ಮಂಗಳೂರು: ಜೂನ್ 23ರಂದು ಉಚ್ಚಿಲ ಬಟ್ಟಪಾಡಿ ಬಳಿ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದ ವಿದೇಶಿ ಸರಕು ಸಾಗಣೆ ಹಡಗಿನಿಂದ (Ship) ತೈಲ (Oil) ಸೋರಿಕೆ ಆಗುವ ಆತಂಕ ಶುರುವಾಗಿದೆ. ಸಿರಿಯಾ ದೇಶದ ಎಂಬಿ ಪ್ರಿನ್ಸೆಸ್ ಮಿರಲ್ ವ್ಯಾಪಾರಿ ಹಡಗು ಚೀನಾದಿಂದ ಲೆಬನಾನ್ಗೆ ಸ್ಟೀಲ್ ಕಾಯಿಲ್ ಸಾಗಿಸುತ್ತಿತ್ತು. ಸುಮಾರು 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದಾಗ ತಾಂತ್ರಿಕ ಕಾರಣದಿಂದ ಹಡಗು ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಇಂಡಿಯನ್ ಕೋಸ್ಟ್ ಗಾರ್ಡ್ನಿಂದ 15 ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ. ಆದರೆ ಹಡಗಿನ ತೈಲ ಸೋರಿಕೆಯಾದ್ರೆ ಮತ್ಸ್ಯ ಸಂಕುಲ ನಾಶವಾಗುವ ಆತಂಕ ಹೆಚ್ಚಾಗಿದೆ.
ತೈಲ ಸೋರಿಕೆಯಾಗುವ ಆತಂಕದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕೋಸ್ಟ್ ಗಾರ್ಡ್ ಅಲರ್ಟ್ ಘೋಷಣೆ ಮಾಡಿದೆ. ತೈಲ ಸೋರಿಕೆಯಾದರೆ ಮುಂದಿನ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಚರ್ಚೆ ಮಾಡುತ್ತಾರೆ.
ಇನ್ನು ಲೆಬನಾನ್ಗೆ ಹೊರಟಿದ್ದ ಹಡಗು ಮಂಗಳೂರಿಗೆ ಬಂದಿದ್ದೇಕೆ? ಎಂಬ ಪ್ರಶ್ನೆ ಮೂಡಿದ್ದು, ಮಂಗಳೂರು ಸಮುದ್ರ ತೀರ ಪ್ರವೇಶದ ಬಗ್ಗೆ ಅನುಮಾನವೂ ಮೂಡಿದೆ. ಹೀಗಾಗಿ ಕೇಂದ್ರ ತನಿಖಾ ದಳದಿಂದ ಮಂಗಳೂರು ಕಡಲ ತೀರ ಪ್ರವೇಶದ ಬಗ್ಗೆ ತನಿಖೆ ನಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಹ್ಯಾಕರ್ ಶ್ರೀಕಿ ಸೋದರನಿಗೆ ದೇಶ ಬಿಟ್ಟು ತೆರಳದಂತೆ ನಿರ್ಬಂಧ: ಇಡಿ ತನಿಖೆಗೆ ಸಹಕರಿಸಲು ಹೈಕೋರ್ಟ್ ಸೂಚನೆ
ತೈಲ ಸೋರಿಕೆಯಾದರೆ ಭಾರೀ ಪ್ರಮಾಣದ ಅಗ್ನಿ ಅವಘಡವಾಗುವ ಸಾಧ್ಯತೆ ಇರುತ್ತದೆ. ಸ್ಥಳೀಯರಿಗೆ ಸಾಕಷ್ಟು ತೊಂದರೆಯಾಗಬಹುದು. ಸದ್ಯ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯ ಸಿಬ್ಬಂದಿ ದೌಡಾಯಿಸಿದ್ದಾರೆ.
ಕೋಸ್ಟ್ ಗಾರ್ಡ್ ಮಿನಿ ಜೆಟ್ ಆಗಮನ:
ಮುಳುಗಿರುವ ಶಿಪ್ನ ಸುತ್ತಾ ಮುತ್ತಾ ಕೋಸ್ಟ್ ಗಾರ್ಡ್ ಮಿನಿ ಜೆಟ್ ಇದೆ. ತೈಲ ಸೋರಿಕೆಯಾದರೆ ಮಾಹಿತಿ ನೀಡಲು ಜೆಟ್ ಸುತ್ತು ಹೊಡೆಯುತ್ತಿದೆ. ಮುಳುಗಿರುವ ಶಿಪ್ ಬಳಿ ಬೇರೆ ಶಿಪ್, ಮೀನುಗಾರಿಕೆ ಬೋಟ್ ಬರದಂತೆ ಎಚ್ಚರಿಸಲಾಗಿದೆ.
ಇದನ್ನೂ ಓದಿ: ಹ್ಯಾಕರ್ ಶ್ರೀಕಿ ಸೋದರನಿಗೆ ದೇಶ ಬಿಟ್ಟು ತೆರಳದಂತೆ ನಿರ್ಬಂಧ: ಇಡಿ ತನಿಖೆಗೆ ಸಹಕರಿಸಲು ಹೈಕೋರ್ಟ್ ಸೂಚನೆ
Published On - 12:59 pm, Sun, 26 June 22