AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚರಂಡಿ, ಮೋರಿ ಸಣ್ಣ ಸಣ್ಣ ವಿಚಾರ ಬಿಟ್ಟು ಲವ್ ಜಿಹಾದ್ ನಿಲ್ಲಿಸಲು ಹೋರಾಟಬೇಕು -ನಳಿನ್ ಕುಮಾರ್ ಕಟೀಲ್

Nalin Kumar Kateel: ಚರಂಡಿ, ಮೋರಿ ಸಣ್ಣ ಸಣ್ಣ ವಿಚಾರ ಬಿಟ್ಟು ಬಿಡಿ. ಲವ್ ಜಿಹಾದ್ ನಿಲ್ಲಿಸಲು ‌ಭಾರತೀಯ ಜನತಾ ಪಾರ್ಟಿ ಬೇಕು. ಲವ್ ಜಿಹಾದ್ ವಿರುದ್ದ ಕಾನೂನನ್ನ ಬಿಜೆಪಿ ಸರ್ಕಾರ ತರುತ್ತೆ. ಡಿಕೆಶಿ ಮುಖ್ಯಮಂತ್ರಿ ಆದ್ರೆ ಎಲ್ಲಾ ಭಯೋತ್ಪಾದಕರು ಮತ್ತೆ ರಸ್ತೆಗೆ ಬರ್ತಾರೆ.

ಚರಂಡಿ, ಮೋರಿ ಸಣ್ಣ ಸಣ್ಣ ವಿಚಾರ ಬಿಟ್ಟು ಲವ್ ಜಿಹಾದ್ ನಿಲ್ಲಿಸಲು ಹೋರಾಟಬೇಕು -ನಳಿನ್ ಕುಮಾರ್ ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​
TV9 Web
| Edited By: |

Updated on:Jan 04, 2023 | 2:54 PM

Share

ಮಂಗಳೂರು: ಮಂಗಳೂರಿನಲ್ಲಿ ಬೂತ್ ವಿಜಯ ಅಭಿಯಾನ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೂ ಇದೇ ವೇಳೆ ಚರಂಡಿ, ಮೋರಿ ಸಣ್ಣ ಸಣ್ಣ ವಿಚಾರ ಬಿಟ್ಟು ಲವ್ ಜಿಹಾದ್ ನಿಲ್ಲಿಸಲು ಹೋರಾಟಬೇಕು ಎಂದು ಕರೆಕೊಟ್ಟಿದ್ದಾರೆ. ಇನ್ನು 100 ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಜೆಡಿಎಸ್ ಭದ್ರಕೋಟೆ ಮಂಡ್ಯ, ಹಾಸನ ಅನ್ನೋ ಮಾತಿತ್ತು. ಆದರೆ‌ ಮಂಡ್ಯದಲ್ಲಿ ಅಮಿತ್ ಶಾ ಪ್ರವಾಸದ ಮೂಲಕ ಬಿಜೆಪಿ ಚೈತನ್ಯ ಹೆಚ್ಚಾಗಿದೆ. ಬಿಜೆಪಿ ಇಂದು ಸರ್ವವ್ಯಾಪಿಯಾಗಿದ್ದು, 150 ಸ್ಥಾನ ಪಡೆಯುತ್ತೇವೆ. ಸಂಘಟನಾತ್ಮಕ ಗೆಲುವು ಸಿಗಲಿದೆ, ದ.ಕ ಜಿಲ್ಲೆಯ ಎಂಟು ಸ್ಥಾನ ಗೆಲ್ತೇವೆ ಎಂದು ಉತ್ಸಾಹದ ನಗೆ ಬೀರಿದ್ದಾರೆ.

ಅಯೋಧ್ಯೆ ಮಂದಿರಕ್ಕಾಗಿ ಸಂಘದ ಪ್ರಚಾರಕನಾಗಿ ಹೊರಟೆ. ಆಗ ರಾಮನ ಪಾದದ ಮೇಲಾಣೆ, ಮಂದಿರ ಅಲ್ಲೇ ಕಟ್ಟುವೆವು ಅಂದೆವು. ಇವತ್ತು‌ ಪ್ರಧಾನಿ ಮೋದಿಯವರು ಅಲ್ಲೇ ರಾಮನ ಮಂದಿರ ಕಟ್ತಿದಾರೆ. ಬೂತ್ ವಿಜಯದ ಮೂಲಕ ರಾಜ್ಯದ ವಿಜಯದ ಸಂಕಲ್ಪ ಮಾಡಿದ್ದೇವೆ. ಈ ಹತ್ತು ದಿನಗಳ ಕಾಲದಲ್ಲಿ ನಮ್ಮ ಬೂತ್ ಟಾರ್ಗೆಟ್ ಇದೆ ಎಂದರು.

ರಮಾನಾಥ ರೈ ಸೋಲಿಸಿ ಅಂತ ಖಾದರ್ ಗುಟ್ಟಾಗಿ ಹೇಳ್ತಾರೆ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಖರ್ಗೆ ಎಲ್ಲರೂ ಮುಖ್ಯಮಂತ್ರಿ ಶರ್ಟ್ ಹೊಲಿಸಿದ್ದಾರೆ. ದ.ಕ ಜಿಲ್ಲೆಯಲ್ಲೂ ಯು.ಟಿ.ಖಾದರ್, ರಮಾನಾಥ ರೈ, ಲೋಬೋ ಸಚಿವರಾಗಲು ಶರ್ಟ್ ಹೊಲಿಸಿದ್ದಾರೆ. ರಮಾನಾಥ ರೈ ಸೋಲಿಸಿ ಅಂತ ಖಾದರ್ ಗುಟ್ಟಾಗಿ ಹೇಳ್ತಾರೆ. ಮತ್ತೊಂದೆಡೆ ಖಾದರ್ ಸೋಲಿಸಿ ಅಂತ ರಮಾನಾಥ ರೈ ಗುಟ್ಟಾಗಿ ಹೇಳ್ತಿದಾರೆ. ಕಾಂಗ್ರೆಸ್ ನಲ್ಲಿ ಪುಸ್ತಕ ‌ಮಾಡಲು ಜನ ಸಿಗಲ್ಲ, ಆದರೆ ಬಿಜೆಪಿಯಲ್ಲಿ ಪೇಜ್ ಗೊಬ್ಬರು ಪ್ರಮುಖರು ಸಿಗ್ತಾರೆ. ಕಾಂಗ್ರೆಸ್ ಬೂತ್ ಗೆ ಒಬ್ಬನೇ ಒಬ್ಬ ಹಿಂದೂ ಸಿಗಲ್ಲ. ಇವತ್ತು ನಡೀತಾ ಇರೋದು ಬೂತ್ ವಿಜಯ ಅಭಿಯಾನ. ಇವತ್ತಿನಿಂದ ನಮ್ಮ ಯಾತ್ರೆ ಆರಂಭ. ಜಿಲ್ಲೆಯ ಮನೆಮನೆಗಳಲ್ಲೂ ಧ್ವಜ ಹಾರಬೇಕು. ನಾವು 50 ಲಕ್ಷ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸುವ ಟಾರ್ಗೆಟ್ ಇಟ್ಟಿದ್ದೇವೆ. ಹಲವು ಕಾರ್ಪೊರೇಟರ್​ಗಳು ನಿದ್ದೆ ಮಾಡ್ತಾ ಇದೀರಿ. ನಿದ್ದೆ ಮಾಡಲಿಕ್ಕೆ ಅಲ್ಲ ನಿಮ್ಮನ್ನ ಜನರು ಗೆಲ್ಲಿಸಿದ್ದು. ಇನ್ನು ನಿದ್ದೆ ಬಿಟ್ಟು ಎಲ್ಲರೂ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ‌ಮಾಡಿ. ಡಿಕೆಶಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಮೂರು ತುಂಡಾಗಿದೆ. ಆದರೆ ‌ನಳಿನ್‌ಕುಮಾರ್ ಅಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ಬಿಜೆಪಿ ಒಂದೇ ಆಗಿದೆ.

ಇದನ್ನೂ ಓದಿ: ಅಭಿವೃದ್ಧಿ ಕೆಲಸಗಳ ಬದಲು ಭಾವನಾತ್ಮಕ ಸಂಗತಿಗಳ ಕಡೆ ಗಮನ ಹರಿಸುವಂತೆ ಜನಕ್ಕೆ ಕಟೀಲ್ ಹೇಳುತ್ತಿದ್ದಾರೆ: ಯುಟಿ ಖಾದರ್

ಯಕ್ಷಗಾನಗಳಲ್ಲೂ ಬಿಜೆಪಿ ಪರ ಪ್ರಚಾರ ಆರಂಭ ಆಗಬೇಕು

ಕಾಂಗ್ರೆಸ್ ರಾಜ್ಯದಲ್ಲಿ ಒಡೆದು ಹೋಗಿದೆ. ಬಿಜೆಪಿ ಮನೆ ಮನಗಳನ್ನ ಕಟ್ಟುತ್ತಿದೆ. ಯಕ್ಷಗಾನಗಳಲ್ಲೂ ಬಿಜೆಪಿ ಪರ ಪ್ರಚಾರ ಇವತ್ತಿನಿಂದ ಆರಂಭ ಆಗಬೇಕು. ಕಲಬುರ್ಗಿಯಲ್ಲಿ ಖರ್ಗೆಯ ಅಂಗಡಿ ಬಂದ್ ಆಗಿದೆ, ಹಾಗಾಗಿ ಪ್ರಿಯಾಂಕ್ ಖರ್ಗೆ ಬಾಯಿ ಓಪನ್ ಆಗಿದೆ. ಸಿದ್ದರಾಮಯ್ಯ ಏಜೆಂಟ್ ಕೆಂಪಣ್ಣ ಕೇಸ್ ಹಾಕಿದ, ಗಲಾಟೆ ಮಾಡಿದ. 40% ದಾಖಲೆ ಇದ್ರೆ ಲೋಕಾಯುಕ್ತಕ್ಕೆ ದೂರು ಕೊಡಿ ಅಂತ ನಾನು ಹೇಳಿದೆ. ದಾಖಲೆ ಇದ್ರೆ ಯಾವ ಪ್ರಭಾವಿ ಶಾಸಕ, ಸಚಿವನಾದರೂ ಕಿತ್ತೆಸೆಯುತ್ತೇವೆ ಅಂದೆ. ಮುಂದಿನ ಚುನಾವಣೆ ಒಳಗೆ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ. ಅವರ ಎಲ್ಲಾ ಹಗರಣಗಳನ್ನು ನಾವು ಬಯಲು ಮಾಡ್ತೇವೆ‌. ಈ ರಾಷ್ಟ್ರದಲ್ಲಿ ಟಿಪ್ಪು ಸ್ಮರಣೆ ಮಾಡಬೇಕಾ? ಸಾವರ್ಕರ್ ಸ್ಮರಣೆ ಮಾಡಬೇಕಾ? ಇವತ್ತು ಸಾವರ್ಕರ್ ಗೆ ಗೌರವ ಕೊಟ್ಟು ಸುವರ್ಣ ಸೌಧದಲ್ಲಿ ಅವರ ಫೋಟೋ ಹಾಕಿದೆವು.

ಡಿಕೆಶಿ ಮುಖ್ಯಮಂತ್ರಿ ಆದ್ರೆ ಎಲ್ಲಾ ಭಯೋತ್ಪಾದಕರು ಮತ್ತೆ ರಸ್ತೆಗೆ ಬರ್ತಾರೆ

ಈ ರಾಜ್ಯದ ‌ಕಾಂಗ್ರೆಸ್ ಅಧ್ಯಕ್ಷ ಡಿಕೆಶಿಗೆ ಎರಡು ಕುಕ್ಕರ್ ಮೇಲೆ ವ್ಯಾಮೋಹ ಇದೆ.ಒಂದು ಮಂಗಳೂರು ಕುಕ್ಕರ್, ಮತ್ತೊಂದು ಬೆಳಗಾವಿ ಕುಕ್ಕರ್. ಬೆಳಗಾವಿ ಕುಕ್ಕರ್ ಹೊಡೆದ್ರೆ ಡಿಕೆಶಿ ಮನೆ ಒಡೆಯುತ್ತದೆ. ಮಂಗಳೂರು ಕುಕ್ಕರ್ ಹೊಡೆದ್ರೆ ಈ ದೇಶವೇ ಒಡೆದು ಹೋಗುತ್ತೆ. ಆದರೆ ಡಿಕೆಶಿ ಮಂಗಳೂರು ಕುಕ್ಕರ್ ಸ್ಪೋಟದ ಆರೋಪಿ ಪರ ಮಾತನಾಡ್ತಾರೆ.

ಚರಂಡಿ, ಮೋರಿ ಸಣ್ಣ ಸಣ್ಣ ವಿಚಾರ ಬಿಟ್ಟು ಬಿಡಿ. ಲವ್ ಜಿಹಾದ್ ನಿಲ್ಲಿಸಲು ‌ಭಾರತೀಯ ಜನತಾ ಪಾರ್ಟಿ ಬೇಕು. ಲವ್ ಜಿಹಾದ್ ವಿರುದ್ದ ಕಾನೂನನ್ನ ಬಿಜೆಪಿ ಸರ್ಕಾರ ತರುತ್ತೆ. ಡಿಕೆಶಿ ಮುಖ್ಯಮಂತ್ರಿ ಆದ್ರೆ ಎಲ್ಲಾ ಭಯೋತ್ಪಾದಕರು ಮತ್ತೆ ರಸ್ತೆಗೆ ಬರ್ತಾರೆ. ಉಗ್ರರು, ಪಿಎಫ್​ಐನವರು ಎಲ್ಲರೂ ಮತ್ತೆ ರಸ್ತೆಗೆ ಬರ್ತಾರೆ. ಕಾಂಗ್ರೆಸ್ ಭಯೋತ್ಪಾದಕರ ಪಾರ್ಟಿ, ಭಯೋತ್ಪಾದನೆಗೆ ಕಾಂಗ್ರೆಸ್ ಮತ್ತೊಂದು ಹೆಸರು ಎಂದು ಕಾಂಗ್ರೆಸ್ ವಿರುದ್ಧ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:54 pm, Wed, 4 January 23

ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ