ದತ್ತ ಜಯಂತಿ ಕಾರ್ಯಕ್ರಮಕ್ಕೆ ಸಿ.ಟಿ.ರವಿ ಚಾಲನೆ; ದತ್ತ ಮಾಲೆ ಧಾರಣೆ..

ಭಜರಂಗ ದಳ ಹಾಗೂ ವಿಹೆಚ್​ಪಿ ( ವಿಶ್ವ ಹಿಂದೂ ಪರಿಷತ್) ನೇತೃತ್ವದಲ್ಲಿ ನಡೆಯುವ ದತ್ತ ಜಯಂತಿ ಕಾರ್ಯಕ್ರಮಕ್ಕೆ ಇಂದಿನಿಂದ ಅಧಿಕೃತ ಚಾಲನೆ ದೊರೆತಿದ್ದು,, ನೂರಾರು ಭಕ್ತರೊಂದಿಗೆ ಸಿ.ಟಿ ರವಿ ದತ್ತ ಮಾಲೆ ಧರಿಸಿದರು.

ದತ್ತ ಜಯಂತಿ ಕಾರ್ಯಕ್ರಮಕ್ಕೆ ಸಿ.ಟಿ.ರವಿ ಚಾಲನೆ; ದತ್ತ ಮಾಲೆ ಧಾರಣೆ..
ದತ್ತ ಮಾಲೆ ಧರಿಸಿದ ಸಿ.ಟಿ.ರವಿ
sandhya thejappa Edited By:

Updated on: Dec 19, 2020 | 12:03 PM

ಚಿಕ್ಕಮಗಳೂರು: ಇಲ್ಲಿನ  ದತ್ತ ಪೀಠದಲ್ಲಿ ನಡೆಯುವ 23ನೇ ವರ್ಷದ ದತ್ತ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ದತ್ತ ಮಾಲೆ ಧರಿಸಿದರು.

ಭಜರಂಗ ದಳ ಹಾಗೂ ವಿಹೆಚ್​ಪಿ ( ವಿಶ್ವ ಹಿಂದೂ ಪರಿಷತ್) ನೇತೃತ್ವದಲ್ಲಿ ನಡೆಯುವ ದತ್ತ ಜಯಂತಿ ಕಾರ್ಯಕ್ರಮಕ್ಕೆ ಇಂದಿನಿಂದ ಅಧಿಕೃತ ಚಾಲನೆ ಸಿಕ್ಕಿದ್ದು, ನೂರಾರು ಭಕ್ತರೊಂದಿಗೆ ಸಿ.ಟಿ ರವಿ ಮಾಲೆ ಧರಿಸಿದರು.

ಒಟ್ಟು 11 ದಿನಗಳ ಕಾಲ ದತ್ತ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಡಿಸೆಂಬರ್ 27 ರಂದು ಅನಸೂಯ ಜಯಂತಿ, 28 ರಂದು ಶೋಭಾಯಾತ್ರೆ ನೆರವೇರಲಿದೆ. ಡಿ. 29 ರಂದು ದತ್ತ ಪಾದುಕೆ ದರ್ಶನದ ಮೂಲಕ ಕಾರ್ಯಕ್ರಮ ಮುಕ್ತಾಯವಾಗಲಿದೆ.

ದತ್ತ ಜಯಂತಿ ಕಾರ್ಯಕ್ರಮದ ಚಿತ್ರಣ..

ಸಿ.ಟಿ. ರವಿ ವಿರುದ್ಧ ಹರಿಹಾಯ್ದ ಕಾಳಿಮಠದ ಋಷಿಕುಮಾರ ಸ್ವಾಮೀಜಿ

 

Published On - 12:02 pm, Sat, 19 December 20

Loading...
Unable to load recommendations.
Follow Us