AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ಸಂಘರ್ಷ ಹಾಗೂ ಹುತಾತ್ಮರಾಗಲು ಮುಸ್ಲಿಮರಿಗೆ ಎಸ್​ಡಿಪಿಐ ರಾಜ್ಯಾಧ್ಯಕ್ಷ ಕರೆ

ಲೋಕಸಭಾ ಚುನಾವಣೆಗೆ ಇನ್ನು ಕೆಲವು ತಿಂಗಳು ಬಾಕಿ ಇರುವಂತೆಯೇ ‘ದೇಶದಲ್ಲಿ ಸಂಘರ್ಷಕ್ಕೆ ಮತ್ತು ಹುತಾತ್ಮರಾಗಲು ತಯಾರಾಗಿ ಎಂದು ಎಸ್​ಡಿಪಿಐ (SDPI) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಬಹಿರಂಗ ಕರೆ ಕೊಟ್ಟಿದ್ದಾರೆ. ‘ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಅನುಮತಿ ನೀಡಿರುವ ಹಿನ್ನೆಲೆ. ಅದನ್ನು ಖಂಡಿಸಿ ಇಂದು (ಫೆ,09) ಮಂಗಳೂರಿನಲ್ಲಿ SDPI, ‘ಜ್ಞಾನವಾಪಿ ನಮ್ಮದು, ನಮ್ಮದಾಗೆ ಉಳಿಯುವುದು ಎಂಬ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸುತ್ತಿದೆ.

ದೇಶದಲ್ಲಿ ಸಂಘರ್ಷ ಹಾಗೂ ಹುತಾತ್ಮರಾಗಲು ಮುಸ್ಲಿಮರಿಗೆ ಎಸ್​ಡಿಪಿಐ ರಾಜ್ಯಾಧ್ಯಕ್ಷ ಕರೆ
ಎಸ್​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on:Feb 09, 2024 | 5:30 PM

Share

ದಕ್ಷಿಣ ಕನ್ನಡ, ಫೆ.09: ಲೋಕಾಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿದೆ. ಈ ವೇಳೆ ದೇಶದಲ್ಲಿ ಸಂಘರ್ಷಕ್ಕೆ ಮತ್ತು ಹುತಾತ್ಮರಾಗಲು ತಯಾರಾಗಿ ಎಂದು ಎಸ್​ಡಿಪಿಐ (SDPI) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್(Abdul Majeed) ಬಹಿರಂಗ ಕರೆ ಕೊಟ್ಟಿದ್ದಾರೆ. ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಅನುಮತಿ ನೀಡಿರುವ ಹಿನ್ನೆಲೆ ಅದನ್ನು ಖಂಡಿಸಿ ಇಂದು (ಫೆ,09) ಮಂಗಳೂರಿನಲ್ಲಿ SDPI, ‘ಜ್ಞಾನವಾಪಿ ನಮ್ಮದು, ನಮ್ಮದಾಗೆ ಉಳಿಯುವುದು ಎಂಬ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಮಾತನಾಡಿದ ಅವರು ‘ಜ್ಞಾನವಾಪಿ ವಿಷಯ ಕುರಿತು ಹೈಕೋರ್ಟ್​ನಲ್ಲಿ ಕೇಸು ನಡೀತಾ ಇತ್ತು. ಆದರೂ ತರಾತುರಿಯಲ್ಲಿ ಕೆಳಗಿನ ಕೋರ್ಟ್ ನ ಜಡ್ಜ್ ಪೂಜೆಗೆ ಅವಕಾಶ ಕೊಟ್ಟರು ಎಂದು ಕಿಡಿಕಾರಿದ್ದಾರೆ.

ಸಂಘರ್ಷ, ತ್ಯಾಗ, ಬಲಿದಾನ ಮಾಡದೇ ನಮ್ಮ ಸಮಸ್ಯೆಗೆ ಪರಿಹಾರ ಇಲ್ಲ

ಪೂಜಾ ಸ್ಥಳ ಕಾಯಿದೆಯಡಿ ಯಥಾಸ್ಥಿತಿ ಆದೇಶ ಇದೆ. ಆದರೆ, ಆ ಕಾನೂನಿಗೆ ಮೂರು ಕಾಸಿನ ಬೆಲೆ ಕೊಡುತ್ತಿಲ್ಲ. ಸಂಘರ್ಷ, ತ್ಯಾಗ, ಬಲಿದಾನ ಮಾಡದೇ ನಮ್ಮ ಸಮಸ್ಯೆಗೆ ಪರಿಹಾರ ಇಲ್ಲ. ಈ ದೇಶದಲ್ಲಿ ಕಾನೂನು ಇದ್ಯಾ?, ಕಾನೂನು ಸತ್ತು ಹೋಗಿದೆ. ಯಾವ ಬೆಲೆ ತೆತ್ತಾದರೂ ಮಸೀದಿ, ಮಂದಿರ, ಚರ್ಚ್​ಗಳನ್ನು ಉಳಿಸಿಕೊಳ್ಳಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದ್ದಿದ್ದನ್ನ ಅಲ್ಲೇ ಉಳಿಸಿಕೊಳ್ಳಬೇಕು.

ಇದನ್ನೂ ಓದಿ:ಸಾವರ್ಕರ್ ವಿಚಾರದಲ್ಲಿ ಸ್ಪೀಕರ್ ಯುಟಿ ಖಾದರ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಎಸ್​ಡಿಪಿಐ ಮುಖಂಡ ಅರೆಸ್ಟ್

ಜೈಲಿಗೆ ಹೋಗಲು, ಕೇಸುಗಳನ್ನ ಹಾಕಿಸಿಕೊಳ್ಳಲು, ಹುತಾತ್ಮರಾಗಲು ತಯಾರಾಗಿ

ಸಿದ್ದರಾಮಯ್ಯ, ರಾಹುಲ್ ಗಾಂಧಿ, ಸೋನಿಯಾ ಹಾಗೂ ಖರ್ಗೆ ಉಳಿಸ್ತಾರೆ ಎಂದು ಕಾಯಬೇಡಿ. ಜೈಲಿಗೆ ಹೋಗಲು, ಕೇಸುಗಳನ್ನ ಹಾಕಿಸಿಕೊಳ್ಳಲು, ಲಾಠಿ ಏಟು ತಿನ್ನಲು ಹಾಗೂ ಹುತಾತ್ಮರಾಗಲು ಎಲ್ಲರೂ ತಯಾರಾಗಿ. ನಾವು ಇವತ್ತಲ್ಲ, ನಾಳೆ ಸಾಯಲೇಬೇಕು, ಹೀಗಾಗಿ ಸಂಘರ್ಷಕ್ಕೆ ತಯಾರಾಗಿ. ಯಾರೋ ಉಳಿಸ್ತಾರೆ ಅಂತ ಕಾಯಬೇಡಿ, ಬೀದಿಗಿಳಿದು ಹೋರಾಡಿ. ನಾವೆಲ್ಲರೂ ಸಂಘರ್ಷಕ್ಕೆ ತಯಾರಾಗೋಣ ಎಂದು ಎಸ್​ಡಿಪಿಐ (SDPI) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕರೆ ಕೊಟ್ಟಿದ್ದಾರೆ . ಪ್ರತಿಭಟನೆಯಲ್ಲಿ SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

ದ‌.ಕ ಜಿಲ್ಲೆಯಲ್ಲಿ ಸಂಘಪರಿವಾರವನ್ನ ಎದುರಿಸೋ ಜನ ಸಮೂಹ ಇದೆ-ರಾಷ್ಟ್ರೀಯ ಕಾರ್ಯದರ್ಶಿ

ಇದೇ ವೇಳೆ ಮಾತನಾಡಿದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗೀಪೇಟೆ, ‘ದೇಶದ ಸ್ಥಳೀಯ ಮತ್ತು ಮೇಲಿನ ನ್ಯಾಯಾಲಯಗಳ ತೀರ್ಪು ಅಂತಿಮ ಅಂದುಕೊಂಡಿದ್ದಾರೆ. ಆದರೆ, ಈ ದೇಶಕ್ಕೆ ಸರ್ವೋಚ್ಛ ಎನ್ನುವುದು ಸಂವಿಧಾನ. ಹೀಗಾಗಿ ನ್ಯಾಯಾಲಯಗಳು ಸಂವಿಧಾನದ ಪರವಾಗಿ ತೀರ್ಪು ನೀಡದಿದ್ದರೆ ಪ್ರಶ್ನಿಸಬೇಕು. ದ‌ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರವನ್ನ ಎದುರಿಸೋ ಜನ ಸಮೂಹ ಇದೆ. ನಾವು ಸೋತಿರಬಹುದು, ಆದರೆ ಸತ್ತಿಲ್ಲ.

ಮೋಹನ್ ಭಾಗವತ್ ಯಾರು ನಮ್ಮ ರಾಷ್ಟ್ರಪತಿಯಾ?, ನಮ್ಮ ಜೀವ ಹೋದರೂ ಪರವಾಗಿಲ್ಲ, ಹಕ್ಕಿಗಾಗಿ ನಾವು ಹೋರಾಟ ಮಾಡಬೇಕು. ಯಾವ ಕ್ಷಣದಲ್ಲಾದರೂ ನಮ್ಮ ಬಂಧನವಾಗಬಹುದು. ಆದರೆ, ಹೋರಾಟದಿಂದ ಹಿಂದೆ ಸರಿಯಲ್ಲ. ಇ.ಡಿ, ಎನ್ಐಎ ಮೂಲಕ ನೀವು ಭಯ ಪಡಿಸಿದರೂ ನಾವು ಭಯ ಪಡಲ್ಲ. ನಾವು ಕೇವಲ ಮಸೀದಿಗಳನ್ನ ಕಳೆದುಕೊಳ್ತಿಲ್ಲ, ನಮ್ಮ ಅಸ್ತಿತ್ವ ಕಳೆದುಕೊಳ್ತಾ ಇದೀವಿ. ಈ ದೇಶದ ಮಣ್ಣಿನಲ್ಲಿ ನಮಗೆ ಹಕ್ಕಿದೆ, ನಮ್ಮ ಪೂರ್ವಿಕರ ಅಸ್ತಿತ್ವ ಇದೆ. ನಿಮ್ಮ ಮನೆಗೆ ನುಸುಳಿದ್ರೆ ನೀವು ಸುಮ್ಮನೆ ಇರ್ತೀರಾ?, ಅದೇ ರೀತಿ ನಮ್ಮ ಧಾರ್ಮಿಕ ಚಿಹ್ನೆಗಳಾದ ಮಸೀದಿಗಳಿಗೆ ನುಸುಳಿದಾಗಲೂ ಪ್ರತಿರೋಧ, ವಿರೋಧ, ಆಕ್ರೋಶ ಇರಲಿ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Fri, 9 February 24

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್