ಮಂಗಳೂರು ಜೈಲಿನಲ್ಲಿ ಎರಡು ಗುಂಪುಗಳ ನಡುವೆ ಮರಾಮಾರಿ: ಇಬ್ಬರು ಕೈದಿಗಳಿಗೆ ಗಂಭೀರ ಗಾಯ

| Updated By: ರಮೇಶ್ ಬಿ. ಜವಳಗೇರಾ

Updated on: Jul 01, 2024 | 10:39 PM

ಮಂಗಳೂರು ಜೈಲಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದ್ದ, ಘಟನೆಯಲ್ಲಿ ಇಬ್ಬರಿಗ ಗಂಭೀರ ಗಾಯಗಳಾವೆ. ಹರಿತವಾದ ವಸ್ತುಗಳಿಂದ ಹಲ್ಲೆ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡ ಇಬ್ಬರು ಆರೋಪಿಗಳನ್ನು ಜೈಲಿನಿಂದ ಆಸ್ಪತೆಗೆ ದಾಖಲಿಸಲಾಗಿದೆ. ಇನ್ನು ಹಲ್ಲೆ ಪ್ರಕರಣ ಸಂಬಂಧ ಏಳು ಆರೋಪಿಗಳ ವಿರುದ್ಧ ಕೇಸ್‌ ದಾಖಲಾಗಿದೆ.

ಮಂಗಳೂರು ಜೈಲಿನಲ್ಲಿ ಎರಡು ಗುಂಪುಗಳ ನಡುವೆ ಮರಾಮಾರಿ: ಇಬ್ಬರು ಕೈದಿಗಳಿಗೆ ಗಂಭೀರ ಗಾಯ
ಮಂಗಳೂರು ಜೈಲ್​
Follow us on

ಮಂಗಳೂರು, ಜುಲೈ 01): ಮಂಗಳೂರು ಸೆಂಟ್ರಲ್​ ಜೈಲಿನಲ್ಲಿ ಎರಡು ಗುಂಪುಗಳ ನಡುವೆ ಮರಾಮಾರಿಯಾಗಿದೆ. ಪರಿಣಾಮ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಅವರನ್ನು ಜೈಲಿನಿಂದ ಆಸ್ಪತ್ರಗೆ ದಾಖಲಿಸಲಾಗಿದೆ. ಕೈದಿಗಳಾದ ಉಳ್ಳಾಲದ ಮೊಹಮ್ಮದ್​​​ ಸಮೀರ್​ ಅಲಿಯಾಸ್​​​ ಕಡಪರ ಸಮೀರ್(33) ಮತ್ತು ಬೋಳಿಯಾರ್ ನಿವಾಸಿ ಮೊಹಮ್ಮದ್​​​ ಮನ್ಸೂರ್(30) ಎನ್ನುವರು ಘರ್ಷಣೆ ವೇಳೆ ಗಾಯಗೊಂಡಿದ್ದಾರೆ. ಇಬ್ಬರನ್ನೂ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಇನ್ನು ಘಟನೆ ಸಂಬಂಧ ಜೈಲು ಅಧಿಕಾರಿಗಳ ದೂರಿನ ಮೇರೆಗೆ ಬರ್ಕೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇಂದು (ಜುಲೈ 01) ಸಂಜೆ 6.30ರಿಂದ 6.45ರ ನಡುವೆ ಜೈಲಿನ ಎ ಬ್ಯಾರಕ್​ನ ಅಡುಗೆ ಮನೆಯಲ್ಲಿದ್ದ ಕೆಲವು ಹರಿತವಾದ ವಸ್ತುಗಳಿಂದ ಹೊಡೆದಾಡಿಕೊಂಡಿದ್ದಾರೆ. ರೌಡಿಶೀಟರ್​​​​​​​​ ಟೋಪಿ ನೌಫಲ್ & ಗ್ಯಾಂಗ್ ವಿರುದ್ಧ ದಾಳಿ ಮಾಡಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ನಿಲ್ಲದ ಬೀದಿ ಪುಂಡರ ಹಾವಳಿ: ಯುವತಿ ಎದೆ ಮುಟ್ಟಿ ವಿಕೃತಿ ಮರೆದ ಕಾಮುಕ

ಘಟನೆಯಲ್ಲಿ ಇಬ್ಬರು ಗಾಯಾಳುಗಳಿಗೆ ವೆನ್ಲಾಕ್​​​​​ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಹಲ್ಲೆ ಮಾಡಿದ ತಂಡದ ಸೆಲ್​ಗಳ ಮೇಲೆ ದಾಳಿ, ಪರಿಶೀಲಿಸಿದ್ದು, ಘಟನೆ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿರುವ ಬಗ್ಗೆ ಕಮಿನಷರ್ ಮಾಹಿತಿ ಪಡೆದುಕೊಂಡಿದ್ದಾರೆ.

ಮುಫದ್ ರಿಫಾತ್(28), ಮೊಹಮ್ಮದ್ ರಿಜ್ವಾನ್(34), ಇಬ್ರಾಹಿಂ ಕಲ್ಲೆಲ್(30), ಉಮರ್ ಫಾರೂಕ್ ಇರ್ಫಾನ್,
ಅಲ್ತಾಫ್, ನೌಫಲ್, ಜೈನುದ್ದೀನ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಆರೋಪಿಗಳು, ಹಲ್ಲೆಗೊಳಗಾದವರ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ. ಘಟನೆ ಸಂಬಂಧ ಜೈಲು ಅಧಿಕಾರಿಗಳ ದೂರಿನ ಮೇರೆಗೆ ಬರ್ಕೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:37 pm, Mon, 1 July 24