ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಉದ್ರಿಕ್ತರಿಂದ ಬಂಧಿತ ಶಫೀಕ್ ಕೆಲಸ ಮಾಡ್ತಿದ್ದ ಅಂಗಡಿ ಧ್ವಂಸ
ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಬೆಳ್ಳಾರೆ ಮೂಲದ ಶಫೀಕ್ ಬಂಧಿತನಾಗಿದ್ದಾನೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಕೆಲವರು ಆತ ಕೆಲಸ ಮಾಡುತ್ತಿದ್ದ ಗುತ್ತಿಗಾರಿನ ಅಡಿಕೆ ಅಂಗಡಿಯ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ.
ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು(Praveen Nettar) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರಿಂದ ಬಂಧಿಸಲ್ಪಟ್ಟ ಬೆಳ್ಳಾರೆ ಮೂಲದ ಶಫೀಕ್ ಕೆಲಸ ಮಾಡುತ್ತಿದ್ದ ಗುತ್ತಿಗಾರಿನ ಅಡಿಕೆ ಅಂಗಡಿಯನ್ನು ಉದ್ರಿಕ್ತರು ಧ್ವಂಸಗೊಳಿಸಿದ ಘಟನೆ ನಡೆದಿದೆ.
ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಬೆಳ್ಳಾರೆ ಮೂಲದ ಶಫೀಕ್ ಬಂಧಿತನಾಗಿದ್ದಾನೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಕೆಲವರು ಆತ ಕೆಲಸ ಮಾಡುತ್ತಿದ್ದ ಗುತ್ತಿಗಾರಿನ ಅಡಿಕೆ ಅಂಗಡಿಯ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಅಲ್ಲದೆ ಆರೋಪಿ ಕೆಲಸ ಮಾಡ್ತಿದ್ದ ಅಕ್ಕಪಕ್ಕದ 5 ಅಂಗಡಿಗಳಿಗೂ ಹಾನಿಯಾಗಿದೆ. ಸದ್ಯ ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಬಂಧಿತ ಶಫೀಕ್, ಜಾಕೀರ್‌ಗೆ ವೈದ್ಯಕೀಯ ಪರೀಕ್ಷೆ ಮುಕ್ತಾಯ
ಇನ್ನು ಮತ್ತೊಂದು ಕಡೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತರಾದ ಶಫೀಕ್, ಜಾಕೀರ್‌ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ಪರೀಕ್ಷೆ ಮುಕ್ತಾಯಗೊಂಡಿದೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲೇ ಆರೋಪಿಗಳಿಗೆ ವೈದ್ಯರು ಪರೀಕ್ಷೆ ನಡೆಸಿದ್ದಾರೆ.
ಪ್ರವೀಣ್ ಪ್ರಾಣ ಉಳಿಸಲು ಹೋರಾಡಿದ್ದ ಚಾಲಕ ಮೊಹಮ್ಮದ್ ಆಶಿಕ್ ಹೇಳಿದ್ದೇನು?
ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಆದಾಗ ಪ್ರವೀಣ್ ಉಳಿಸಲು ಅಂತಿಮ ಪ್ರಯತ್ನ ಮಾಡಿದ್ದ ಆ್ಯಂಬುಲೆನ್ಸ್ ಚಾಲಕ ಟಿವಿ9 ಜೊತೆ ಮಾತನಾಡಿದ್ದಾರೆ. ಶಮ್ಸುಲ್ ಉಲಾಮಾ ಚಾರಿಟೇಬಲ್ ಟ್ರಸ್ಟ್ ನ ಆ್ಯಂಬುಲೆನ್ಸ್ ಚಾಲಕ ಮೊಹಮ್ಮದ್ ಆಶಿಕ್, ಪ್ರವೀಣ್ ಪ್ರಾಣ ಉಳಿಸಲು ಹೋರಾಡಿದ್ದರು. ಇವರು ಪ್ರವೀಣ್ ಕೊನೆಯ ಸಾವಿನ ಸಮಯ ಹೇಗಿತ್ತು ಅನ್ನೋದನ್ನ ಹಂಚಿಕೊಂಡಿದ್ದಾರೆ. 8.40ಕ್ಕೆ ಸರಿಯಾಗಿ ಪ್ರವೀಣ್ ಇದ್ದ ಸ್ಥಳಕ್ಕೆ ಬಂದೆ. ತಲೆಗೆ, ಕತ್ತಿಗೆ ಗಾಯ ಆಗಿ ರಕ್ತ ಸೋರ್ತಿತ್ತು. ನಾವು ಆತನನ್ನ ಆ್ಯಂಬುಲೆನ್ಸ್ ನಲ್ಲಿ ಹಾಕಿಕೊಂಡು ಹೊರಟ್ವಿ. ಕುಮ್ರಾ ಹೋಗೋವವರೆಗೂ ಆತನ ಆರ್ತನಾದ ಕೇಳ್ತಾ ಇತ್ತು. ಬೆಳ್ಳಾರೆಯಿಂದ 18 ಕಿ.ಮೀ.ದೂರದಲ್ಲಿರುವ ಕುಮ್ರಾ ಇದೆ. ಆದ್ರೆ ದಾರಿ ನಡುವೆಯೇ ಆತನ ಪ್ರಾಣಪಕ್ಷಿ ಹಾರಿಹೋಯ್ತು ಎಂದರು.
Published On - 5:38 pm, Thu, 28 July 22