ಸಿಎಎ ವಿರೋಧಿಸಿ ಮಂಗಳೂರಿನಲ್ಲಿಂದು ಬೃಹತ್ ಪ್ರತಿಭಟನೆ, ರಸ್ತೆ ಮಾರ್ಗ ಬದಲು

ಮಂಗಳೂರು: ಪೌರತ್ವ ಕಾಯ್ದೆ ಕಿಚ್ಚು ದೇಶಾದ್ಯಂತ ಭುಗಿಲೆದ್ದಿದೆ. ಕಾಯ್ದೆ ವಿರುದ್ಧ ಎಷ್ಟು ಕಹಳೆ ಮೊಳಗಿದೆಯೋ, ಕಾಯ್ದೆ ಪರವೂ ಅಷ್ಟೆ ಸದ್ದು ಕೇಳ್ತಿದೆ. ಆದ್ರೀಗ, ಪೌರತ್ವ ಕಾಯ್ದೆ ವಿರೋಧಿ ಕಿಚ್ಚಿನಿಂದ ಅಲ್ಲೋಲ ಕಲ್ಲೋಲವಾಗಿದ್ದ ಮಂಗಳೂರಿನಲ್ಲಿ, ಇಂದು ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ತಯಾರಿ ನಡೆದಿದೆ. ಲಾಠಿ ಏಟು.. ಅಶ್ರುವಾಯುವಿನ ಮೊರೆತ.. ಗುಂಡೇಟಿನ ಸದ್ದು.. ಪೌರತ್ವ ಕಾಯ್ದೆ ವಿರುದ್ಧದ ಕಿಚ್ಚು, ಮಂಗಳೂರಿಗೆ ಮಂಗಳೂರನ್ನೇ ಕದಡಿಹಾಕಿತ್ತು. ನಿಷೇಧಾಜ್ಞೆ ನಡುವೆಯೂ ರಸ್ತೆಗಿಳಿದು, ದಾಂಧಲೆ ಮಾಡಿದವರ ಮೇಲೆ ಗೋಲಿಬಾರ್​​​ ನಡೆದಿತ್ತು. ಆದ್ರೀಗ, ಕಡಲನಗರಿಯಲ್ಲಿ ಮತ್ತೊಮ್ಮೆ […]

ಸಿಎಎ ವಿರೋಧಿಸಿ ಮಂಗಳೂರಿನಲ್ಲಿಂದು ಬೃಹತ್ ಪ್ರತಿಭಟನೆ, ರಸ್ತೆ ಮಾರ್ಗ ಬದಲು
Follow us
ಸಾಧು ಶ್ರೀನಾಥ್​
|

Updated on: Jan 15, 2020 | 10:16 AM

ಮಂಗಳೂರು: ಪೌರತ್ವ ಕಾಯ್ದೆ ಕಿಚ್ಚು ದೇಶಾದ್ಯಂತ ಭುಗಿಲೆದ್ದಿದೆ. ಕಾಯ್ದೆ ವಿರುದ್ಧ ಎಷ್ಟು ಕಹಳೆ ಮೊಳಗಿದೆಯೋ, ಕಾಯ್ದೆ ಪರವೂ ಅಷ್ಟೆ ಸದ್ದು ಕೇಳ್ತಿದೆ. ಆದ್ರೀಗ, ಪೌರತ್ವ ಕಾಯ್ದೆ ವಿರೋಧಿ ಕಿಚ್ಚಿನಿಂದ ಅಲ್ಲೋಲ ಕಲ್ಲೋಲವಾಗಿದ್ದ ಮಂಗಳೂರಿನಲ್ಲಿ, ಇಂದು ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ತಯಾರಿ ನಡೆದಿದೆ.

ಲಾಠಿ ಏಟು.. ಅಶ್ರುವಾಯುವಿನ ಮೊರೆತ.. ಗುಂಡೇಟಿನ ಸದ್ದು.. ಪೌರತ್ವ ಕಾಯ್ದೆ ವಿರುದ್ಧದ ಕಿಚ್ಚು, ಮಂಗಳೂರಿಗೆ ಮಂಗಳೂರನ್ನೇ ಕದಡಿಹಾಕಿತ್ತು. ನಿಷೇಧಾಜ್ಞೆ ನಡುವೆಯೂ ರಸ್ತೆಗಿಳಿದು, ದಾಂಧಲೆ ಮಾಡಿದವರ ಮೇಲೆ ಗೋಲಿಬಾರ್​​​ ನಡೆದಿತ್ತು. ಆದ್ರೀಗ, ಕಡಲನಗರಿಯಲ್ಲಿ ಮತ್ತೊಮ್ಮೆ ಪೌರತ್ವ ಕಾಯ್ದೆ ವಿರುದ್ಧ ಹೋರಾಟಕ್ಕೆ ಸಿದ್ಧತೆ ನಡೆದಿದೆ. ಕೇಂದ್ರದ ಕಾಯ್ದೆ ಖಂಡಿಸಿ, ಮುಸ್ಲಿಂ ಸಮುದಾಯ ಇಂದು ರಸ್ತೆಗಿಳಿಯುತ್ತಿದ್ದು, ಸಾರ್ವಜನಿಕರಿಗೂ ಇದರ ಬಿಸಿ ತಟ್ಟುತ್ತಿದೆ.

ಇಂದು ಮಂಗಳೂರಿನಲ್ಲಿ ಸಿಎಎ ವಿರುದ್ಧ ಬೃಹತ್ ಪ್ರತಿಭಟನೆ: ಹೌದು.. ಪೌರತ್ವ ವಿಧೇಯಕ ಕಾಯ್ದೆ ವಿರೋಧಿಸಿ ಇಂದು ಮಂಗಳೂರಿನಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಮುಸ್ಲಿಂ ಸೆಂಟ್ರಲ್​ ಕಮಿಟಿ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, 33 ಸಂಘಟನೆಗಳು ಕಣ್ಣೂರು ಮೈದಾನದಲ್ಲಿ ಪ್ರತಿಭಟನೆ ನಡೆಸಲಿವೆ. ಉಡುಪಿ, ದಕ್ಷಿಣ ಕನ್ನಡದಿಂದ ಜನರು ಪ್ರತಿಭಟನೆಗೆ ಆಗಮಿಸಲಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದೆ.

ಅಂದಹಾಗೇ, ಕಳೆದ ಡಿಸೆಂಬರ್​​ 19ರಂದೇ ಮಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ರು. ಆದ್ರೆ, ಆಗ ಪೊಲೀಸ್ರು ಅವಕಾಶ ನೀಡಿರಲಿಲ್ಲ. ನಂತರ, ಕಲ್ಲುತೂರಾಟ, ಲಾಠಿಚಾರ್ಜ್​​ ನಡೆದು ಗೋಲಿಬಾರ್​​​​​​ ಕೂಡ ಆಗ್ಬಿಟ್ಟಿತ್ತು. ಅಂದಿನಿಂದ, ಮುಂದೂಡತ್ತಲೇ ಬಂದಿದ್ದ ಪ್ರತಿಭಟನೆ ಇಂದು ನಡೆಯಲಿದೆ. ಕಣ್ಣೂರಿನ ಮಸೀದಿ ಪಕ್ಕದ ಆವರಣದಲ್ಲಿ ಇದಕ್ಕೆ ಸಿದ್ಧತೆ ನಡೆದಿದೆ.

ಇಂದಿನ ಪ್ರತಿಭಟನೆ ಹಿನ್ನೆಲೆಯಲ್ಲಿ ಸಂಚಾರ ಮಾರ್ಗದಲ್ಲೂ ಬದಲಾವಣೆ ಆಗಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ತನಕ, ಬೆಂಗಳೂರಿಂದ ಮಂಗಳೂರಿಗೆ ಸಾಗುವ ವಾಹನಗಳ ಸಂಚಾರ ಮಾರ್ಗವನ್ನ ಬದಲಿಸಲಾಗಿದೆ.

ಬೆಂಗಳೂರು-ಮಂಗಳೂರು ಸಂಚಾರ ಮಾರ್ಗ ಬದಲು: ಬೆಂಗಳೂರಿನಿಂದ ಮಂಗಳೂರಿನತ್ತ ಸಾಗುವ ವಾಹನಗಳು, ಮೆಲ್ಕಾರ್, ಕೊಣಾಜೆ, ತೊಕ್ಕೊಟ್ಟು ಮೂಲಕ ತೆರಳಲಿವೆ. ಹಾಗೇ, ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಾಗುವ ವಾಹನಗಳು, ಪಂಪ್‌ವೆಲ್, ತೊಕ್ಕೊಟ್ಟು, ಕೊಣಾಜೆ, ಬಿ.ಸಿ.ರೋಡ್ ಮೂಲಕ ರಾಜಧಾನಿಯತ್ತ ಹೋಗಲಿವೆ. ಇನ್ನು, ಉಡುಪಿಯಿಂದ ಬೆಂಗಳೂರಿಗೆ ತೆರಳುವ ವಾಹನಗಳು ಪಡುಬಿದ್ರೆ, ಕಾರ್ಕಳ, ಧರ್ಮಸ್ಥಳ, ಶಿರಾಡಿ ಮೂಲಕ ಹೋಗಲು ಪೊಲೀಸ್ರು ಸೂಚನೆ ನೀಡಿದ್ದಾರೆ. ಇಂದಿನ ಪ್ರತಿಭಟನೆಗೆ ಸುಮಾರು ಒಂದು ಲಕ್ಷದಷ್ಟು ಜನ ಸೇರುವ ಸಾಧ್ಯತೆ ಇದೆ. ಹೀಗಾಗೇ ಖಾಕಿ ಪಡೆ ಪ್ರತಿಭಟನೆಯನ್ನ ನಿಯಂತ್ರಿಸಲು ಭಾರಿ ಬಂದೋಬಸ್ತ್​​​​​​​​​​​​ ಹಾಕಿಕೊಂಡಿದೆ.

ಪ್ರತಿಭಟನೆಗೆ ಖಾಕಿ ಭದ್ರತೆ: ಒಟ್ಟು, ಮೂವರು ಎಡಿಜಿಪಿ, ಓರ್ವ ಐಜಿಪಿ, 11 ಎಸ್​​​ಪಿ ಮತ್ತು 18 ಎಎಸ್​​​​​ಪಿ, 100 ಡಿವೈಎಸ್​​​​ಪಿ, 300 ಇನ್ಸ್​​ಪೆಕ್ಟರ್​​​​ಗಳು, 500 ಪಿಎಸ್​​ಐಗಳು ಸೇರಿದಂತೆ ಒಟ್ಟು 5 ಸಾವಿರ ಪೊಲೀಸರನ್ನ ನಿಯೋಜಿಸಲಾಗಿದೆ.. ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ರಾಯಚೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳ ಪೊಲೀಸರನ್ನ ಭದ್ರತೆಗೆ ಬಳಸಿಕೊಳ್ಳಲಾಗ್ತಿದೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ