ಬೆಂಗಳೂರಿನಿಂದ ಬರುತ್ತಿದ್ದ ಖಾಸಗಿ ಬಸ್ನಲ್ಲಿ ಲೇಡಿ ಡಾಕ್ಟರ್ ಜತೆ ಅಸಭ್ಯ ವರ್ತನೆ: ಖಾಸಗಿ ಬಸ್ ಕ್ಲೀನರ್ ಬಂಧನ
ಆರೋಪಿ ಇಮ್ರಾನ್ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದ. ಪ್ಯಾಂಟ್ ಜಿಪ್ ಓಪನ್ ಮಾಡಿ ಅಸಭ್ಯ ನಡವಳಿಕೆ ತೋರಿದ ಎಂದು ಸಂತ್ರಸ್ತೆ, ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯೆ ದೂರಿನಲ್ಲಿ ದಾಖಲಿಸಿದ್ದಾರೆ.
ಮಂಗಳೂರು: ಖಾಸಗಿ ಬಸ್ನಲ್ಲಿ ಲೇಡಿ ಡಾಕ್ಟರ್ ಪ್ರಯಾಣಿಕರೊಬ್ಬರ ಜತೆ ಖಾಸಗಿ ಬಸ್ (private bus) ಕ್ಲೀನರ್ ಮಹಮ್ಮದ್ ಇಮ್ರಾನ್ (26) ಅಸಭ್ಯ ವರ್ತನೆ (harassment) ತೋರಿದ್ದು, ಆತನನ್ನು ಬಂಧಿಸಲಾಗಿದೆ (arrest). ಬಂಧಿತ ಆರೋಪಿ, ಮಂಗಳೂರಿನ ಬಜ್ಪೆ ಕೆಂಜಾರು ನಿವಾಸಿ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ವೈದ್ಯೆ ಜತೆ ದುರ್ವತನೆ ಆರೋಪದಡಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 151/2022 U/s 354ರಡಿ ಕೇಸ್ ದಾಖಲುಗೊಂಡಿದೆ. ಖಾಸಗಿ ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿತ್ತು.
ಆರೋಪಿ ಇಮ್ರಾನ್ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದ. ಪ್ಯಾಂಟ್ ಜಿಪ್ ಓಪನ್ ಮಾಡಿ ಅಸಭ್ಯ ನಡವಳಿಕೆ ತೋರಿದ ಎಂದು ಸಂತ್ರಸ್ತೆ, ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯೆ ದೂರಿನಲ್ಲಿ ದಾಖಲಿಸಿದ್ದಾರೆ. ದೂರುದಾರ ಮಹಿಳಾ ಪ್ರಯಾಣಿಕರು ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಪೊಲೀಸ್ ದೂರು ನೀಡುವ ವಿಚಾರ ಗೊತ್ತಾಗಿ ಆರೋಪಿ ಇಮ್ರಾನ್ ಮಹಿಳೆಗೆ ಬೆದರಿಕೆಯನ್ನು ಹಾಕಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಅಯ್ಯೋ ಹೆಂಡತಿ ಹೊಡೀತಾಳೆ! ಕಾಪಾಡಿ ನನ್ನನ್ನು ಎಂದು ಪ್ರಧಾನಿ ಮೋದಿಗೆ ಮೊರೆಯಿಟ್ಟ ಬೆಂಗಳೂರಿನ ಪತಿರಾಯ
ಮಂಗಳೂರು: ಅಕ್ರಮವಾಗಿ ಮರಳು ಸಾಗಿಸಲು ಸಿಸಿ ಕ್ಯಾಮರಾಗೆ ಹಾನಿ ಯತ್ನ
ಮಂಗಳೂರು: ಅಕ್ರಮವಾಗಿ ಮರಳು ಸಾಗಿಸಲು ಸಿಸಿ ಕ್ಯಾಮರಾಗೆ ಹಾನಿ ಮಾಡಲು ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ದಿಶಾಂತ್(22) ಮತ್ತು ರಕ್ಷಿತ್(31) ಬಂಧಿತ ಆರೋಪಿಗಳು. ಮಂಗಳೂರಿನ ಮುಡಾ ಲೇಔಟ್ ಬಳಿಯ ಸೋಮೇಶ್ವರ ಕಡಲತೀರದಲ್ಲಿ ಪ್ರಕರಣ ನಡೆದಿದೆ. ಗ್ರಾಮ ಲೆಕ್ಕಾಧಿಕಾರಿ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿಗಳಿಬ್ಬರೂ ನವೆಂಬರ್ 6 ರಂದು ಮುಂಜಾನೆ 2.25 ರ ಸುಮಾರಿಗೆ ಕಾರಿನಲ್ಲಿ ಬಂದು ಸಿಸಿಟಿವಿಗೆ ಹಾನಿ ಮಾಡಿದ್ದರು. ಮರಳು ಮಾಫಿಯಾ ತಡೆಯಲು ಉಳ್ಳಾಲ ಮತ್ತು ಸೋಮೇಶ್ವರದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಎರಡನೇ ಬಾರಿ ಇದೇ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾಗೆ ಹಾನಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 1:52 pm, Thu, 10 November 22