ಅಬ್ಬಾ! ಎಂಥಾ ಐಡಿಯಾ: ಕಡಿಮೆ ಅಂಕ ನೀಡಿದರು ಅಂತಾ ಶಿಕ್ಷಕಿಯ ವಾಟರ್ ಬಾಟಲಿಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು! ಮುಂದೇನಾಯ್ತು?
ಆದರೆ ಇದು ಯಾವುದೂ ಗಮನಕ್ಕೆ ಬಾರದೆ ಗಣಿತ ಶಿಕ್ಷಕಿ ಮತ್ತು ಒಬ್ಬ ಸಹ ಶಿಕ್ಷಕಿ ಮಾತ್ರೆ ಹಾಕಿದ್ದ ಬಾಟಲಿಯಿಂದ ನೀರು ಕುಡಿದಿದ್ದಾರೆ. ಅಷ್ಟೇ! ಓರ್ವ ಶಿಕ್ಷಕಿಗೆ ಮುಖದಲ್ಲಿ ಊತ -ಮತ್ತೋರ್ವ ಶಿಕ್ಷಕಿ ಮತ್ತೊಂದು ರೀತಿ ಅಸ್ವಸ್ಥ ಆಗಿದ್ದಾರೆ. ಅಂದಹಾಗೆ 6ನೇ ತರಗತಿಯ ಆ ಇಬ್ಬರು ವಿದ್ಯಾರ್ಥಿನಿಯರ ಈ ಅಟಾಟೋಪವೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಂಗಳೂರು, ಅಕ್ಟೋಬರ್ 6: ಅಬ್ಬಬ್ಬಾ! ಇಂಥಾ ಐಡಿಯಾ ಯಾರಿಗೂ ಬಾರದಿರಲಿ. ಅಷ್ಟಕ್ಕೂ ಇಂತಾ ಅಬೋಧ ಮಕ್ಕಳಿಗೆ ಇದನ್ನು ಯಾರು ಬೋಧಿಸಿದರೋ!? ಅಲ್ಲ ಕಡಿಮೆ ಅಂಕ ನೀಡಿದರೂ ಅಂತಾ ಶಿಕ್ಷಕಿಯೊಬ್ಬರ ನೀರಿನ ಬಾಟಲಿಗೆ (ಕಡಿಮೆ ಅಂಕ ಪಡೆದ) ವಿದ್ಯಾರ್ಥಿನಿಯರು ಮಾತ್ರೆ ಹಾಕಿದ್ದಾರೆ. ಮಂಗಳೂರಿನ ಉಳ್ಳಾಲದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಮುಂದೇನಾಯ್ತು ಅನ್ನೋದೇ ಇಂಟರೆಸ್ಟಿಂಗ್, ಒಂದಷ್ಟು ಆತಂಕಕಾರಿಯೂ ಹೌದು. ಇದಕ್ಕೆ ಅಳಬೇಕೋ/ ನಗಬೇಕೋ ಎಂಬುದೂ ಗೊತ್ತಾಗೋಲ್ಲ.
ಗಣಿತದ ಲೆಕ್ಕಾಚಾರದಲ್ಲಿ ಪೊರಪಾಟು ಬಿದ್ದ ಶಿಕ್ಷಕಿಗೆ ಇದೆಂಥಾ ಶಿಕ್ಷೆ!?
ಗಣಿತ ವಿಷಯದಲ್ಲಿ ಒಂದೇ ಒಂದು ಅಂಕ ಕಡಿಮೆ ಕೊಟ್ಟಿದ್ದರು ಆ ಶಿಕ್ಷಕಿ. ಅದಕ್ಕೆ ಆ ಇಬ್ಬರು ವಿದ್ಯಾರ್ಥಿನಿಯರು ಇಂಥಾ ಶಿಕ್ಷೆ ಕೊಟ್ಟಿದ್ದಾರೆ ನೋಡಿ. ಇಲ್ಲಿ ಶಿಕ್ಷಕಿಯೇ ಪೊರಪಾಟು ಬಿದ್ದು, ಆ ಇಬ್ಬರು ವಿದ್ಯಾರ್ಥಿನಿಯರೂ ಉತ್ತರ ಸರಿಯಾಗಿಯೇ ಬರೆದಿದ್ದರೂ ಮಾರ್ಕ್ಸ್ ನೀಡಿಲ್ಲ. ಇದು ಆ ಇಬ್ಬರ ಕೋಪಕ್ಕೆ ಕಾರಣವಾಗಿಬಿಟ್ಟಿದೆ. ಹಾಗಾಗಿ ಅವಧಿ ಮೀರಿದ ಎಕ್ಸ್ಪೈರ್ ಆಗಿರುವ ಯಾವುದೋ ಮಾತ್ರೆಗಳನ್ನು ತಂದು ಆ ಶಿಕ್ಷಕಿಯ ವಾಟರ್ ಬಾಟಲಿಗೆ ಹಾಕಿದ್ದಾರೆ ಆ ಇಬ್ಬರು ವಿದ್ಯಾರ್ಥಿನಿಯರು!
ಆದರೆ ಇದು ಯಾವುದೂ ಗಮನಕ್ಕೆ ಬಾರದೆ ಗಣಿತ ಶಿಕ್ಷಕಿ ಮತ್ತು ಒಬ್ಬ ಸಹ ಶಿಕ್ಷಕಿ ಮಾತ್ರೆ ಹಾಕಿದ್ದ ಬಾಟಲಿಯಿಂದ ನೀರು ಕುಡಿದಿದ್ದಾರೆ. ಅಷ್ಟೇ! ಓರ್ವ ಶಿಕ್ಷಕಿಗೆ ಮುಖದಲ್ಲಿ ಊತ -ಮತ್ತೋರ್ವ ಶಿಕ್ಷಕಿ ಮತ್ತೊಂದು ರೀತಿ ಅಸ್ವಸ್ಥ ಆಗಿದ್ದಾರೆ. ಅಂದಹಾಗೆ 6ನೇ ತರಗತಿಯ ಆ ಇಬ್ಬರು ವಿದ್ಯಾರ್ಥಿನಿಯರ ಈ ಅಟಾಟೋಪವೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:05 pm, Fri, 6 October 23