸರ್ಕಾರಿ ವೈದ್ಯ ಡಾ. ರತ್ನಾಕರ್ ತನ್ನ ಸಹೋದ್ಯೋಗಿಗಳಿಗೆ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ವೈದ್ಯ ರತ್ನಾಕರ್‌ನನ್ನು ಇಂದು (ನವೆಂಬರ್ 26) ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ನಡೆಸಲಾಗಿದೆ. ಟಿವಿ9 ಡಾ. ರತ್ನಾಕರ್ನ ರಂಗಿನಾಟ ಬಯಲು ಮಾಡಿತ್ತು. ರತ್ನನ್ ರಂಗೀನ್ ಪ್ರಪಂಚ ಕಾರ್ಯಕ್ರಮದಡಿ ವರದಿ ಮಾಡಿತ್ತು. ಇದೀಗ ರತ್ನಾಕರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆ ದೂರಿನ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರಿಂದ ಡಾ. ರತ್ನಾಕರ್ ವಿಚಾರಣೆ ನಡೆಸಲಾಗುತ್ತಿದೆ.
ಸರ್ಕಾರಿ ಕಚೇರಿಯಲ್ಲಿ ರತ್ನಾಕರ್ ನಿತ್ಯ ಮೋಜು ಮಸ್ತಿ ಮಾಡುತ್ತಿದ್ದರು. ಕೇವಲ ಚೆಲ್ಲಾಟ ಮಾತ್ರವಲ್ಲ ಎಲ್ಲರಿಗೂ ಮನರಂಜನೆ ನೀಡುತ್ತಿದ್ದರು. ರತ್ನಾಕರ್ ಎಲ್ಲರಿಗೂ ಎಂಟರ್ಟೈನ್ಮೆಂಟ್ ಮಾಸ್ಟರ್ ಆಗಿದ್ದರು. ಕಚೇರಿಯ ಕೆಲಸದ ಸಮಯದಲ್ಲಿ ರತ್ನಾಕರ್ ಡ್ಯಾನ್ಸ್ ಮಾಡುತ್ತಿದ್ದರು. ಡ್ಯಾನ್ಸ್ ಮಾಡುತ್ತ ಲಲನೆಯರನ್ನು ರಂಜಿಸುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ಸಹೋದ್ಯೋಗಿಗಳಿಗೆ ವೈದ್ಯ ಡಾ.ರತ್ನಾಕರ್ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಇಂದು ದಕ್ಷಿಣ ಕನ್ನಡ ಡಿಸಿ ಡಾ.ಕೆ.ವಿ. ರಾಜೇಂದ್ರ ಹೇಳಿಕೆ ನೀಡಿದ್ದರು. ಸಂತ್ರಸ್ತ ಮಹಿಳಾ ಸಿಬ್ಬಂದಿ ದೂರು ನೀಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಡಾ. ರತ್ನಾಕರ್ ವಿರುದ್ಧ ಫೋಟೋ ದೂರುಗಳು ಬಂದಿತ್ತು. ಇಲಾಖೆಯ ಆಂತರಿಕ ದೂರು ಸಮಿತಿ ಮೂಲಕ ತನಿಖೆ ಮಾಡಿದ್ದೆವು. ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯಿಂದ ತನಿಖೆ ಆಗಿದೆ. ತನಿಖೆ ವೇಳೆ ಡಾ. ರತ್ನಾಕರ್ ಅನುಚಿತ ವರ್ತನೆ ಸಾಬೀತಾಗಿದೆ ಎಂದು ಹೇಳಿದ್ದಾರೆ.
ರತ್ನಾಕರ್ ವಿರುದ್ಧ ಕ್ರಮಕ್ಕೆ ಆರೋಗ್ಯ ಇಲಾಖೆಗೆ ಶಿಫಾರಸು ಮಾಡಲಾಗಿದೆ. ನವೆಂಬರ್ 8ರಂದು ಆರೋಗ್ಯ ಇಲಾಖೆ ಅಮಾನತುಗೊಳಿಸಿದೆ. ಈ ಮಧ್ಯೆ, ಸಂತ್ರಸ್ತ ಮಹಿಳಾ ಸಿಬ್ಬಂದಿಯಿಂದ ನೇರ ದೂರು ಬಂದಿಲ್ಲ. ಕಚೇರಿಯಲ್ಲಿರುವ ಬೇರೆ ಮಹಿಳಾ ಸಿಬ್ಬಂದಿಯಿಂದ ದೂರು ಬಂದಿದೆ. ವೈದ್ಯನ ವಿರುದ್ಧ ಅನಾಮಧೇಯ ವ್ಯಕ್ತಿಗಳು ದೂರುನೀಡಿದ್ದರು. ಈ ಹಿನ್ನೆಲೆ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಲು ತಡವಾಗಿದೆ ಎಂದು ಟಿವಿ9ಗೆ ದಕ್ಷಿಣ ಕನ್ನಡ ಡಿಸಿ ಡಾ.ಕೆ.ವಿ.ರಾಜೇಂದ್ರ ಹೇಳಿಕೆ ನೀಡಿದ್ದರು.
ಟಿವಿ9ನಲ್ಲಿ ಇಂದು ಪ್ರಸಾರವಾದ ವರದಿ ಗಮನಾರ್ಹ: ಎನ್. ಶಶಿಕುಮಾರ್ ಸಹೋದ್ಯೋಗಿಗಳಿಗೆ ವೈದ್ಯ ಡಾ.ರತ್ನಾಕರ್ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಟಿವಿ9ನಲ್ಲಿ ಇಂದು ಪ್ರಸಾರವಾದ ವರದಿ ಗಮನಾರ್ಹ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿಕೆ ನೀಡಿದ್ದಾರೆ. ಟಿವಿ9ನಲ್ಲಿ ವರದಿ ಬಳಿಕ ಮಹಿಳಾ ಸಂಘಟನೆಗಳಿಂದ ದೂರು ಬಂದಿದೆ. ದೂರು ಆಧರಿಸಿ ವೈದ್ಯ ಡಾ. ರತ್ನಾಕರ್‌ನನ್ನ ವಶಕ್ಕೆ ಪಡೆದಿದ್ದೇವೆ. ಸಂತ್ರಸ್ತೆ ದೂರು ನೀಡದ ಹಿನ್ನೆಲೆ ಕಾನೂನು ಸಲಹೆ ಪಡೆದಿದ್ದೇವೆ. ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಬ್ಬಂದಿ ಜತೆ ಠಾಣೆಯ ಇನ್ಸ್‌ಪೆಕ್ಟರ್ ರೇವತಿ ಮಾತಾಡ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಂಗಳೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ಪೊಲೀಸರ ದಾಳಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಓರ್ವ ಯುವತಿ ರಕ್ಷಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ಅಬ್ದುಲ್ ಹಫೀಜ್, ಕಾಟಿಪಳ್ಳದ ರಮ್ಲತ್ ಸೆರೆ ಆಗಿದ್ದಾರೆ. ಬಂಧಿತರಿಂದ ನಗದು ಹಾಗೂ ಕಾರು, ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಹಿಂಜಾವೇ ಮುಖಂಡ ಜಗದೀಶ್ ಕಾರಂತ್ ವಿರುದ್ಧ ಬೆದರಿಕೆ ಆರೋಪ; ಮಂಗಳೂರು ಜಿಲ್ಲಾಧಿಕಾರಿಯಿಂದ ದೂರು ದಾಖಲು
Published On - 7:04 pm, Fri, 26 November 21