ಎರಡನೇ ಡೋಸ್ ಲಸಿಕೆ ಪಡೆದರೂ ನೆಗೆಟಿವ್ ರಿಪೋರ್ಟ್ ಕಡ್ಡಾಯ; ಮಂಗಳೂರು ವಿವಿ ಪದವಿ ಪರೀಕ್ಷೆಗೆ ವಿದ್ಯಾರ್ಥಿಗಳ ಪರದಾಟ

| Updated By: preethi shettigar

Updated on: Aug 01, 2021 | 3:35 PM

ವಿವಿಗಳು ಕೂಡ ಈ ನಿಯಮಕ್ಕೆ ಬದ್ಧವಾಗಿದ್ದು, ನೆಗೆಟಿವ್ ರಿಪೋರ್ಟ್ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಹೇಳಿದೆ. ಹೀಗಾಗಿ ವ್ಯಾಕ್ಸಿನ್ ಆಧಾರದ ಮೇಲೆ ಪರೀಕ್ಷೆಗೆ ಬರಲು ಅವಕಾಶ ಮಾಡಿಕೊಡಿ. ಇಲ್ಲವಾದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗಲ್ಲ ಎಂದು ಕೇರಳ ಗಡಿ ಭಾಗದ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಎರಡನೇ ಡೋಸ್ ಲಸಿಕೆ ಪಡೆದರೂ ನೆಗೆಟಿವ್ ರಿಪೋರ್ಟ್ ಕಡ್ಡಾಯ; ಮಂಗಳೂರು ವಿವಿ ಪದವಿ ಪರೀಕ್ಷೆಗೆ ವಿದ್ಯಾರ್ಥಿಗಳ ಪರದಾಟ
ಸಾಂಕೇತಿಕ ಚಿತ್ರ
Follow us on

ದಕ್ಷಿಣ ಕನ್ನಡ: ನಾಳೆಯಿಂದ ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆ ಆರಂಭವಾಗಲಿದೆ. ಆದರೆ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದ್ದು, ಕೇರಳ ಗಡಿಯಲ್ಲಿರುವ ಕನ್ನಡಿಗ ವಿದ್ಯಾರ್ಥಿಗಳಲ್ಲಿ ಆತಂಕ ಎದುರಾಗಿದೆ. ರಾಜ್ಯಕ್ಕೆ ಬರಲು ಕೊವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದ್ದು, ಒಂದು ದಿನದಲ್ಲಿ ಹೇಗೆ ಈ ರಿಪೋರ್ಟ್ ತರುವುದು ಎಂದು ವಿದ್ಯಾರ್ಥಿಗಳು ಆತಂಕಕ್ಕೆ ಗುರಿಯಾಗಿದ್ದಾರೆ.

ಮೊದಲ ಡೋಸ್ ಪಡೆದ ಆಧಾರ ಮೇಲೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ನಿರ್ಧರಿಸಿದ್ದರು. ಆದರೆ ನಿನ್ನೆ ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಎರಡನೇ ಡೋಸ್ ಆದರೂ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ತಿಳಿಸಲಾಗಿದೆ. ವಿವಿಗಳು ಕೂಡ ಈ ನಿಯಮಕ್ಕೆ ಬದ್ಧವಾಗಿದ್ದು, ನೆಗೆಟಿವ್ ರಿಪೋರ್ಟ್ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಹೇಳಿದೆ. ಹೀಗಾಗಿ ವ್ಯಾಕ್ಸಿನ್ ಆಧಾರದ ಮೇಲೆ ಪರೀಕ್ಷೆಗೆ ಬರಲು ಅವಕಾಶ ಮಾಡಿಕೊಡಿ. ಇಲ್ಲವಾದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗಲ್ಲ ಎಂದು ಕೇರಳ ಗಡಿ ಭಾಗದ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ನೆಗೆಟಿವ್ ರಿಪೋರ್ಟ್ ಒಂದು ದಿನದಲ್ಲಿ ತರಲು ಸಾಧ್ಯವಾಗಲ್ಲ. ಆದ್ದರಿಂದ ವ್ಯಾಕ್ಸಿನೇಷನ್‌ ಆಧಾರದ ಮೇಲೆ ಪರೀಕ್ಷೆಗೆ ಕುರಿಸಿ. ಈಗಾಗಲೇ ನಾವು ಬಸ್ ಇಲ್ಲದೇ ಪರೀಕ್ಷೆ ಬರೆಯಲು ಪರದಾಡುತ್ತಿದ್ದೇವೆ. ಹೀಗಿರುವಾಗ ಮತ್ತೆ ಈ ಹೊಸ ನಿಯಮ ಮಾಡಿ ನಮ್ಮನ್ನು ಪರೀಕ್ಷೆಯಿಂದ ವಂಚಿತರನ್ನಾಗಿ ಮಾಡಬೇಡಿ ಎಂದು ಕೇರಳ ಗಡಿ ಭಾಗದ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:
ಕೊರೊನಾ ಆತಂಕ: ಕೇರಳ-ಕರ್ನಾಟಕ ಗಡಿಯಲ್ಲಿ ಕಠಿಣ ಕ್ರಮ ಜಾರಿ; ಇಂದು ಸಂಜೆ ಜಿಲ್ಲಾಡಳಿತಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ

NEET PG 2021 Admit Card: ನೀಟ್​ ಸ್ನಾತಕೋತ್ತರ ಪದವಿ ಪರೀಕ್ಷೆ ಪ್ರವೇಶ ಪತ್ರ ಏಪ್ರಿಲ್​ 12ರಂದು ಬಿಡುಗಡೆ; ಡೌನ್​ಲೋಡ್ ಮಾಡಿಕೊಳ್ಳಲು ಹೀಗೆ ಮಾಡಿ

Published On - 3:32 pm, Sun, 1 August 21