ತಲಪಾಡಿ ಗ್ರಾ.ಪಂ. ಚುನಾವಣೆ: ಬಿಜೆಪಿ ಬೆಂಬಲಿತ ಸದಸ್ಯರಿಂದ ಎಸ್​ಡಿಪಿಐಗೆ ದಕ್ಕಿದ ಅಧ್ಯಕ್ಷ ಸ್ಥಾನ

ಬಿಜೆಪಿಯ ತತ್ವ ಸಿದ್ಧಾಂತ ಹಾಗೂ ಎಸ್​ಡಿಪಿಐ ತತ್ವ ಸಿದ್ಧಾಂತವೇ ಬೇರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿಂದಾಗಿ ಅಧ್ಯಕ್ಷ ಸ್ಥಾನ ಎಸ್​ಡಿಪಿಐ ಪಾಲಾಗಿದೆ.

ತಲಪಾಡಿ ಗ್ರಾ.ಪಂ. ಚುನಾವಣೆ: ಬಿಜೆಪಿ ಬೆಂಬಲಿತ ಸದಸ್ಯರಿಂದ ಎಸ್​ಡಿಪಿಐಗೆ ದಕ್ಕಿದ ಅಧ್ಯಕ್ಷ ಸ್ಥಾನ
ಬಿಜೆಪಿ ಬೆಂಬಲಿತ ಸದಸ್ಯರ ಅಡ್ಡ ಮತದಾನದಿಂದ ತಪಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಎಸ್​ಡಿಪಿಐ ಪಾಲು
Edited By: Rakesh Nayak Manchi

Updated on: Aug 10, 2023 | 4:37 PM

ಮಂಗಳೂರು, ಆಗಸ್ಟ್ 10: ಬಿಜೆಪಿ ತತ್ವ ಸಿದ್ಧಾಂತ ಮತ್ತು ನಿಷೇಧಿತ ಪಿಎಫ್​ಐ ರಾಜಕೀಯ ಪಕ್ಷ ಎಸ್​ಡಿಪಿಐ (SDPI) ತತ್ವ ಸಿದ್ಧಾಂತವೇ ಬೇರೆ. ಆದರೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಳ್ಳಾಲ ತಾಲೂಕಿನ ತಲಪಾಡಿ (Talapady) ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನವು ಬಿಜೆಪಿ (BJP) ಬೆಂಬಲಿತ ಸದಸ್ಯರ ಅಡ್ಡಮತದಾನದಿಂದ ಎಸ್​ಡಿಪಿಐ ಪಾಲಾಗಿದೆ.

13 ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 10 ಎಸ್​ಡಿಪಿಐ ಬೆಂಬಲಿತ ಸದಸ್ಯರು ಹಾಗೂ ಏಕೈಕ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿ ಇರುವ ತಲಪಾಡಿ ಗ್ರಾಮ ಪಂಚಾಯತ್​ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದೆ.

ಇದನ್ನೂ ಓದಿ: ಮಂಗಳೂರಿನ ಹಲವೆಡೆ ಮತ್ತೆ ಕೊಳೆತ ಮೊಟ್ಟೆ ಪೂರೈಕೆ; ಗರ್ಭಿಣಿ, ಮಕ್ಕಳು ಅಸ್ವಸ್ಥ

ಅಧ್ಯಕ್ಷ ಸ್ಥಾನದ ಚುನಾವಣೆ ಮತ ಎಣಿಕೆ ವೇಳೆ ಬಿಜೆಪಿ ಬೆಂಬಲಿತ ಇಬ್ಬರು ಸದಸ್ಯರು ಎಸ್​ಡಿಪಿಐಗೆ ಅಡ್ಡ ಮತದಾನ ಹಾಕಿರುವುದು ತಿಳಿದುಬಂದಿದೆ. ಬಿಜೆಪಿ ಹಾಗೂ ಎಸ್​ಡಿಪಿಐ ಸಮಬಲ ಸಾಧಿಸಿದ ಹಿನ್ನೆಲೆ ಅಧ್ಯಕ್ಷ ಸ್ಥಾನ ಯಾರಿಗೆ ಎಂಬ ಕುತೂಹಲವನ್ನೂ ಕೆರಳಿಸಿತು. ನಂತರ ನಡೆದ ಚೀಟಿ ಎತ್ತುವಿಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನ ಎಸ್​ಡಿಪಿಐ ಬೆಂಬಲಿತ ಸದಸ್ಯನಿಗೆ ಒಲಿದೆ.

ಅದರಂತೆ, ತಲಪಾಡಿ ಗ್ರಾಮ ಪಂಚಾಯತ್​ನ ಅಧ್ಯಕ್ಷರಾಗಿ ಎಸ್​ಡಿಪಿಐ ಬೆಂಬಲಿತ ಟಿ.ಇಸ್ಮಾಯಿಲ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬೆಜೆಪಿ ಬೆಂಬಲಿತ ಪುಷ್ಪಾವತಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಏಕೈಕ ಸದಸ್ಯ ಹಾಗೂ ಎಸ್​ಡಿಪಿಐ ಬೆಂಬಲಿತ ಓರ್ವ ಸದಸ್ಯ ಗೈರಾಗಿದ್ದರೂ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ಎಸ್​ಡಿಪಿಐ ಗೆದ್ದುಕೊಂಡಿತು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us