Dasara Festive: ಆಯುಧ ಪೂಜೆಗೂ ಮುನ್ನ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಆರಂಭ; ಸಾಮಾಗ್ರಿಗಳ ಬೆಲೆ ದುಪ್ಪಟ್ಟು

ದಸರಾ ಆಯುಧ ಪೂಜೆ ಹಿನ್ನೆಲೆ ಅಗತ್ಯ ಸಾಮಾಗ್ರಿಗಳ ಬೆಲೆ ಗಗರಕ್ಕೇರಿದ್ದು, ತರಕಾರಿ, ಹಣ್ಣು ದರ ಹೆಚ್ಚಿನ ಬದಲಾವಣೆ ಆಗಿಲ್ಲ ಎಂಬುದು ಕೊಂಚ ಸಮಾಧಾನಕರ ಸಂಗತಿಯಾಗಿದೆ.

Dasara Festive: ಆಯುಧ ಪೂಜೆಗೂ ಮುನ್ನ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಆರಂಭ; ಸಾಮಾಗ್ರಿಗಳ ಬೆಲೆ ದುಪ್ಪಟ್ಟು
ಆಯುಧ ಪೂಜೆಗೂ ಮುನ್ನ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಆರಂಭ (ಪ್ರಾತಿನಿಧಿಕ ಚಿತ್ರ)Image Credit source: tripadvisor
Follow us
TV9 Web
| Updated By: Rakesh Nayak Manchi

Updated on: Oct 02, 2022 | 2:38 PM

ಬೆಂಗಳೂರು: ಹಬ್ಬದ ಋತುವಿನಲ್ಲಿ ಅಗತ್ಯ ಸಾಮಾಗ್ರಿಗಳ ಬೆಲೆ ಏರುವುದು ಸಾಮಾನ್ಯ. ಜನರು ಹೆಚ್ಚು ಓಡಾಡುವ ಈ ಸೀಸನ್​ ಅನ್ನು ಬಂಡವಾಳವನ್ನಾಗಿ ಮಾಡಿಕೊಳ್ಳಲು ಮುಂದಾಗಿದ್ದ ಖಾಸಗಿ ಬಸ್​ ಮಾಲೀಕರು ಟಿಕೆಟ್ ದರವನ್ನು ಹೆಚ್ಚಿಸಿದ್ದರು. ಇದರ ವಿರುದ್ಧ ಸಾರಿಗೆ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಇದೀಗ ಆಯುಧ ಪೂಜೆ ಹಿನ್ನೆಲೆ ಅಗತ್ಯ ಸಾಮಾಗ್ರಿಗಳ ಬೆಲೆಯನ್ನು ದಪ್ಪಟ್ಟು ಏರಿಸಲಾಗಿದೆ. ಆಯುಧ ಪೂಜೆಗೆ ಅಗತ್ಯವಾಗಿರುವ ಹೂವು, ಕುಂಬಳಕಾಯಿ, ಬಾಳೆ ಕಂಬ ದರ ದುಪ್ಪಟ್ಟಾಗಿದ್ದು, ಹೆಚ್ಚಿನ ಬೆಲೆ ತೆತ್ತು ಸಾಮಾಗ್ರಿಗಳನ್ನು ಖರೀದಿಸುವ ಸ್ಥಿತಿ ಸಾರ್ವಜನಿಕರದ್ದಾಗಿದೆ. ಆದರೆ ತರಕಾರಿ ಮತ್ತು ಹಣ್ಣುಗಳ ಬೆಲೆಯಲ್ಲಿ ಯಾವುದೇ ದರ ಏರಿಕೆಗಳು ಆಗಿಲ್ಲ ಎಂಬುದು ಕೊಂಚ ಸಮಾಧಾನಕರ ಸಂಗತಿ.

ಬೆಂಗಳೂರು ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಹಬ್ಬಕ್ಕೂ ಎರಡು ದಿನ ಮುನ್ನವೇ ಖರೀದಿ ಭರಾಟೆ ಜೋರಾಗಿದೆ. ನಾಳೆ (ಅ.3) ನಾಡಿದ್ದು (ಅ.4) ಹೂ, ಕುಂಬಳಕಾಯಿ ದರ ಮತ್ತಷ್ಟ ಹೆಚ್ಚಳ ಸಾಧ್ಯತೆ ಹಿನ್ನೆಲೆ ಗ್ರಾಹಕರು ಇಂದೇ ಖರೀದಿಗೆ ಮುಂದಾಗಿದ್ದಾರೆ. ಮಳೆ, ಬೆಳೆ ನಷ್ಟ ಹಿನ್ನೆಲೆ ದರ ಏರಿಕೆ ಮಾಡಲಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಕಳೆದ ವಾರ 10 ರೂಪಾಯಿ ಇದ್ದ ಕೆ.ಜಿ ಕುಂಬಳಕಾಯಿ ಇಂದು 30ರಿಂದ 40 ರೂಪಾಯಿಗೆ ಏರಿಕೆಯಾಗಿದೆ. ನಾಳೆ ಮತ್ತು ನಾಡಿದ್ದು ಮತ್ತಷ್ಟು ದರ ಏರಿಕೆ ಸಾಧ್ಯತೆ ಇದೆ. ಇದೇ ಅವಧಿಯಲ್ಲಿ ಹೂವಿನ ದರಗಳಲ್ಲೂ ಹೆಚ್ಚಳವಾಗಿದೆ.

  • ಮಲ್ಲಿಗೆ ಹೂವು ಕೆಜಿಗೆ 1ಸಾವಿರ ರೂಪಾಯಿ
  • ಸೇವಂತಿಗೆ ಕೆಜಿಗೆ 300 ರೂ.ನಿಂದ 500 ರೂಪಾಯಿ
  • ಚೆಂಡು ಹೂವು ಕೆಜಿ ಬೆಲೆ 150 ರೂಪಾಯಿ
  • ಕನಕಾಂಬರ ಕೆಜಿಗೆ 3 ಸಾವಿರ ರೂಪಾಯಿ
  • ಸುಗಂಧರಾಜ ಕೆಜಿಗೆ 400 ರೂಪಾಯಿ
  • ಕಾಕಡ ಕೆಜಿಗೆ 700-800 ರೂಪಾಯಿ
  • ಗುಲಾಬಿ ಹೂವು ಕೆಜಿಗೆ 250 ರಿಂದ 300 ರೂಪಾಯಿ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ