ಬಂಧಿತ ಪಾಕ್ ಉಗ್ರರ ಗುಂಪು ಎಲ್ಲ ಮೆಟ್ರೊ ನಗರಗಳ ಮೇಲೆ ಗುರಿಯಿಟ್ಟಿತ್ತು; ಕರಾಚಿ ತರಬೇತುದಾರರು ಯೋಜನೆ ಬಗ್ಗೆ ಹೇಳಿದ್ದರು ಎಂದ ಆರೋಪಿ 

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಈಗ 6-7 ಶಂಕಿತರನ್ನು ಹುಡುಕುತ್ತಿದ್ದು, ಮುಂದಿನ ದಿನಗಳಲ್ಲಿ ಅವರನ್ನು ಬಂಧಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಪಾಕಿಸ್ತಾನ ಮೂಲದ ತರಬೇತುದಾರರು ಜೀಶಾನ್ ಮತ್ತು ಇತರ ಆರೋಪಿಗಳು ಭಾರತಕ್ಕೆ ಹಿಂದಿರುಗಿದಾಗ ಈ 6-7 ಜನರನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಂಧಿತ ಪಾಕ್ ಉಗ್ರರ ಗುಂಪು ಎಲ್ಲ ಮೆಟ್ರೊ ನಗರಗಳ ಮೇಲೆ ಗುರಿಯಿಟ್ಟಿತ್ತು; ಕರಾಚಿ ತರಬೇತುದಾರರು ಯೋಜನೆ ಬಗ್ಗೆ ಹೇಳಿದ್ದರು ಎಂದ ಆರೋಪಿ 
ಶಂಕಿತ ಉಗ್ರರು

ದೆಹಲಿ: ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಘಟಕವು ಎರಡು ದಿನಗಳ ಹಿಂದೆ ಬಹು-ರಾಜ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದು, ದೇಶದಾದ್ಯಂತ ಸರಣಿ ಸ್ಫೋಟಗಳನ್ನು ಯೋಜಿಸಿದೆ ಎಂದು ಉನ್ನತ ಮೂಲಗಳು ಸಿಎನ್ಎನ್-ನ್ಯೂಸ್ 18 ಗೆ ತಿಳಿಸಿವೆ. ಬಂಧಿತ ಆರು ಜನರಲ್ಲಿ ಒಬ್ಬನಾದ ಜೀಶಾನ್ ಖಮಾರ್ ಅವರ ವಿಚಾರಣೆಯ ವೇಳೆ ಈ ವಿವರಗಳು ಲಭ್ಯವಾಗಿದೆ. ಎಲ್ಲಾ ಮೆಟ್ರೋ ನಗರಗಳಲ್ಲಿ ಸರಣಿ ಭಯೋತ್ಪಾದಕ ದಾಳಿ ನಡೆಸಲು ಗ್ಯಾಂಗ್ ಬಯಸಿದೆ ಎಂದು ಮೂಲಗಳು ತಿಳಿಸಿವೆ. ಕರಾಚಿಯಲ್ಲಿ ತನ್ನ ತರಬೇತುದಾರರಿಂದ ಈ ಯೋಜನೆಯನ್ನು ಕೇಳಿಸಿಕೊಂಡೆ ಎಂದು ಜೀಶಾನ್ ತನ್ನ ವಿಚಾರಣೆಯ ಸಮಯದಲ್ಲಿ ತನಿಖಾಧಿಕಾರಿಗಳಿಗೆ ಹೇಳಿದ್ದಾನೆ.

ಉಗ್ರನ್ನು ಸೆರೆ ಹಿಡಿದಿರುವುದು ಭದ್ರತಾ ಪಡೆಗಳ ಬಹುದೊಡ್ಡ ಸಾಧನೆಯಾಗಿದ್ದು, ಆರಂಭಿಕ ಹಂತದಲ್ಲೇ ಆರು ಜನರನ್ನು ಬಂಧಿಸುವ ಮೂಲಕ ದೇಶಾದ್ಯಂತ ಕನಿಷ್ಠ ಐದು ಸರಣಿ ಸ್ಫೋಟಗಳನ್ನು ತಪ್ಪಿಸಲು ಸಾಧ್ಯವಾಯಿತು ಎಂದು ಗುಪ್ತಚರ ಇಲಾಖೆಯ ಉನ್ನತ ಮೂಲಗಳು ಹೇಳಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಈಗ 6-7 ಶಂಕಿತರನ್ನು ಹುಡುಕುತ್ತಿದ್ದು, ಮುಂದಿನ ದಿನಗಳಲ್ಲಿ ಅವರನ್ನು ಬಂಧಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಪಾಕಿಸ್ತಾನ ಮೂಲದ ತರಬೇತುದಾರರು ಜೀಶಾನ್ ಮತ್ತು ಇತರ ಆರೋಪಿಗಳು ಭಾರತಕ್ಕೆ ಹಿಂದಿರುಗಿದಾಗ ಈ 6-7 ಜನರನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ತರಬೇತುದಾರರನ್ನು ಕರಾಚಿಯ ಫಾರ್ಮ್ ಹೌಸ್‌ಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲಿ ಆರು ಆರೋಪಿಗಳು ಐಇಡಿಗಳು, ಶಸ್ತ್ರಾಸ್ತ್ರ ಮತ್ತು ಬೆಂಕಿಹಚ್ಚುವಿಕೆಗೆ ಸಂಬಂಧಿಸಿದ ಚಟುವಟಿಕೆಗಳ ಮೇಲೆ 15 ದಿನಗಳವರೆಗೆ ತರಬೇತಿ ಪಡೆದರು.ಅವರು ಜೈಷ್ ಅಥವಾ ಲಷ್ಕರೆ ತೈಬಾದಂತಹ ದೊಡ್ಡ ಗುಂಪುಗಳಿಗೆ ತರಬೇತಿ ನೀಡಲು ಉದ್ದೇಶಿಸಿದ್ದರು. ಅವರು ಸಣ್ಣ ಗುಂಪುಗಳಿಗೆ ತರಬೇತಿ ನೀಡುವುದಿಲ್ಲ ಎಂದು ತರಬೇತುದಾರರು ಸ್ಪಷ್ಟವಾಗಿ ಹೇಳಿದ್ದರು.

ದೆಹಲಿ ಪೊಲೀಸರ ವಿಶೇಷ ಘಟಕ ಮತ್ತು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳವು ಮಂಗಳವಾರ ಉಗ್ರರ ಘಟಕವನ್ನು ಭೇದಿಸಿತು. ಇಬ್ಬರು ಪಾಕ್-ಐಎಸ್‌ಐ ತರಬೇತಿ ಪಡೆದ ಭಯೋತ್ಪಾದಕರು ಸೇರಿದಂತೆ ಆರು ಜನರನ್ನು ಬಂಧಿಸಿದೆ. ಗಣೇಶ ಚತುರ್ಥಿ, ನವರಾತ್ರಿ ಮತ್ತು ರಾಮಲೀಲಾ ಹಬ್ಬಗಳಲ್ಲಿ ದೆಹಲಿ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ಹಲವಾರು ಸ್ಫೋಟಗಳನ್ನು ಈ ಗುಂಪು ಯೋಜಿಸಿತ್ತು.

ಆರೋಪಿಗಳನ್ನು ಮಹಾರಾಷ್ಟ್ರದ ಜಾನ್ ಮೊಹಮ್ಮದ್ ಶೇಖ್ (47), ದೆಹಲಿಯ ಒಸಾಮಾ (22), ಉತ್ತರ ಪ್ರದೇಶದ ರಾಯ್ ಬರೇಲಿಯ ಮೂಲ್‌ಚಂದ್ (47), ಅಲಹಾಬಾದ್‌ನ ಜೀಶಾನ್  ಖಮಾರ್ (28), ಬೆಹರೈಚ್‌ನ ಮೊಹಮದ್ ಅಬುಬಕರ್ (23) ಮತ್ತು ಲಕ್ನೋದಿಂದ ಮೊಹಮದ್ ಅಮೀರ್ ಜಾವೇದ್ (31) ಎಂದು ಗುರುತಿಸಲಾಗಿದೆ. ಈ ಕಾರ್ಯಾಚರಣೆಗೆ ಸರಿಸುಮಾರು 3 ಲಕ್ಷ ರೂಪಾಯಿ ಖರ್ಚು ಆಗಲಿದ್ದು  ಇದನ್ನು ಒಸಾಮನ ತಂದೆ ಒಸಾದೂರ್ ದುಬೈನಿಂದ ವರ್ಗಾಯಿಸಿದ್ದರು. ಒಸದೂರ್ ಅನ್ನು ಶೀಘ್ರವೇ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ ಮತ್ತು ಭಾರತ ಸರ್ಕಾರವು ಅದಕ್ಕಾಗಿ ದುಬೈ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ.

ಜಾನ್ ಮೊಹಮ್ಮದ್ ಶೇಖ್ ಅವರಿಗೆ ‘ಡಿ-ಕಂಪನಿ’ ಅಥವಾ ಅಂಡರ್ ವರ್ಲ್ಡ್ ಸ್ಫೋಟಕಗಳನ್ನು ಸ್ವೀಕರಿಸಲು ಮತ್ತು ದೇಶದ ಇತರ ಭಾಗಗಳಲ್ಲಿ ನಿಯೋಜಿಸಲಾಗಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟಿಸುವಲ್ಲಿ ಪಾಕ್-ಐಎಸ್‌ಐ ಮತ್ತು ಭೂಗತ ಜಗತ್ತಿನ ನಡುವಿನ ಸಂಬಂಧವನ್ನು ಈ ಗುಂಪು ಬಹಿರಂಗಪಡಿಸಿದೆ.

ಇದನ್ನೂ ಓದಿ:ಉತ್ತರ ಪ್ರದೇಶ ಚುನಾವಣೆಗೆ ಮುನ್ನ ದಾಳಿ ಸಂಚು ಹೂಡಿದ್ದ 6 ಶಂಕಿತ ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸ್, ಇಬ್ಬರಿಗೆ ಪಾಕ್ ನಂಟು

ಇದನ್ನೂ ಓದಿ: ‘ಭಾರತದಲ್ಲಿ ಹಬ್ಬದ ವೇಳೆ ಸ್ಫೋಟ ಸಂಚು ರೂಪಿಸಿದ್ದ ಉಗ್ರರಿಗೆ ಕರಾಚಿಯಲ್ಲಿ ತರಬೇತಿ ನೀಡಲಾಗಿತ್ತು’

(Pakistan-backed terror module that was busted two days ago planned serial blasts across the country)

Read Full Article

Click on your DTH Provider to Add TV9 Kannada