ಮಂಗಳೂರು: ಆಯತಪ್ಪಿ ಹೊಂಡಕ್ಕೆ ಬಿದ್ದು ಯುವಕರಿಬ್ಬರು (Youths) ಸಾವನ್ನಪ್ಪಿರುವ ಘಟನೆ ರವಿವಾರ ಮಂಗಳೂರು (Mangaluru) ಹೊರವಲಯದ ಪಡೀಲ್ ಅಳಪೆ ಎಂಬಲ್ಲಿ ನಡೆದಿದೆ. ಅಳಪೆ ನಿವಾಸಿ ವರುಣ್ (27), ಎಕ್ಕೂರು ನಿವಾಸಿ ವೀಕ್ಷಿತ್ (28) ಮೃತ ಯುವಕರು. ಕಂಕನಾಡಿ ಟೌನ್ ಠಾಣಾ ವ್ಯಾಪ್ತಿಯ ಅಳಪೆ ಪಡ್ಪು ಎಂಬಲ್ಲಿ ರೈಲ್ವೆ ಕಾಮಗಾರಿ ಸಂಬಂಧ ತೆಗೆದಿದ್ದ ಹೊಂಡ ಮಳೆಯಿಂದ ತುಂಬಿಕೊಂಡಿತ್ತು. ಈ ಹೊಂಡದಲ್ಲಿ ಇಬ್ಬರು ಯುವಕರು ಆಯತಪ್ಪಿ ಬಿದ್ದಿದ್ದಾರೆ. ಇದನ್ನು ಕಂಡ ಅವರ ಸ್ನೇಹಿತರು ರಕ್ಷಿಸಿಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಈ ವಿಚಾರ ತಿಳಿದು ಪೊಲೀಸರು ಸ್ಥಳಕ್ಕೆ ಧಾವಸಿ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ. ದುರಾದೃಷ್ಟವಶಾತ ಅಷ್ಟೊತ್ತಿಗಾಗಲೆ ಯುವಕರು ಮೃತಪಟ್ಟಿದ್ದು, ಶವಗಳನ್ನು ಪೊಲೀಸರು ಹೊರ ತೆಗೆದಿದ್ದಾರೆ. ನಂತರ ಮೃತದೇಹಗಳನ್ನು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಕಂಕನಾಡಿ ನಗರ ಪೊಲೀಸರು ಅಸ್ವಾಭಾವಿಕ ಮರಣ (ಯುಡಿಆರ್) ಎಂದು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕರಾವಳಿಯಲ್ಲಿ ಮಳೆ ಕಡಿಮೆಯಾದರು ನಿಲ್ಲದ ಕಡಲ ಅಬ್ಬರ, ಮಂಗಳೂರು ಬೀಚ್ಗಳಿಗೆ ಪ್ರವಾಸಿಗರಿಗೆ ನಿರ್ಬಂಧ
ಇನ್ನು ಆಸ್ಪತ್ರಗೆ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಮೃತಪಟ್ಟ ಕುಟುಂಬಕ್ಕೆ ಸಾಂತ್ವಾನ ಹೇಳಳಿದ್ದಾರೆ. ಯುವಕರೇ ಅವರ ಕುಟುಂಬಕ್ಕೆ ಆಧಾರ ಸ್ತಂಬವಾಗಿದ್ದರು. ಆದ್ದರಿಂದ ಸರ್ಕಾರಕ್ಕೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸುತ್ತೇನೆ. ಅಳಪೆ ಬಳಿ ಎರಡು ವರ್ಷದಿಂದ ರೈಲ್ವೇ ಕಾಮಾಗಾರಿ ನಿಂತಿದೆ. ಅಲ್ಲಿನ ಕಾಮಗಾರಿಯಿಂದಾಗಿ ಈ ಹೊಂಡ ಆಗಿದೆ. ರೈಲ್ವೇ ಇಲಾಖೆ ಗಮನಕ್ಕೆ ಈ ಹಿಂದೆ ಕೂಡ ತರಲಾಗಿತ್ತು. ಪಾಲಿಕೆಗೆ ಈ ಹೊಂಡದ ಬಗ್ಗೆ ಗಮನಕ್ಕೆ ತರಲಾಗಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.