ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜುಲೈ 1 ರಿಂದ ರಾಜ್ಯಾದ್ಯಂತ ಪೌರಕಾರ್ಮಿಕರ ಸ್ಟ್ರೈಕ್!

ಗುತ್ತಿಗೆ ಕಾರ್ಮಿಕರನ್ನು ಕಾಯಂ ನೌಕರರನ್ನಾಗಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಪೌರಕಾರ್ಮಿಕರು ಜುಲೈ 1ರಿಂದ ಸ್ಟ್ರೈಕ್​ ನಡೆಸಲು ಮುಂದಾಗಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜುಲೈ 1 ರಿಂದ ರಾಜ್ಯಾದ್ಯಂತ ಪೌರಕಾರ್ಮಿಕರ ಸ್ಟ್ರೈಕ್!
ಸಾಂಕೇತಿಕ ಚಿತ್ರ
TV9kannada Web Team

| Edited By: Rakesh Nayak

Jun 25, 2022 | 4:23 PM

ಬೆಂಗಳೂರು: ಗುತ್ತಿಗೆ ಕಾರ್ಮಿಕರನ್ನು ಕಾಯಂ ನೌಕರರನ್ನಾಗಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಪೌರಕಾರ್ಮಿಕರು(Pourakarmikas) ಜುಲೈ 1ರಿಂದ ಮುಷ್ಕರ (Strike)​ ನಡೆಸಲು ಮುಂದಾಗಿದ್ದಾರೆ. ಗುತ್ತಿಗೆ ಕಾರ್ಮಿಕರನ್ನು ಕಾಯಂ ನೌಕರರನ್ನಾಗಿ ಮಾಡುವುದು ಪೌರ ಕಾರ್ಮಿಕರ ಪ್ರಾಥಮಿಕ ಬೇಡಿಕೆಯಾಗಿದ್ದು, ಇದರೊಂದಿಗೆ ಕುಡಿಯುವ ನೀರು, ಶೌಚಾಲಯಗಳು, ವಿಶ್ರಾಂತಿ ಪ್ರದೇಶಗಳಂತಹ ಮೂಲಭೂತ ಸೌಲಭ್ಯಗಳನ್ನು ಮತ್ತು ಪಾವತಿಸಿದ ಹೆರಿಗೆ ರಜೆ, ಆರೋಗ್ಯ ವಿಮೆ ಮತ್ತು ಪಿಂಚಣಿಗಳಂತಹ ಸೌಲಭ್ಯಗಳು ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಲಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಿಕ್ಷಕರ ಮಕ್ಕಳು ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಕಲಿಯಬೇಕು, ಆಗಲೇ ಎಲ್ಲವೂ ಸರಿ ಹೋಗುವುದು -ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ

ಕರ್ನಾಟಕ ಪೌರಕಾರ್ಮಿಕ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾತನಾಡಿ, ಕಾರ್ಮಿಕರಿಗೆ 60 ವರ್ಷ ತುಂಬಿದಾಗ ಪಿಂಚಣಿ ಇಲ್ಲದೆ ಸೇವೆಯಿಂದ ನಿವೃತ್ತರಾಗುತ್ತಾರೆ. ಕರ್ನಾಟಕದಲ್ಲಿರುವ ಎಲ್ಲಾ ಪೌರಕಾರ್ಮಿಕರಿಗೆ ಆರೋಗ್ಯ ವಿಮೆ ಮತ್ತು ಪಿಂಚಣಿ ಪ್ರಯೋಜನಗಳನ್ನು ನಾವು ಬಯಸುತ್ತೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ 30 ಜಿಲ್ಲೆಗಳಲ್ಲಿ ಮುಷ್ಕರ ನಡೆಸಲಾಗುವುದು. ಸಿಪಿಐ, ಸಿಪಿಐ(ಎಂ), ಮತ್ತು ಡಿಎಸ್‌ಎಸ್‌ನಂತಹ ವಿವಿಧ ರಾಜಕೀಯ ಸಂಘಟನೆಗಳು ಪೌರಕಾರ್ಮಿಕರ ಬೆಂಬಲಕ್ಕೆ ಬಂದಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಕಂಪ್ಲಿ ಕೋಟೆಯಲ್ಲಿ ಪಿರಂಗಿ ಗುಂಡುಗಳು ಪತ್ತೆ! ಅವು ಆದಿಲ್ ಶಾಹಿ ಕಾಲದ್ದು ಎಂದರು ಇತಿಹಾಸ ಸಂಶೋಧಕ ಕೋಲ್ಕಾರ್

ಬಿಬಿಎಂಪಿ ಪೌರಕಾರ್ಮಿಕ ಒಕ್ಕೂಟದ ಅಧ್ಯಕ್ಷೆ ನಿರ್ಮಲಾ ಮಾತನಾಡಿ, ‘ಕಸ ಎತ್ತಲು ಕಾರ್ಮಿಕರಿಗೆ ಕಸದ ಬುಟ್ಟಿ ಕೂಡ ನೀಡಿಲ್ಲ. ತ್ಯಾಜ್ಯ ಮತ್ತು ಕಸವನ್ನು ಸಂಗ್ರಹಿಸಲು ಮತ್ತು ವಿಲೇವಾರಿ ಮಾಡಲು ಅವರು ಮ್ಯಾಟ್‌ಗಳನ್ನು ಬಳಸಬೇಕಾಗುತ್ತದೆ. ಕೆಲವೊಮ್ಮೆ ಕಾರ್ಮಿಕರೇ ಹಣಕೊಟ್ಟು ಪೊರಕೆಗಳನ್ನು ಖರೀದಿಸಲು ಒತ್ತಾಯಿಸಲಾಗುತ್ತದೆ. ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ವ್ಯವಸ್ಥೆ ಇಲ್ಲ. ಪೌರಕಾರ್ಮಿಕರಿಗೆ ಬಿಬಿಎಂಪಿ ವತಿಯಿಂದ ಬಿಸಿಯೂಟ ನೀಡಲಾಗುತ್ತದೆ. ಆದರೆ ಉಪ್ಪು ಖಾರ, ಮಸಾಲೆ ಇಲ್ಲದ ಈ ಆಹಾರವನ್ನು ತಿನ್ನಲು ಆಗುವುದಿಲ್ಲ ಎಂದಿದ್ದಾರೆ.

ಸಿಐಟಿಯುನ ಸೈಯದ್ ಮುಜೀಬ್ ಮಾತನಾಡಿ, ‘ಪುರಸಭೆಗಳಲ್ಲಿ ಪೌರಕಾರ್ಮಿಕರ ವರ್ಗದಡಿ ನೇರ ಪಾವತಿ, ದಿನಗೂಲಿಗಳು, ಹೊರಗುತ್ತಿಗೆ ಕೆಲಸಗಾರರು, ಸಮಯದ ಪ್ರಮಾಣ ಮತ್ತು ಕಲ್ಯಾಣ ಎಂಬ ಐದು ಬಗೆಯ ಕಾರ್ಮಿಕರಿದ್ದಾರೆ. ಒಂದೇ ಕೆಲಸ ಮಾಡುವವರಿಗೆ ಇಷ್ಟೊಂದು ಹೆಸರು ಯಾಕೆ? ಈ ಎಲ್ಲಾ ವರ್ಗಗಳನ್ನು ಕಾರ್ಮಿಕರನ್ನು ಶೋಷಿಸಲು ಮತ್ತು ಅವರಿಗೆ ಸಾಧ್ಯವಾದಷ್ಟು ಕಡಿಮೆ ವೇತನವನ್ನು ನೀಡುವಂತೆ ಮಾಡಲು ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 50,000 ಪೌರಕಾರ್ಮಿಕರಿದ್ದು, ಈ ಪೈಕಿ ಕೇವಲ 4,800 ಖಾಯಂ ನೌಕರರಾಗಿದ್ದಾರೆ ಎಂದು ಪೌರಕಾರ್ಮಿಕರು ಹೇಳುತ್ತಾರೆ. ಖಾಯಂ ಉದ್ಯೋಗ ಹೊಂದಿರುವವರಿಗೆ ತಿಂಗಳಿಗೆ 40ಸಾವಿರ ರೂಪಾಯಿ ವೇತನ ಇದ್ದು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ಕೇವಲ 14,800 ರೂ. ವೇತನ ನೀಡಲಾಗುತ್ತಿದೆ. ಕೆಲವೆಡೆ ಪೌರಕಾರ್ಮಿಕರು ತಮ್ಮ ವೇತನದಲ್ಲಿ ಗುತ್ತಿಗೆದಾರರಿಗೂ ಹಣ ನೀಡಬೇಕು.

ಇದನ್ನೂ ಓದಿ: ನಗರದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ವರ್ಗಾವಣೆ ಪ್ರಕ್ರಿಯೆಯಲ್ಲಿ ಬದಲಾವಣೆ; ಒಂದೇ ಸ್ಥಳದಲ್ಲಿ ಕನಿಷ್ಠ ಸೇವಾವಧಿ 6 ವರ್ಷದಿಂದ 5 ವರ್ಷಕ್ಕೆ ಬದಲಾಯಿಸಿ ಆದೇಶ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada