ಮಂಗಳೂರು: ಹಿಂದೂ ಜಾಗರಣಾ ವೇದಿಕೆ ಮುಖಂಡರ ಗಡಿಪಾರಿಗೆ ನ್ಯಾಯಾಲಯ ತಡೆ

ಕೋಮು ಗಲಭೆ, ದನಸಾಗಾಟ ಹಲ್ಲೆ, ನೈತಿಕ ಪೊಲೀಸ್ ಗಿರಿ ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ಹಿಂದೂ ಮುಖಂಡರಿಗೆ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರು ಗಡಿಪಾರು ನೋಟಿಸ್​ ಜಾರಿ ಮಾಡುತ್ತಿದ್ದಾರೆ. ಹಿಂದೂ ಜಾಗರಣ ವೇದಿಕೆಯ ಇಬ್ಬರು ಮುಖಂಡರಿಗೆ ಪುತ್ತೂರು ಉಪವಿಭಾಗೀಯ ದಂಡಾಧಿಕಾರಿ ನೀಡಿದ್ದ ಗಡಿಪಾರು ನೋಟಿಸ್​ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಮಂಗಳೂರು: ಹಿಂದೂ ಜಾಗರಣಾ ವೇದಿಕೆ ಮುಖಂಡರ ಗಡಿಪಾರಿಗೆ ನ್ಯಾಯಾಲಯ ತಡೆ
ಹಿಂದೂ ಜಾಗರಣ ವೇದಿಕೆ
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ವಿವೇಕ ಬಿರಾದಾರ

Updated on: Feb 10, 2024 | 12:30 PM

ಮಂಗಳೂರು, ಫೆಬ್ರವರಿ 10: ಹಿಂದೂ ಜಾಗರಣಾ ವೇದಿಕೆ (Hindu Jagarana Vedike) ಮುಖಂಡರಾದ ದಿನೇಶ್ ಪಂಜಿಗ‌ ಹಾಗೂ ಬೆಳ್ತಂಗಡಿಯ ಯಶೋಧರ ಅವರ ಗಡಿಪಾರು ನೊಟೀಸ್​ಗೆ ನ್ಯಾಯಾಲಯ (Court) ತಡೆಯಾಜ್ಞೆ ನೀಡಿದೆ. ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ದಿನೇಶ್​ ಪಂಜಿಗ ಮತ್ತು ವೇಣೂರು ವಲಯದ ಮುಖಂಡರಾಗಿದ್ದ ಯಶೋಧರ ಎಂಬುವರಿಗೆ, ಕರ್ನಾಟಕ ಪೊಲೀಸ್​ ಕಾಯ್ದೆ ಕಲಂ 55 ರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಪೊಲೀಸ್​ ಠಾಣಾ ವ್ಯಾಪ್ತಿಗೆ ನಿಮ್ಮನ್ನು ಯಾಕೆ ಗಡಿಪಾಟು ಮಾಡಬಾರು ಎಂದು ಕಾರಣ ಕೇಳಿ ಪುತ್ತೂರು (Puttur) ಉಪವಿಭಾಗೀಯ ದಂಡಾಧಿಕಾರಿ ನೋಟಿಸ್​ ಜಾರಿ ಮಾಡಿದ್ದರು.

ಹಾಗೆ ನೀವು ಸತ್ವಃ ನ್ಯಾಯವಾದಿಯವರ ಮೂಲಕ ವಿಚಾರಣೆಗೆ ಹಾಜರಾಗಿ ಈ ಕುರಿತು ವಾದಿಸಬಹುದು ಎಂದು ಉಪವಿಭಾಗೀಯ ದಂಡಾಧಿಕಾರಿ ನೋಟಿಸ್​ ಪತ್ರದಲ್ಲಿ ತಿಳಿಸಿದ್ದರು. ನೋಟಿಸ್​ ಜಾರಿ ಮಾಡಿರುವ ಉಪವಿಭಾಗೀಯ ದಂಡಾಧಿಕಾರಿಯ ಕ್ರಮವನ್ನು ಪ್ರಶ್ನಿಸಿ ದಿನೇಶ್ ಪಂಜಿಗ‌ ಹಾಗೂ ಬೆಳ್ತಂಗಡಿಯ ಯಶೋಧರ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿದಾರರ ಪರ ವಕೀಲ ಮಹೇಶ್ ಕಜೆ ಅವರು ವಾದಿಸಿ, ನೋಟಿಸ್​ ಜಾರಿ ಮಾಡಿದ್ದು ಸರಿಯಿಲ್ಲ ಎಂದು ನ್ಯಾಯಾಲಯದ ಗಮನ ಸೆಳಿದ್ದರು. ಅರ್ಜಿದಾರರ ಪರವಾದ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು ಗಡಿಪಾರು ನೊಟೀಸ್​ಗೆ ತಡೆಯಾಜ್ಞೆ ನೀಡಿದ್ದಾರೆ. ಹಾಗೆ ಆಪಾದಿತರ ವಿರುದ್ಧದ ಎಲ್ಲ ಕಡತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ದೇವಸ್ಥಾನಕ್ಕೆ ಬರುವ ಹೆಣ್ಣು ಮಕ್ಕಳಿಗೆ ಕರಪತ್ರ ಹಂಚಿ ಲವ್ ಜಿಹಾದ್ ಜಾಗೃತಿ ಮೂಡಿಸಿದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು

ಕಾರ್ಯಕರ್ತನಿಗೂ ನೋಟಿಸ್​ ನೀಡಿದ್ದ ಪೊಲೀಸ್​

2023ರ ಡಿಸೆಂಬರ್​ ತಿಂಗಳಲ್ಲಿ ಪುತ್ತೂರು ಪೊಲೀಸರು, ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ಪುತ್ತೂರು ತಾಲೂಕಿನ ನೆಟ್ಟಣಿಗೆ ನಿವಾಸಿಯಾಗಿರುವ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಪ್ರವೀಶ್ ಕುಮಾರ್ ನಾಯರ್ ಎಂಬಾತನಿಗೆ ಪುತ್ತೂರು ಸಹಾಯಕ ಆಯುಕ್ತರು ನೋಟಿಸ್ ಜಾರಿ ಮಾಡಿದ್ದರು.

ಬಜರಂಗದ ಕಾರ್ಯಕರ್ತರಿಗೂ ಗಡಿಪಾರು ನೋಟಿಸ್​

ಕೋಮು ಗಲಭೆ, ದನಸಾಗಾಟ ಹಲ್ಲೆ, ನೈತಿಕ ಪೊಲೀಸ್ ಗಿರಿ ಸೇರಿ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಸಂಬಂಧ ನಿಮ್ಮನ್ನು ಯಾಕೆ ಗಡೀಪಾರು ಮಾಡಬಾರದು ಎಂದು ಕೇಳಿ 2023ರ ನವೆಂಬರ್ 16 ರಂದು ಐವರು ಬರಂಗದಳ ಕಾರ್ಯಕರ್ತರಿಗೆ ಪುತ್ತೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಜುಲೈ ತಿಂಗಳಲ್ಲಿ ಮೂವರು ಕಾರ್ಯಕರ್ತರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ