ಅನ್ಯಕೋಮಿನ ಜೋಡಿಗೆ ಹಿಂದೂ ಕಾರ್ಯಕರ್ತರಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಇಬ್ಬರನ್ನೂ ಕರೆತಂದ ಹಿಂದೂ ಕಾರ್ಯಕರ್ತರು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪುತ್ತೂರು ಮೂಲದ ಅನ್ಯಕೋಮಿನ ಆಟೋ ಚಾಲಕನ ಜತೆ ವೇಣೂರಿನ ಹಿಂದೂ ಯುವತಿ ಬಂದಿದ್ದರು ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಮಂಗಳೂರು: ಯೆನ್ ಕೆಫೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹೊಡೆದಾಟ
ಮಂಗಳೂರು ಇಲ್ಲಿನ ಬಾವುಟಗುಡ್ಡೆ ಎಂಬಲ್ಲಿರುವ ಯೆನ್ ಕೆಫೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹೊಡೆದಾಟ ಮಾಡಿಕೊಂಡ ಘಟನೆ ನಡೆದಿದೆ. ಯುವಕರ ಜೊತೆ ಕೆಫೆಯಲ್ಲಿ ಕುಳಿತಿದ್ದ ಯುವತಿ ಮೇಲೆ ಕೆಫೆಗೆ ಆಗಮಿಸಿದ ಮತ್ತೊಬ್ಬ ಯುವತಿಯಿಂದ ಏಕಾಏಕಿ ಹಲ್ಲೆ ನಡೆದಿದೆ. ಈ ವೇಳೆ ಕೆಫೆಯಲ್ಲಿ ಮತ್ತೊಬ್ಬ ಯುವತಿ ಗಲಾಟೆ ಆರಂಭಿಸಿದ್ದಾರೆ. ಹೀಗೆ ಒಟ್ಟು ಮೂವರು ಯುವತಿಯರ ನಡುವೆ ಹೊಡೆದಾಟ ಶುರುವಾಗಿದೆ. ಈ ಜಗಳ ಬಿಡಿಸಲು ಯುವಕರ ಪರದಾಡುವಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಜಗಳದ ವಿಡಿಯೋ ವೈರಲ್ ಆಗಿದ್ದು ಯುವತಿಯರ ಜಗಳದ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ. ಮಂಗಳೂರಿನ ಪೂರ್ವ ಠಾಣೆ ಪೊಲೀಸರಿಂದ ಮಾಹಿತಿ ಸಂಗ್ರಹ ಮಾಡಲಾಗಿದೆ.
ಇದನ್ನೂ ಓದಿ: ಕೋಮುವಾದಿ ಕಲ್ಲಡ್ಕ ಪ್ರಭಾಕರ್ ಭಟ್ರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಮಂಗಳೂರು ವಿವಿ ಪ್ರತಿಷ್ಠೆ ಹಾಳುಮಾಡಿಕೊಂಡಿದೆ: ಸಿ ಎಫ್ ಐ
ಇದನ್ನೂ ಓದಿ: ಅಜ್ಮೀರ್ಗೆ ಹೋಗ್ತೀನಿ ಅಂತಾ ದುಬೈಗೆ ಹಾರಿದ್ದ ಮಂಗಳೂರು ಇನ್ಸ್ಪೆಕ್ಟರ್ ಷರೀಫ್ ಸೀದಾ ಮನೆಗೆ: ಕಮಿಷನರ್ ಶಶಿಕುಮಾರ್ ಆದೇಶ