ಗುರುತಿನ ಚೀಟಿಗಾಗಿ ಮಂಗಳೂರು ಪಾಲಿಕೆ ಆಯುಕ್ತರ ಕಚೇರಿಗೆ ಬೀದಿ ವ್ಯಾಪಾರಿಗಳಿಂದ ಮುತ್ತಿಗೆ
ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡದ ಹಿನ್ನೆಲೆ ಮಂಗಳೂರು ಪಾಲಿಕೆ ಆಯುಕ್ತರ ಕಚೇರಿಗೆ ಇಂದು ಬೀದಿ ಬದಿ ವ್ಯಾಪಾರಿಗಳು ಮುತ್ತಿಗೆ ಹಾಕಿದ ಘಟನೆ ನಡೆಯಿತು. ವರ್ಷ ಕಳೆದರೂ ಗುರುತಿನ ಚೀಟಿ ನೀಡದ ಪಾಲಿಕೆ ವಿರುದ್ಧ ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದು, ಈ ತಿಂಗಳ ಒಳಗಾಗಿ ವಿತರಣೆ ಮಾಡಲಾಗುವುದು ಎಂದು ಆಯುಕ್ತರು ಭರವಸೆ ನೀಡಿದ್ದಾರೆ.
ಮಂಗಳೂರು, ಅ.5: ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡದ ಹಿನ್ನೆಲೆ ಮಂಗಳೂರು (Mangaluru) ಪಾಲಿಕೆ ಆಯುಕ್ತರ ಕಚೇರಿಗೆ ಇಂದು ಬೀದಿ ಬದಿ ವ್ಯಾಪಾರಿಗಳು ಮುತ್ತಿಗೆ ಹಾಕಿದ ಘಟನೆ ನಡೆಯಿತು. ವರ್ಷ ಕಳೆದರೂ ಗುರುತಿನ ಚೀಟಿ ನೀಡದ ಪಾಲಿಕೆ ವಿರುದ್ಧ ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದರು.
ಗುರುತಿನ ಚೀಟಿ ಮುದ್ರಣಗೊಂಡಿದ್ದು, ಪಟ್ಟಣ ವ್ಯಾಪಾರ ಸಮಿತಿ ಅನುಮೋದನೆ ನೀಡಿದೆ. ಆದರೂ ಚೀಟಿಗಳನ್ನು ಪಾಲಿಕೆ ವಿತರಣೆ ಮಾಡಿಲ್ಲ. ಹಲವು ಬಾರಿ ಪಾಲಿಕೆ ಮುಂದೆ ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಡಿವೈಎಫ್ಐ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಸ್ಥರು ದಿಢೀರ್ ಮುತ್ತಿಗೆ ಹಾಕಿ ಗುರುತಿನ ಚೀಟಿ ಹಾಗೂ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ: ಮಂಗಳೂರು: ಬಜರಂಗದಳ ಮುಖಂಡ ಮತ್ತು ತಂಡದಿಂದ ಗೂಂಡಾಗಿರಿ
ವ್ಯಾಪಾರಿಗಳ ಹೋರಾಟಕ್ಕೆ ಕೊನೆಗೂ ಸಿಕ್ಕ ಜಯ
ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ಆನಂದ್, ಈ ತಿಂಗಳ ಒಳಗೆ ಗುರುತಿನ ಚೀಟಿ, ಪ್ರಮಾಣ ಪತ್ರ ನೀಡುವ ಭರವಸೆ ನೀಡಿದರು. 667 ಜನರಿಗೆ ಗುರುತಿನ ಚೀಟಿ, ಪ್ರಮಾಣಪತ್ರ ನೀಡಬೇಕಾಗಿದೆ. ಮೇಯರ್, ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನೀಡುತ್ತೇವೆ. 30 ರ ಒಳಗಡೆ ಕಾರ್ಯಕ್ರಮ ಆಯೋಜಿಸಿ ಐಡೆಂಟಿಟಿ ಕಾರ್ಡ್, ಪ್ರಮಾಣಪತ್ರ ವಿತರಣೆ ಮಾಡುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ