ಪ್ರವೀಣ್ ಜೀವಕ್ಕೆ 25 ಲಕ್ಷ ಕಟ್ಟಬೇಡಿ: ಬಿಲ್ಲವ ಈಡಿಗ ಸಮುದಾಯಕ್ಕೆ ನಾವು ನಂಬಿದ ಪಕ್ಷದಿಂದ ರಕ್ಷಣೆ ಸಿಗುತ್ತಿಲ್ಲ-ಪ್ರಣವಾನಂದಶ್ರೀ
ಹಿಂದುಳಿದ ಬಿಲ್ಲವ ಈಡಿಗ ಸಮುದಾಯದ ಜನ ಗಂಟೆಯಲ್ಲಿ ಸಾಯುತ್ತಿದ್ದಾರೆ. ಇದರಿಂದ ನಮ್ಮ ಸಮುದಾಯಕ್ಕೆ ನಷ್ಟವಾಗಿದೆ. ನಮಗೆ ಈ ಪರಿಸ್ಥಿತಿ ಬರಲು ನಮ್ಮ ಪ್ರಾಮಾಣಿಕತೆಯೇ ಕಾರಣ. ನಾವು ನಂಬಿದ ಪಕ್ಷದಿಂದ ರಕ್ಷಣೆ ಸಿಗುತ್ತಿಲ್ಲ.
ಮಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಇಂದು(ಜುಲೈ 28) ಪ್ರವೀಣ್ ನೆಟ್ಟಾರು(Praveen Nettar) ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಮಾಡಿದ್ರು. ಹಾಗೂ 25 ಲಕ್ಷ ರೂ. ಪರಿಹಾರದ ಚೆಕ್ ನೀಡಿ ರಾಜ್ಯ ಬಿಜೆಪಿ ಸರ್ಕಾರ ನಿಮ್ಮೊಂದಿಗಿದೆ ಇದೆ ಎಂದು ಅಭಯ ನೀಡಿದ್ರು. ಆದ್ರೆ ಮತ್ತೊಂದು ಕಡೆ ಪ್ರವೀಣ್ ಜೀವಕ್ಕೆ 25 ಲಕ್ಷದಲ್ಲಿ ಬೆಲೆ ಕಟ್ಟಬೇಡಿ. ನಿಮ್ಮ ಸಿದ್ಧಾಂತಕ್ಕಾಗಿ ನಮ್ಮ ಸಮುದಾಯದ ಯುವಕ ಬಲಿಯಾಗಿದ್ದಾನೆ ಎಂದು ಬ್ರಹ್ಮಶ್ರಿ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ(Pranavananda Swamiji) ವಾಗ್ದಾಳಿ ನಡೆದಿದ್ದಾರೆ.
ಹಿಂದುಳಿದ ಬಿಲ್ಲವ ಈಡಿಗ ಸಮುದಾಯದ ಜನ ಗಂಟೆಯಲ್ಲಿ ಸಾಯುತ್ತಿದ್ದಾರೆ. ಇದರಿಂದ ನಮ್ಮ ಸಮುದಾಯಕ್ಕೆ ನಷ್ಟವಾಗಿದೆ. ನಮಗೆ ಈ ಪರಿಸ್ಥಿತಿ ಬರಲು ನಮ್ಮ ಪ್ರಾಮಾಣಿಕತೆಯೇ ಕಾರಣ. ನಾವು ನಂಬಿದ ಪಕ್ಷದಿಂದ ರಕ್ಷಣೆ ಸಿಗುತ್ತಿಲ್ಲ. ಹಾಗಾಗಿ ಬಿಲ್ಲವ ಸಮುದಾಯದ ಯುವಕರು ಒಂದು ಶಪಥ ಮಾಡಬೇಕು. ಇನ್ನು ಮುಂದೆ ಕೋಮು ಗಲಾಟೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಯಾವುದೇ ಕೇಸ್ ಹಾಕಿಸಿಕೊಳ್ಳುವುದಿಲ್ಲ. ಇಡೀ ಕರಾವಳಿಯಲ್ಲಿ ಬಿಲ್ಲವ ಸಮುದಾಯದವರು ಶಪಥ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ನಾನು ಪಾದಯಾತ್ರೆ ಮಾಡುತ್ತೇನೆ ಎಂದರು.
ಸಿಎಂಗೆ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ
ಮುಖ್ಯಮಂತ್ರಿಗೆ ನಾನು ಎಚ್ಚರಿಕೆ ಕೊಡುತ್ತೇನೆ. ಇನ್ನು ನಮ್ಮ ಸಮುದಾಯ ಸುಮ್ಮನಿರುವುದಿಲ್ಲ. ಪ್ರವೀಣ್ ಜೀವಕ್ಕೆ 25 ಲಕ್ಷದಲ್ಲಿ ಬೆಲೆ ಕಟ್ಟಬೇಡಿ. ನಿಮ್ಮ ಸಿದ್ಧಾಂತಕ್ಕಾಗಿ ನಮ್ಮ ಸಮುದಾಯದ ಯುವಕ ಬಲಿಯಾಗಿದ್ದಾನೆ. ಪ್ರವೀಣ್ ಕುಟುಂಬಕ್ಕೆ ಸರ್ಕಾರಿ ನೌಕರಿ, ಒಂದು ಕೋಟಿ ರೂ ಪರಿಹಾರ ನೀಡಬೇಕು. ನಮ್ಮ ಬೇಡಿಕೆಗಳನ್ನ ಈಡೇರಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಪ್ರಣವಾನಂದ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಪ್ರವೀಣ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತನಾಡಿದ ಬಳಿಕ ಪ್ರಣವಾನಂದ ಸ್ವಾಮೀಜಿ ವಾಗ್ದಾಳಿ ನಡೆಸಿದ್ರು.
ನಾಳೆ ಪಾದಯಾತ್ರೆ ಮೂಲಕ ಪ್ರತಿಭಟನೆಗೆ ಹಿಂದೂ ಸಂಘಟನೆಗಳ ಕರೆ
ಚಿಕ್ಕಮಗಳೂರು:ಮೂಡಿಗೆರೆಯಿಂದ ಚಿಕ್ಕಮಗಳೂರು ಡಿಸಿ ಕಚೇರಿವರೆಗೆ ಪಾದಯಾತ್ರೆ ನಡೆಸಲು ಹಿಂದೂ ಸಂಘಟನೆಗಳು ಮುಂದಾಗಿವೆ. 30 ಕಿ.ಮೀ. ಪಾದಯಾತ್ರೆ ನಡೆಸಿ ಡಿಸಿಗೆ ಮನವಿಗೆ ಸಲ್ಲಿಸಲು ನಿರ್ಧರಿಸಿದ್ದಾರೆ. ಪ್ರವೀಣ್ ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮನವಿ ಮಾಡಲಿದ್ದಾರೆ. ನಾಳೆಯ ಪಾದಯಾತ್ರೆಯಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
Published On - 9:01 pm, Thu, 28 July 22