ಸುಹಾಸ್ ಹತ್ಯೆಕೋರರನ್ನು ಸುಮ್ಮನೆ ಬಿಡುವ ಮಾನಸಿಕತೆ ಯಾರಲ್ಲೂ ಇಲ್ಲ: ಸಿಟಿ ರವಿ ಎಚ್ಚರಿಕೆ

ಮಂಗಳೂರಿನ ಬಜಪೆಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಹತ್ಯೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಮತ್ತು ಹಿಂದೂ ಮುಖಂಡರು ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಸಿಟಿ ರವಿ ಅವರು ಈ ಹತ್ಯೆ ಪೂರ್ವಯೋಜಿತ ಷಡ್ಯಂತ್ರ ಎಂದು ಆರೋಪಿಸಿ ಎನ್‌ಐಎ ತನಿಖೆಗೆ ಆಗ್ರಹಿಸಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಈ ಘಟನೆಯಿಂದ ಕರಾವಳಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂಬ ಆತಂಕ ವ್ಯಕ್ತವಾಗಿದೆ.

ಸುಹಾಸ್ ಹತ್ಯೆಕೋರರನ್ನು ಸುಮ್ಮನೆ ಬಿಡುವ ಮಾನಸಿಕತೆ ಯಾರಲ್ಲೂ ಇಲ್ಲ: ಸಿಟಿ ರವಿ ಎಚ್ಚರಿಕೆ
ಸಿಟಿ ರವಿ, ಸುಹಾಸ್​ ಶೆಟ್ಟಿ
Updated By: ವಿವೇಕ ಬಿರಾದಾರ

Updated on: May 02, 2025 | 7:10 PM

ಮಂಗಳೂರು, ಮೇ 02: ಮಂಗಳೂರಿನ (Mangaluru) ಬಜಪೆಯಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್​ ಶೆಟ್ಟಿ (Suhas Shetty) ಅವರ ಭೀಕರ ಹತ್ಯೆ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕ್ರೋಶ ಕಿಚ್ಚು ಹಚ್ಚಿಕೊಂಡಿದೆ. ಸುಹಾಸ್​ ಶೆಟ್ಟಿ ಅವರ ಮನೆಗೆ ಬಿಜೆಪಿ ಮತ್ತು ಅನೇಕ ಹಿಂದೂ ಮುಖಂಡರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ವಿಧಾನ ಪರಿಷತ್ ಸದಸ್ಯ ಸಿಟಿ ರವಿ (CT Ravi) ಸುಹಾಸ್​ ಶೆಟ್ಟಿ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಬಳಿಕ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸುಹಾಸ್​ ಹತ್ಯೆ ಪೂರ್ವ ಯೋಜಿತವಾದ ಷಡ್ಯಂತ್ರ. ಸುಹಾಸ್ ಶೆಟ್ಟಿ ಹತ್ಯೆಕೋರರನ್ನು ಸುಮ್ಮನೆ ಬಿಡುವ ಮಾನಸಿಕತೆ ಯಾರಲ್ಲೂ ಇಲ್ಲ. ಸುಹಾಸ್ ಶೆಟ್ಟಿ ಸಾವು ವ್ಯರ್ಥ ಆಗುವುದಿಲ್ಲ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ತಾತ್ಕಾಲಿಕವಾಗಿ ಈ ಷಡ್ಯಂತ್ರದಲ್ಲಿ ಅವರು ಯಶಸ್ವಿಯಾಗಿದ್ದಾರೆ. ಒಂದು ತಿಂಗಳ ಮೊದಲೇ ಪೋಸ್ಟ್ ಹಾಕುತ್ತಾರೆ. ಯಾಕೆ ಪೊಲೀಸರು ರಕ್ಷಣೆ ಕೊಟ್ಟಿಲ್ಲ. ಆತ್ಮರಕ್ಷಣೆಗೆ ಇದ್ದ ಆಯುಧವನ್ನು ಪೊಲೀಸರು ತೆಗೆಸಿದ್ದಾರೆ. ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕೆಂದರೇ ನಾವು ತಯಾರಿದ್ದೇವೆ. ಸುಹಾಸ್ ಶೆಟ್ಟಿ ಸಾವು ವ್ಯರ್ಥವಾಗುವುದಿಲ್ಲ ಎಂದು ಹೇಳಿದರು.

ಸತ್ತವರು ಅನ್ಯಕೋಮಿನವರಾಗಿದ್ದರೆ ಪರಿಹಾರ ಕೊಡುತ್ತಿದ್ದವರು, ಕಣ್ಣೀರು ಹಾಕುತ್ತಿದ್ದವರು ಈಗ ಎಲ್ಲಿದ್ದಾರೆ? ಉಸ್ತುವಾರಿ ಸಚಿವರು ಎಲ್ಲಿದ್ದಾರೆ ? ಕುಟುಂಬಕ್ಕೆ ಸಾಂತ್ವನ ಹೇಳಬೇಕಾಗಿತ್ತು. ಅವರ ಸಾಂತ್ವನ ನಂಬಿಕೊಂಡು ನಾವಿಲ್ಲ. ಇಲ್ಲಿ ದೇಶ ಭಕ್ತರಂತೆ ದೇಶದ್ರೋಹಿಗಳು ಸಹ ಗಟ್ಟಿಯಾಗಿದ್ದಾರೆ. ಇದರ ತನಿಖೆಯನ್ನು ಎನ್​ಐಎಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್

ಹೊರಗಿನ ಶತ್ರುಗಳನ್ನು ಸೈನಿಕರು ಮಟ್ಟ ಹಾಕುತ್ತಾರೆ. ಆದರೆ, ದೇಶದ ಒಳಗಿರುವ ಶತ್ರುಗಳನ್ನು ಸರ್ಕಾರದ ಜೊತೆ ಜನ ಮಟ್ಟ ಹಾಕಬೇಕು. ಈ ಹತ್ಯೆಯ ಹಿಂದೆ ದೊಡ್ಡ ತಂಡವೆ ಇರಬಹುದು. ಈಗಾಗಲೇ ಪೊಲೀಸರು ಆರೋಪಿಗಳನ್ನು ಬಂಧಿಸಬೇಕಿತ್ತು ಎಂದರು.

5 ಲಕ್ಷ ರೂ. ಪರಿಹಾರ ಘೋಷಿಸಿದ ಯತ್ನಾಳ್​

ಸುಹಾಸ್ ಶೆಟ್ಟಿ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂಪಾಯಿ ಕೊಡುತ್ತೇನೆ. ಹಿಂದೂ ಧರ್ಮ ಉಳಿಸಲು ಹೋರಾಟ ನಡೆಸಿದವರನ್ನು, ಮುಸ್ಲಿಂ ಭಯೋತ್ಪಾದಕರು ಕೊಂದು ಹಾಕುತ್ತಿದ್ದಾರೆ. ಇಂತಹವರ ಮೇಲೆ ಗುಂಡು ಹಾರಿಸುವ ಕೆಲಸ ಆಗಬೇಕಿದೆ. ಇಲ್ಲದಿದ್ದರೆ ದೇಶಕ್ಕಾಗಿ ದುಡಿಯುವವರಿಗೆ ಭಯದ ವಾತಾವರಣ ನಿರ್ಮಾಣವಾಗುತ್ತೆ ಎಂದು ಶಾಸಕ ಬಸನಗೌಡ ಪಾಟೀಲ್​ ಹೇಳಿದ್ದಾರೆ.

ಇದನ್ನೂ ಓದಿ: ಸುಹಾಸ್​ ಶೆಟ್ಟಿ ಕೊಲೆ ಬೆನ್ನಲ್ಲೇ ಮಂಗಳೂರಿನ ಸುತ್ತಮುತ್ತ 3 ಮಂದಿಗೆ ಚಾಕು ಇರಿತ

ಬಿಜೆಪಿ ಸರ್ಕಾರದಲ್ಲೂ ಕಾರ್ಯಕರ್ತರಿಗೆ ರಕ್ಷಣೆ‌ ‌ಇರಲಿಲ್ಲ. ಹಿಂದೂ ಯುವಕರು ರಾತ್ರಿ ಹೊತ್ತು ಒಬ್ಬಂಟಿಯಾಗಿ ಓಡಾಡಬೇಡಿ. ಕರಾವಳಿಯಲ್ಲಿ ಆತ್ಮರಕ್ಷಣೆಗೆ ಆಯುಧ ಇಟ್ಟುಕೊಳ್ಳುವುದು ಅಗತ್ಯ. ಹಿಂದೂ ರಾಜ್ಯದಲ್ಲಿ ಬದುಕಲು ಕಷ್ಟವಾಗುತ್ತಿದೆ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ