AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಶಾಸಕರೊಬ್ಬರ ಜೊತೆಗಿನ ಅಶ್ಲೀಲ ಫೋಟೋ ವೈರಲ್: ತಮ್ಮ ಫೋಟೋ ಬಗ್ಗೆ ಸ್ಪಷ್ಟನೆ ಕೊಟ್ಟ ಮಹಿಳೆ

ಪುತ್ತೂರು ಬಿಜೆಪಿ ಶಾಸಕ ಹಾಗೂ ಮಹಿಳೆಯೋರ್ವರ ಫೋಟೋ ವೈರಲ್ ಆಗಿದೆ. ಶಾಸಕರ ಜೊತೆಗಿನ ಫೋಟೋ ವೈರಲ್ ಬಗ್ಗೆ ಸ್ವತಃ ಫೋಟೋದಲ್ಲಿರುವ ಮಹಿಳೆಯೇ ಸ್ಪಷ್ಟನೆ ಕೊಟ್ಟಿದ್ದಾರೆ.

ಬಿಜೆಪಿ ಶಾಸಕರೊಬ್ಬರ ಜೊತೆಗಿನ ಅಶ್ಲೀಲ ಫೋಟೋ ವೈರಲ್: ತಮ್ಮ ಫೋಟೋ ಬಗ್ಗೆ ಸ್ಪಷ್ಟನೆ ಕೊಟ್ಟ ಮಹಿಳೆ
ರಮೇಶ್ ಬಿ. ಜವಳಗೇರಾ
|

Updated on:Apr 06, 2023 | 2:30 PM

Share

ಮಂಗಳೂರು: ವಿಧಾನಸಭೆ ಚುನಾವಣೆ ಹೊತ್ತಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಶಾಸಕ ಸಂಜೀವ್ ಮಠಂದೂರು ಮಹಿಳೆ ಜೊತೆ ಇರುವ ಅಶ್ಲೀಲ ಫೋಟೋಗಳು ವೈರಲ್ ಆಗುತ್ತಿದ್ದ, ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಶಾಸಕ ಸಂಜೀವ್ ಮಠಂದೂರು ಉಪ್ಪಿನಂಗಡಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಇದರ ಬೆನಲ್ಲೇ ಇದೀಗ ಫೋಟೋದಲ್ಲಿ ಇರುವ ಮಹಿಳೆ ಸಹ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: BJP MLA Photo Viral: ಬಿಜೆಪಿ ಶಾಸಕರೊಬ್ಬರು ಮಹಿಳೆ ಜೊತೆ ಇರುವ ಅಶ್ಲೀಲ ಫೋಟೊ ವೈರಲ್

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಇಂದು (ಏಪ್ರಿಲ್ 06) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಹಿಳೆ, ನನ್ನ ವೈಯಕ್ತಿ ಫೋಟೋಗಳನ್ನು ಪುತ್ತೂರಿನ ಶಾಸಕರ ಫೋಟೋ ಜೊತೆ ಜೋಡಿಸಿದ್ದು, ಎಡಿಟ್ ಮಾಡಿದ ಫೋಟೋವನ್ನು ವೈರಲ್ ಮಾಡುತ್ತಿದ್ದಾರೆ. ಇದರಿಂದ ನನ್ನ ಹಾಗೂ ನನ್ನ ಕುಟುಂಬಕ್ಕೆ ತುಂಬಾ ನೋವಾಗಿದೆ. ಓರ್ವ ಮಹಿಳೆ ಮೇಲೆ ಈ ರೀತಿ ದೌರ್ಜನ್ಯ ಎಸಗುತ್ತಿದ್ದಾರೆ. ಶಾಸಕರಿಗೂ ನನಗೂ ಸಂಬಂಧವಿಲ್ಲ. ಆದರೂ ಫೋಟೋ ಎಡಿಟ್ ಮಾಡಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈಗ ನನಗೆ ಬೆದರಿಕೆ ಕರೆಗಳು ಬರುತ್ತಿವೆ‌. ಶಾಸಕರನ್ನು ಭೇಟಿ ಮಾಡುವ ಪ್ರಸಂಗ ಈ ಹಿಂದೆ ಬಂದಿರಲೇ ಇಲ್ಲ. ನನ್ನ ಫೋಟೋಗಳನ್ನು ತೆಗೆದುಕೊಂಡು ಎಡಿಟ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಅದಕ್ಕೆ ನಾನು ಹೆದರುವ ಪ್ರಶ್ನೆಯೇ ಇಲ್ಲ. ಯಾಕಂದ್ರೆ ನಾನು ಯಾವುದೇ ತಪ್ಪು ಮಾಡಿಲ್ಲ. ಎಡಿಟ್ ಮಾಡುವ ಕೌಶಲ್ಯತೆ ಜನರಲ್ಲಿ ಇದೆ. ಆದ್ರೆ, ನನ್ನ ಫೋಟೋಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಈ ರೀತಿ ಎಡಿಟ್ ಮಾಡಿ ಓರ್ವ ಮಹಿಳೆ ವಿರುದ್ಧ ಇಷ್ಟೊಂದು ದೊಡ್ಡ ಮಟ್ಟದ ಆರೋಪ ಮಾಡುವುದು ಸರಿ ಅಲ್ಲ. ಹಾಗೇ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಯಾರು ಇದನೆಲ್ಲ ಮಾಡಿದ್ದಾರೆ ಅವರಿಗೆ ಸೂಕ್ತ ಶಿಕ್ಷೆ ಆಗಬೇಕೆಂದು ಮನವಿ ಮಾಡಿದರು.

ಶಾಸಕರಿಂದಲೂ ದೂರು

ಇನ್ನು ಮಹಿಳೆಯೊಂದಿಗೆ ತಮ್ಮ ಫೋಟೋ ವೈರಲ್ ಆಗುತ್ತಿದ್ದಂತೆಯೇ ಶಾಸಕ ಸಂಜೀವ್ ಮಠಂದೂರು ಸಹ ಈಗಾಗಲೇ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನನ್ನ ಎಡಿಟ್ ಫೋಟೋವನ್ನು  ವೈರಲ್ ಆಗುತ್ತಿದ್ದು,. ವೈರಲ್ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದರು. ಇನ್ನು ಉಪ್ಪಿನಂಗಡಿ ಪೊಲೀಸರು ಇನ್ಫಾರ್ಮೇಶನ್ ಟೆಕ್ನಾಲಜಿ ಆಕ್ಟ್ ಪ್ರಕಾರ ಎಫ್.ಐ.ಆರ್ ದಾಖಲು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:23 pm, Thu, 6 April 23