ಹಿಜಾಬ್ಗೆ ಅವಕಾಶ ಕೊಡಲಿಲ್ಲವೆಂದು ಟಿ.ಸಿ. ಪಡೆದ ವಿದ್ಯಾರ್ಥಿನಿ, ಹಿಜಾಬ್ಗಾಗಿ ಪಟ್ಟು ಹಿಡಿದು ಕಾಲೇಜತ್ತ ಮುಖ ಮಾಡದ 15 ವಿದ್ಯಾರ್ಥಿನಿಯರು

ಹಿಜಾಬ್ಗೆ ಅವಕಾಶ ಕೊಡಲಿಲ್ಲವೆಂದು ಟಿ.ಸಿ. ಪಡೆದ ವಿದ್ಯಾರ್ಥಿನಿ, ಹಿಜಾಬ್ಗಾಗಿ ಪಟ್ಟು ಹಿಡಿದು ಕಾಲೇಜತ್ತ ಮುಖ ಮಾಡದ 15 ವಿದ್ಯಾರ್ಥಿನಿಯರು
ಸಾಂಧರ್ಬಿಕ ಚಿತ್ರ

ಮುಸ್ಲಿಂ ವಿದ್ಯಾರ್ಥಿನಿ ತಾನು ಬೇರೆ ಕಾಲೇಜಿಗೆ ಸೇರಬೇಕು. ಹೀಗಾಗಿ ಟಿ.ಸಿ. ನೀಡಿ ಎಂದು ನಿನ್ನೆ ಕಾಲೇಜಿಗೆ ಅರ್ಜಿ ಸಲ್ಲಿಸಿದ್ದಳು. ಸದ್ಯ ಕಾಲೇಜು ಆಡಳಿತ ಮಂಡಳಿ ಇದಕ್ಕೆ ಒಪ್ಪಿ ಟಿ.ಸಿ. ನೀಡಲು ವ್ಯವಸ್ಥೆ ಮಾಡುವುದಾಗಿ ಹೇಳಿದೆ. ಹೀಗಾಗಿ ಓರ್ವ ವಿದ್ಯಾರ್ಥಿನಿ ಇಂದು ಟಿ.ಸಿ. ಪಡೆದಿದ್ದಾಳೆ.

TV9kannada Web Team

| Edited By: Ayesha Banu

Jun 22, 2022 | 5:09 PM

ಮಂಗಳೂರು: ರಾಜ್ಯದಲ್ಲಿ ಭುಗಿಲೆದ್ದಿದ್ದ ಹಿಜಾಬ್(Hijab) ವಿವಾದ ಬೂದಿ ಮುಚ್ಚಿದ ಕೆಂಡದಂತಿದೆ. ಸದ್ಯ ಮಂಗಳೂರಿನ ಯೂನಿವರ್ಸಿಟಿ(Mangalore University) ಘಟಕ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆ ಕಾಲೇಜಿನಿಂದ ಓರ್ವ ವಿದ್ಯಾರ್ಥಿನಿ ಟಿ.ಸಿ.(Transfer Certificate) ಪಡೆದು ಕಾಲೇಜು ಬಿಟ್ಟ ಘಟನೆ ನಡೆದಿದೆ.

ಮುಸ್ಲಿಂ ವಿದ್ಯಾರ್ಥಿನಿ ತಾನು ಬೇರೆ ಕಾಲೇಜಿಗೆ ಸೇರಬೇಕು. ಹೀಗಾಗಿ ಟಿ.ಸಿ. ನೀಡಿ ಎಂದು ನಿನ್ನೆ ಕಾಲೇಜಿಗೆ ಅರ್ಜಿ ಸಲ್ಲಿಸಿದ್ದಳು. ಸದ್ಯ ಕಾಲೇಜು ಆಡಳಿತ ಮಂಡಳಿ ಇದಕ್ಕೆ ಒಪ್ಪಿ ಟಿ.ಸಿ. ನೀಡಲು ವ್ಯವಸ್ಥೆ ಮಾಡುವುದಾಗಿ ಹೇಳಿದೆ. ಹೀಗಾಗಿ ಓರ್ವ ವಿದ್ಯಾರ್ಥಿನಿ ಇಂದು ಟಿ.ಸಿ. ಪಡೆದಿದ್ದಾಳೆ. ಹಿಜಾಬ್​ ಸಮವಸ್ತ್ರದ ಭಾಗವಾಗಿರುವ ಕಾಲೇಜಿಗೆ ತೆರಳಲು ವಿದ್ಯಾರ್ಥಿನಿ ಟಿ.ಸಿ. ಪಡೆದಿದ್ದಾಳೆ. ಇನ್ನು ಹಿಜಾಬ್ಗಾಗಿ ಪಟ್ಟು ಹಿಡಿದು ಕಾಲೇಜ್ಗೆ 15 ವಿದ್ಯಾರ್ಥಿನಿಯರು ಗೈರಾಗಿದ್ದಾರೆ. ಇದನ್ನೂ ಓದಿ: ಆಗಸ್ಟ್ 22ರೊಳಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ: ಸಿಎಂಗೆ ಗಡುವು ನೀಡಿದ ಶಾಸಕ ಬಸವನಗೌಡ ಪಾಟೀಲ್​​ ಯತ್ನಾಳ್

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ನೋಟಿಸ್​ ನೀಡಿದ ಮಂಗಳೂರು ವಿವಿ ಮಂಗಳೂರು: ಮಂಗಳೂರು ವಿವಿ ಕಾಲೇಜಿಗೆ ವಿದ್ಯಾರ್ಥಿನಿಯರು ಮತ್ತೆ ಹಿಜಾಬ್ ಧರಿಸಿ ಬಂದ ಹಿನ್ನೆಲೆ ಕಾಲೇಜಿನ ಪ್ರಾಂಶುಪಾಲೆ ಡಾ.ಅನುಸೂಯ ರೈ ವಿದ್ಯಾರ್ಥಿನಿಯರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕಾಲೇಜಿನ ಶಿಸ್ತು ಉಲ್ಲಂಘಿಸಿ, ಘನತೆಗೆ ಧಕ್ಕೆ ಹಿನ್ನೆಲೆ ನೋಟಿಸ್ ಜಾರಿ ಮಾಡಲಾಗಿದೆ. ಗೌಸಿಯಾ ಸೇರಿದಂತೆ ಕೆಲ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ಬಳಿಕವೂ ನಿಯಮ ಮೀರಿದರೆ ಅಮಾನತು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಗಡುವು ನೀಡಿದ ಹಿನ್ನೆಲೆ ಎಚ್ಚರಿಕೆ ನೋಟೀಸ್ ನೀಡಲಾಗಿದೆ. ಸುದ್ದಿಗೋಷ್ಟಿಯಲ್ಲಿ ಕಾಲೇಜು ಆಡಳಿತಕ್ಕೆ ವಿದ್ಯಾರ್ಥಿನಿಯರು ಎರಡು ದಿನ ಗಡುವು ನೀಡಿದ್ದರು.

ಮಂಗಳೂರು ವಿವಿ ಘಟಕದ ಕಾಲೇಜಿನಲ್ಲಿ ನಿರ್ಬಂಧದ ನಡುವೆಯು ಜೂನ್​ 4 ರಂದು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ತೆರಳಿದ್ದರು. ಆದರೆ ಹಿಜಾಬ್​ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಣೆ ಮಾಡಲಾಗಿದೆ. ತರಗತಿಗೆ ಹೋಗದಂತೆ ಪ್ರಾಂಶುಪಾಲೆ ಡಾ.ಅನುಸೂಯ ರೈ ತಡೆದಿದ್ದಾರೆ. ಸೋಮವಾರ (ಮೇ 30) ರಂದು ಜಿಲ್ಲಾಧಿಕಾರಿ ಜತೆ ಸಭೆ ನಡೆಸಿದ ಬಳಿಕ ಕಾಲೇಜಿಗೆ ಬಂದಿರಲಿಲ್ಲ. ಮತ್ತೆ ಜೂನ್​​ 4 ರಂದು 16 ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿ ಬಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada