ಐಎಸ್ಐ ಜತೆ ಜಿತೇಂದ್ರ ಸಿಂಗ್ ನಂಟು; ಸ್ಫೋಟಕ ಮಾಹಿತಿ ಬಯಲು
ಐಎಸ್ಐ ಜತೆ ನಂಟು ಹೊಂದಿದ್ದ ಜಿತೇಂದ್ರ ಸಿಂಗ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಆತನ ವಿರುದ್ಧ ದಾಖಲಾದ ಸ್ಫೋಟಕ ಮಾಹಿತಿ ಬಯಲಾಗಿದೆ. ಆತ ಕರಾಚಿಯ ಇಂಟೆಲಿಜೆನ್ಸ್ ಆಪರೇಟಿವ್ ಜೊತೆ ನೇರ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿದೆ. ಜಿತೇಂದ್ರ ಬಗ್ಗೆ ಪೊಲೀಸರಿಂದ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಲಾಗಿದೆ. ಜಾಲಿ ಮೊಹಲ್ಲಾದಲ್ಲಿರುವ ಜಿತೇಂದ್ರ ಮನೆ ಮೇಲೆ ದಾಳಿ ಮಾಡಲಾಗಿದೆ. ಮಿಲಿಟರಿ ಡ್ರೆಸ್ ಹಾಕಿಕೊಂಡು ಫೋಟೋಗಳ ರವಾನೆ ಮಾಡಿದ್ದ. ಆತ ಪಾಕಿಸ್ತಾನದ ಬೇಹುಗಾರಿಕೆಗೆ ಫೋಟೊಗಳ ರವಾನೆ ಮಾಡಿದ್ದ ಎಂದು ತಿಳಿದುಬಂದಿದೆ.
ಜಿತೇಂದ್ರ, ಪಾಕಿಸ್ತಾನದ ಮೊಬೈಲ್ ಸಂಖ್ಯೆಗೆ ನಿರಂತರವಾಗಿ ಕರೆ ಮಾಡುತ್ತಿದ್ದ. ಪೂಜಾಜಿ ಎಂದು ನಂಬರ್ ಸೇವ್ ಮಾಡಿದ್ದ. ಮೆಸೇಜ್, ಆಡಿಯೋ, ವಿಡಿಯೋ ಕಳುಹಿಸಿದ್ದ. ಆದರೆ, ಆತ ಈ ಹಿಂದೆ ಕಳಿಸಿದ್ದ ಮೆಸೇಜ್ ಡಿಲೀಟ್ ಮಾಡಿದ್ದಾನೆ. ಉಳಿದಂತೆ, ಜಿತೇಂದ್ರ ಮೊಬೈಲ್ನಲ್ಲಿ ಹಲವು ಫೋಟೋಗಳು ಪತ್ತೆಯಾಗಿದೆ. ಮಿಲಿಟರಿ ಸಮವಸ್ತ್ರದಲ್ಲಿರುವ ಹಲವು ಫೋಟೋಗಳು ಪತ್ತೆ ಆಗಿದೆ.
ಪಾಕ್ ಬೇಹುಗಾರಿಕೆ ಮಹಿಳೆಗೆ ತಾನು ಮಿಲಿಟರಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಪಾಕ್ ಐಪಿ ಅಡ್ರೆಸ್ ಹೊಂದಿರುವ ನಂಬರ್ ಜತೆ ಸಂಪರ್ಕ ಇಟ್ಟುಕೊಂಡಿದ್ದ. ಬದ್ಧವೈರಿ ಪಾಕ್ ಗೂಢಚಾರಿಕೆ ಸಿಸಿಬಿ ತನಿಖೆಯಲ್ಲಿ ಈ ವಿಚಾರ ಪತ್ತೆ ಆಗಿದೆ. ದೇಶದ್ರೋಹಿ ಜಿತೇಂದ್ರ ಸಿಂಗ್ ವಿರುದ್ಧದ ದೂರಲ್ಲಿ ಏನೇನಿದೆ? ಎಂದು ಮಾಹಿತಿ ಇದೀಗ ಲಭ್ಯವಾಗಿದೆ. ಆತ ವಾಟ್ಸಪ್ ಮೂಲಕವೇ ಸಂಪರ್ಕ ಹೊಂದಿದ್ದ ಎಂಬುದು ತಿಳಿದುಬಂದಿದೆ.
ಪಾಕ್ ಜತೆ ಸಂಪರ್ಕಿಸಿದ್ದ ನಂಬರ್ ಬಗ್ಗೆ ಪೊಲೀಸರು ಕೇಳಿದಾಗ ಇದು ನನ್ನದೇ ನಂಬರ್ ಎಂದು ಜಿತೇಂದ್ರ ಸಿಂಗ್ ಒಪ್ಪಿಕೊಂಡಿದ್ದಾನೆ. ಕರಾಚಿ ಇಂಟಲಿಜೆನ್ಸ್ ನಂಬರ್ನ್ನ ಹುಡುಗಿ ಹೆಸರಲ್ಲಿ ಸೇವ್ ಮಾಡಿಕೊಂಡಿದ್ದ. ರಾಜಸ್ಥಾನ ಮೂಲದ 24 ವರ್ಷದ ಜಿತೇಂದ್ರ ಸಿಂಗ್ ಪೂಜಾಜಿ ಎಂದು ಸೇವ್ ಮಾಡಿದ್ದ ಸಂಪರ್ಕ ಸಂಖ್ಯೆ ಜತೆ ವಾಟ್ಸಪ್, ಫೇಸ್ಬುಕ್ನಲ್ಲಿ ಚಾಟಿಂಗ್ ಮಾಡಿದ್ದ. ಪೂಜಾಜಿ ಕೋರಿಕೆಯಂತೆ ಭಾರತ ಮಿಲಿಟರಿ ಫೋಟೋ ಹಂಚಿಕೆ ಮಾಡಿದ್ದ. ಈ ಬಗ್ಗೆ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.