ಸರ್ಕಾರಿ ಶಿಕ್ಷಕರ ಮಕ್ಕಳು ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಕಲಿಯಬೇಕು, ಆಗಲೇ ಎಲ್ಲವೂ ಸರಿ ಹೋಗುವುದು -ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ
ಸಭೆಯನ್ನುದ್ದೇಶಿಸಿ ಮಾತನಾಡಿದ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ, ಸರ್ಕಾರಿ ಶಿಕ್ಷಕರ ಮಕ್ಕಳು ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಕಲಿಯಬೇಕು. ಆಗ ಮಾತ್ರ ಕನ್ನಡ ವಿಷಯದಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದರು.
ಧಾರವಾಡ: ಸರ್ಕಾರಿ ಶಿಕ್ಷಕರ ಮಕ್ಕಳು ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಕಲಿಯಬೇಕು. ಆಗ ಮಾತ್ರ ಕನ್ನಡ ವಿಷಯದಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಧಾರವಾಡದಲ್ಲಿ ನಡೆದ ಸಭೆಯಲ್ಲಿ ಹೇಳಿದ್ದಾರೆ. ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ(Kannada Sahitya Sammelana) ಆಯೋಜನೆ ಹಿನ್ನೆಲೆ ಸಾಹಿತ್ಯ ಭವನದಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತೆ ಬಗ್ಗೆ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ನೇತೃತ್ವದಲ್ಲಿ ಸಾಹಿತಿಗಳ ಸಭೆ ನಡೆಸಲಾಗುತ್ತಿದೆ.
ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ, ಸರ್ಕಾರಿ ಶಿಕ್ಷಕರ ಮಕ್ಕಳು ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಕಲಿಯಬೇಕು. ಆಗ ಮಾತ್ರ ಕನ್ನಡ ವಿಷಯದಲ್ಲಿ ಎಲ್ಲವೂ ಸರಿ ಹೋಗುತ್ತದೆ. ಶಿಕ್ಷಕರ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯಬೇಕು. ಬಳಿಕ ರಾಜ್ಯ ಸರ್ಕಾರಿ ನೌಕರರ ಮಕ್ಕಳೂ ಕನ್ನಡದಲ್ಲೇ ಕಲಿಯಬೇಕು. ಈ ಬಗ್ಗೆ ಕನ್ನಡ ಸಮ್ಮೇಳನದಲ್ಲಿ ನಿರ್ಣಯ ಮಾಡಲಾಗುವುದು. ಆ ನಿರ್ಣಯಗಳನ್ನ ಅನುಷ್ಠಾನ ಮಾಡಿಸಬೇಕು. ಇಲ್ಲದೇ ಹೋದಲ್ಲಿ ಕನ್ನಡ ವಿಷಯ ಬಹಳ ಕಷ್ಟವಿದೆ. ನಿಜವಾಗಿಯೂ ನಮಗೆ ಭಯ ಆಗುತ್ತಿದೆ ಎಂದರು. ಇದನ್ನೂ ಓದಿ: ಅಗ್ನಿಪಥ್ ಯುವಜನಾಂಗಕ್ಕೆ ಹಾನಿಕಾರಕ, ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿಸಿ: ಮೋದಿಗೆ ಕೇಜ್ರಿವಾಲ್ ಒತ್ತಾಯ
ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸದಿದ್ರೆ ಹೇಗೆ? ಇನ್ನು ಈ ಸಂಬಂಧ ಸರ್ಕಾರಕ್ಕೆ ಪಸ್ತಾವನೆ ಸಲ್ಲಿಸಿದ್ದೇವೆ. ಆಡಳಿತಾತ್ಮಕ ಆದೇಶವಾಗಬೇಕಿದೆ. ಕನ್ನಡ ಶಾಲೆಗಳು ದುಸ್ಥಿತಿಗೆ ಹೋಗಿವೆ. ಇದೇ ಮುಂದುವರೆದರೆ 10 ವರ್ಷದಲ್ಲಿ ಕನ್ನಡ ಉಳಿಯುವುದಿಲ್ಲ. ಕನ್ನಡ ಸಂಘಟನೆ, ಕಸಾಪ ಯಾವುದೂ ಇರೋದಿಲ್ಲ. ಹೀಗಾಗಿ ಈ ಸಂಬಂಧ ಎಸ್.ಎಲ್. ಭೈರಪ್ಪ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಕನ್ನಡ ಕಲಿಸೋ ಶಿಕ್ಷಕರ ಮಕ್ಕಳು ಕನ್ನಡ ಕಡ್ಡಾಯ ಕಲಿಯಬೇಕು. ನಮ್ಮ ತೆರಿಗೆಯಿಂದ ಅವರು ಸಂಬಳ ಪಡೆಯುತ್ತಿದ್ದಾರೆ. ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸದಿದ್ರೆ ಹೇಗೆ? ನೈತಿಕವಾದ ಜವಾಬ್ದಾರಿ ಇರಬೇಕಲ್ಲವೇ? ಶಿಕ್ಷಕರೇ ಕನ್ನಡ ಉಳಿಸೋ ಕೆಲಸ ಮಾಡಬೇಕು. ಸರ್ಕಾರಿ ನೌಕರರು, ಮಂತ್ರಿಗಳ ಮಕ್ಕಳೂ ಕನ್ನಡ ಶಾಲೆಗೆ ಕಳುಹಿಸಬೇಕು. ಶಿಕ್ಷಕರ ಬಗ್ಗೆ ಪ್ರಸ್ತಾವನೆ ಶಿಕ್ಷಣ ಸಚಿವರಿಗೆ ಸಲ್ಲಿಸಲಾಗಿದೆ. ಸರ್ಕಾರ ಪರಿಶೀಲಿಸುವುದಾಗಿ ಹೇಳಿದೆ. ಇದಕ್ಕೆ ಕಾಯಿದೆ, ಕಾನೂನು ಬೇಕಾಗಿಲ್ಲ. ಆಡಳಿತಾತ್ಮಕ ಆದೇಶವಾದರೆ ಸಾಕು ಎಂದು ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ: ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಶಿವರಾಜ್ಕುಮಾರ್ ಎನರ್ಜೆಟಿಕ್ ಡ್ಯಾನ್ಸ್; ಎದ್ದು ನಿಂತು ಚಪ್ಪಾಳೆ ತಟ್ಟಿದ ರಕ್ಷಿತಾ
Published On - 4:48 pm, Fri, 24 June 22