NEET PG 2021 Admit Card: ನೀಟ್ ಸ್ನಾತಕೋತ್ತರ ಪದವಿ ಪರೀಕ್ಷೆ ಪ್ರವೇಶ ಪತ್ರ ಏಪ್ರಿಲ್ 12ರಂದು ಬಿಡುಗಡೆ; ಡೌನ್ಲೋಡ್ ಮಾಡಿಕೊಳ್ಳಲು ಹೀಗೆ ಮಾಡಿ
NEET PG 2021 ಪರೀಕ್ಷೆ ಏಪ್ರಿಲ್ 18ರಂದು ನಿಗದಿಯಾಗಿದ್ದು, ಒಂದೇ ಶಿಫ್ಟ್ನಲ್ಲಿ ಅಂದರೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.30ರವರೆಗೆ ನಡೆಯಲಿದೆ. ಪ್ರವೇಶ ಪತ್ರದೊಂದಿಗೆ ಪರೀಕ್ಷಾರ್ಥಿಗಳು ಐಡಿ ಕಾರ್ಡ್ ಕೂಡ ತೆಗೆದುಕೊಂಡು ಹೋಗಲೇಬೇಕು.
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಸ್ನಾತಕೋತ್ತರ ಪದವಿ (NEET PG) ಪರೀಕ್ಷೆಯ ಪ್ರವೇಶ ಪತ್ರವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (NBE) ಏಪ್ರಿಲ್ 12ರಂದು ಅದರ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಿದೆ. ನೀಟ್ ಪಿಜಿ -2021ರ ಪರೀಕ್ಷೆಗೆ ಈಗಾಗಲೇ ನೋಂದಣಿ ಮಾಡಿಕೊಂಡವರು ತಮ್ಮ ಪ್ರವೇಶ ಪತ್ರವನ್ನು ಎನ್ಬಿಇ ವೆಬ್ಸೈಟ್ nbe.edu.in ನಲ್ಲಿ ಪಡೆಯಬಹುದು. ಲಾಗಿನ್ ಆಗುವ ಮೂಲಕ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
NEET PG 2021 ಪರೀಕ್ಷೆ ಏಪ್ರಿಲ್ 18ರಂದು ನಿಗದಿಯಾಗಿದ್ದು, ಒಂದೇ ಶಿಫ್ಟ್ನಲ್ಲಿ ಅಂದರೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.30ರವರೆಗೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವವರು ಪ್ರವೇಶ ಪತ್ರದ ಹಾರ್ಡ್ ಕಾಪಿಯನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ಎನ್ಬಿಇ ತಿಳಿಸಿದೆ. ಇನ್ನು ಪ್ರವೇಶ ಪತ್ರದೊಂದಿಗೆ ಪರೀಕ್ಷಾರ್ಥಿಗಳು ಐಡಿ ಕಾರ್ಡ್ ಕೂಡ ತೆಗೆದುಕೊಂಡು ಹೋಗಲೇಬೇಕು.
ಪ್ರವೇಶ ಪತ್ರ ಡೌನ್ಲೋಡ್ ಹೇಗೆ?
- ಎನ್ಬಿಇ ವೆಬ್ಸೈಟ್nbe.edu.in. ಗೆ ಭೇಟಿ ನೀಡಿ
- ಹೋಂ ಪೇಜ್ನಲ್ಲಿ ಕಾಣುವ ‘NEET PG 2021 admit card download’ ಎಂಬಲ್ಲಿ ಕ್ಲಿಕ್ ಮಾಡಿ.
- ಬಳಿಕ ಒಂದು ಹೊಸ ಪೇಜ್ ತೆರೆಯುತ್ತದೆ
- ಅದರಲ್ಲಿ ನಿಮ್ಮ ಲಾಗಿನ್ ಐಡಿ, ಪಾಸ್ವರ್ಡ್ ಹಾಕಿ
- ಆಗ ನಿಮ್ಮ ಅಡ್ಮಿಟ್ ಕಾರ್ಡ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ
- ಅದನ್ನು ಡೌನ್ಲೋಡ್ ಮಾಡಿಕೊಳ್ಳುವ ಆಯ್ಕೆ ಅಲ್ಲೇ ಕಾಣಿಸುತ್ತದೆ. ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ
NEET PG 2021 ಪರೀಕ್ಷೆಯ ಪ್ರವೇಶ ಪತ್ರದಲ್ಲಿ ನೀವು ಪರೀಕ್ಷೆ ಬರೆಯಬೇಕಾಗಿರುವ ಪರೀಕ್ಷಾ ಕೇಂದ್ರದ ವಿಳಾಸ, ಸ್ಥಳ ನಮೂದಾಗಿರುತ್ತದೆ. 1200 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, 200 ಪ್ರಶ್ನೆಗಳು ಇರಲಿವೆ.
ಇದನ್ನೂ ಓದಿ: ಮಿತಿಮೀರಿದ ಕೊರೊನಾ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೈಟ್ ಕರ್ಫ್ಯೂ ಜಾರಿ
ಇಂದು ಸಿಡಿ ಸಂತ್ರಸ್ತೆ ವಿಚಾರಣೆ ಇಲ್ಲ; ಮೂರು ದಿನ ರೆಸ್ಟ್ ನೀಡಿದ ಎಸ್ಐಟಿ
(NEET PG 2021 admit card to be released on April 12)