ವಾರಾಂತ್ಯ ಪ್ರವಾಸದ ಮೋಜು: ಸಮುದ್ರಕ್ಕಿಳಿದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ನೀರುಪಾಲು, ಇಬ್ಬರ ರಕ್ಷಣೆ

ಬೆಂಗಳೂರಿನಿಂದ 80 ಜನ ವಿದ್ಯಾರ್ಥಿಗಳ ತಂಡ ಶನಿವಾರ ಕುಮಟಾದ ಸಿಲವರ್ ಸ್ಯಾಂಡ್ ರೆಸಾರ್ಟ ನಲ್ಲಿ ಬಂದಿಳಿದಿದ್ದರು. ಸಮುದ್ರಕ್ಕಿಳಿದು ಆಟವಾಡುವಾಗ ಅಲೆಗೆ ನಾಲ್ಕು ಜನ ತೇಲಿಹೋಗಿದ್ದರು.

ವಾರಾಂತ್ಯ ಪ್ರವಾಸದ ಮೋಜು: ಸಮುದ್ರಕ್ಕಿಳಿದ  ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ನೀರುಪಾಲು, ಇಬ್ಬರ ರಕ್ಷಣೆ
ವಾರಾಂತ್ಯ ಪ್ರವಾಸದ ಮೋಜು: ಸಮುದ್ರಕ್ಕಿಳಿದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ನೀರುಪಾಲು, ಇಬ್ಬರ ರಕ್ಷಣೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 25, 2022 | 4:35 PM

ಕಾರವಾರ: ಪ್ರವಾಸಕ್ಕೆ ಬಂದು ಸಮುದ್ರಕ್ಕಿಳಿದ ಇಬ್ಬರು ವಿದ್ಯಾರ್ಥಿಗಳು ಜಲ ಸಮಾಧಿಯಾಗಿದ್ದು, ಇಬ್ಬರ ರಕ್ಷಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಗಾಲ್ ನಲ್ಲಿ ಈ ದುರ್ಘಟನೆ ನಡೆದಿದೆ. ಬೆಂಗಳೂರಿನಿಂದ 80 ಜನ ವಿದ್ಯಾರ್ಥಿಗಳ ತಂಡ ಶನಿವಾರ ಕುಮಟಾದ ಸಿಲ್ವರ್ ಸ್ಯಾಂಡ್ ರೆಸಾರ್ಟ್​​ ನಲ್ಲಿ ಬಂದಿಳಿದಿದ್ದರು.

ಸಮುದ್ರಕ್ಕಿಳಿದು ಆಟವಾಡುವಾಗ ನಾಲ್ಕು ಮಂದಿ ಅಲೆಗೆ ಸಿಲುಕಿ ತೇಲಿಹೋಗಿದ್ದರು. ಇಬ್ಬರ ರಕ್ಷಣೆ ಮಾಡಿದ್ದು, ಇನ್ನಿಬ್ಬರು ನೀರುಪಾಲಾಗಿದ್ದಾರೆ. ಬೆಂಗಳೂರು ಮೂಲದ ಅರ್ಜುನ್ ಮತ್ತು ಚೈತ್ರಾ ಸಮುದ್ರದ ಅಲೆಗೆ ಸಿಲುಕಿ ಮೃತರಾದವರು. ಮೃತ ಯುವತಿ ಚೈತ್ರಾ ದೇಹ ಪತ್ತೆಯಾಗಿದ್ದು, ಅರ್ಜುನ್ ದೇಹಕ್ಕಾಗಿ ಅಗ್ನಿಶಾಮಕ ದಳದಿಂದ ಶೋಧಕಾರ್ಯ ನಡೆದಿದೆ. ಸ್ಥಳದಲ್ಲಿ ಕುಮಟಾ ಪೊಲೀಸರ ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ:

ಕಾನ್ಸ್​​​ಟೇಬಲ್ ಮೇಲೆ ಡಿವೈಎಸ್ಪಿ ಹಲ್ಲೆ ಪ್ರಕರಣ: ಹಾಸನ ಎಸ್ಪಿ ಶ್ರೀನಿವಾಸ ಗೌಡ ಪ್ರತಿಕ್ರಿಯೆ ಇದನ್ನೂ ಓದಿ:

Viral Video: ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ತನ್ನ ಮರಿಯನ್ನು ಕಾಪಾಡಿದ ತಾಯಿ ಆನೆ

 

Published On - 4:30 pm, Sat, 25 June 22