Nipah Virus: ದಕ್ಷಿಣ ಕನ್ನಡದ ಯುವಕನಿಗೆ ನಿಫಾ ವೈರಸ್​ ನೆಗೆಟಿವ್​ ವರದಿ; ಆತಂಕ ದೂರ

ಗೋವಾದ ಲ್ಯಾಬ್​ನಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವಕನಿಗೆ ಜ್ವರ ಸೇರಿದಂತೆ ಕೆಲ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಆತಂಕ ಸೃಷ್ಟಿಯಾಗಿತ್ತು. ಹೀಗಾಗಿ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತನಗೆ ನಿಫಾದ ಆತಂಕವಿದೆ ಅಂತ ಯುವಕನೇ ಹೇಳಿಕೊಂಡಿದ್ದ ಹಾಗೂ ಟೆಸ್ಟ್ ಮಾಡಲು ಮನವಿ ಮಾಡಿದ್ದ.

Nipah Virus: ದಕ್ಷಿಣ ಕನ್ನಡದ ಯುವಕನಿಗೆ ನಿಫಾ ವೈರಸ್​ ನೆಗೆಟಿವ್​ ವರದಿ; ಆತಂಕ ದೂರ
ಸಾಂಕೇತಿಕ ಚಿತ್ರ
Updated By: Skanda

Updated on: Sep 15, 2021 | 9:36 AM

ಮಂಗಳೂರು: ನಿಫಾ ವೈರಸ್​ (Nipah Virus) ಲಕ್ಷಣ ಕಂಡುಬಂದ ಹಿನ್ನೆಲೆ ವೆನ್ಲಾಕ್​ಗೆ ದಾಖಲಾಗಿದ್ದ ಯುವಕನ ವೈದ್ಯಕೀಯ ವರದಿ​ ಲಭ್ಯವಾಗಿದ್ದು, ಆತನಿಗೆ ನಿಫಾ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿದೆ. ಜ್ವರ ಮತ್ತು ಕೆಲವು ಲಕ್ಷಣ ಪತ್ತೆಯಾದ ಹಿನ್ನೆಲೆ ಕಾರವಾರದ ಯುವಕ ಆಸ್ಪತ್ರೆಗೆ ದಾಖಲಾಗಿದ್ದ. ಗೋವಾದ ಲ್ಯಾಬ್​ನಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಆತ ತನಗೆ ನಿಫಾ ವೈರಸ್ ಆತಂಕವಿದೆ ಎಂದು ಟೆಸ್ಟ್ ಮಾಡುವಂತೆ ಮನವಿ ಮಾಡಿದ್ದ. ಸದ್ಯ ವೈದ್ಯಕೀಯ ಪರೀಕ್ಷೆಯ ವರದಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕೈ ಸೇರಿದ್ದು, ನಿಫಾ ಸೋಂಕು ತಗುಲಿಲ್ಲ, ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ಗೋವಾದ ಲ್ಯಾಬ್​ನಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವಕನಿಗೆ ಜ್ವರ ಸೇರಿದಂತೆ ಕೆಲ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಆತಂಕ ಸೃಷ್ಟಿಯಾಗಿತ್ತು. ಹೀಗಾಗಿ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತನಗೆ ನಿಫಾದ ಆತಂಕವಿದೆ ಅಂತ ಯುವಕನೇ ಹೇಳಿಕೊಂಡಿದ್ದ ಹಾಗೂ ಟೆಸ್ಟ್ ಮಾಡಲು ಮನವಿ ಮಾಡಿದ್ದ. ಬಳಿಕ ಯುವಕನಿಗೆ ನಿಫಾ ವೈರಸ್ ಲಕ್ಷಣ ಪತ್ತೆಯಾಗಿರುವ ವಿಚಾರದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕಾರವಾರದ ವ್ಯಕ್ತಿ ಗೋವಾದಲ್ಲಿ ಕೆಲಸ ಮಾಡುತ್ತಿದ್ದ. ಆರ್​ಟಿಪಿಸಿಆರ್​ ಟೆಸ್ಟ್ ಕಿಟ್ ತಯಾರಿಕಾ ಲ್ಯಾಬ್​ನಲ್ಲಿ ಕೆಲಸ ಮಾಡುತ್ತಿದ್ದ. ನಿಫಾ ಸ್ಯಾಂಪಲ್ ಟೆಸ್ಟ್ ಕೂಡ ಮಾಡಲಾಗುತ್ತಿತ್ತು. ಕಾರವಾರಕ್ಕೆ ಬೈಕ್​ನಲ್ಲಿ ಮಳೆಯಲ್ಲಿ ಬಂದಿದ್ದಾರೆ. ನಿಫಾ ಸೋಂಕಿನ ಶಂಕೆ ಇಲ್ಲದಿದ್ದರು ನಿರ್ಲಕ್ಷ್ಯ ಮಾಡಲು ಸಾಧ್ಯವಾಗದ ಕಾರಣ ಟೆಸ್ಟ್​ಗೆ ಕಳುಹಿಸಿದ್ದೇವೆ ಅಂತ ತಿಳಿಸಿದ್ದರು.

ಪುಣೆಯಿಂದ ರಿಪೋರ್ಟ್ ಕೂಡ ಬೇಗ ತರಿಸುವ ವ್ಯವಸ್ಥೆ ಆಗಿದೆ. ಅವನ ಮನೆಯವರನ್ನು ಐಸೋಲೇಶನ್​ನಲ್ಲಿ ಇಡಲಾಗಿದೆ. ಯುವಕ ಸಂಪರ್ಕ ಮಾಡಿದವರನ್ನು ಪತ್ತೆ ಹಚ್ಚಲಾಗಿದೆ. ಉಡುಪಿ ಮತ್ತು ಕಾರವಾರ ಜಿಲ್ಲಾಡಳಿತಕ್ಕೆ ಈ ಬಗ್ಗೆ ಅಲರ್ಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು. ಇದೀಗ ವರದಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕೈಸೇರಿದ್ದು, ನಿಫಾ ಟೆಸ್ಟ್‌ ರಿಪೋರ್ಟ್‌ ನೆಗೆಟಿವ್ ಬಂದಿದೆ.

ಇದನ್ನೂ ಓದಿ:
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಯಿಲೆಗಳು; ಕೊರೊನಾ, ನಿಫಾ, ಡೆಲ್ಟಾ ಮಧ್ಯೆ ಡೆಂಗ್ಯೂ ಕೇಸ್ ಹೆಚ್ಚಳ 

ಕೊರೊನಾ, ನಿಫಾ ಆತಂಕದ ನಡುವೆ ಸದ್ದಿಲ್ಲದೆ ಉಲ್ಬಣಿಸುತ್ತಿದೆ ಬ್ಲ್ಯಾಕ್​ ಫಂಗಸ್​; 10 ದಿನಗಳಲ್ಲಿ 25 ಮಂದಿಗೆ ಸೋಂಕು, 7 ಸಾವು

(Nipah Virus young man in Dakshina Kannada tested negative for Nipah)