AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರುಣಾಜನಕ ಕತೆ.. ಕೊರೊನಾ Bad Timeನಲ್ಲಿ ಮಾರಾಟವಾಗಿದ್ದ ಮಗು ತಾಯಿ ಮಡಿಲಿಗೆ!

ಮನೆ ಬಾಡಿಗೆ ಕಟ್ಟಲು ಸಹ ಹಣವಿಲ್ಲದೆ 3 ವರ್ಷದ ಹೆಣ್ಣು ಮಗುವನ್ನ 11,000 ರುಪಾಯಿಗೆ ಷರತ್ತುಬದ್ದ ಮಾರಾಟ ಮಾಡಲಾಗಿತ್ತು. ಷರತ್ತಿನ ಪ್ರಕಾರ ಮಗುವನ್ನ ತಾಯಿಗೆ ನೋಡಲು ಬಿಡದಿದ್ದಕ್ಕೆ ಠಾಣೆ ಮೆಟ್ಟಿಲೇರಿದ ನೊಂದ ಮಾತೃ ಹೃದಯ.. ಮುಂದೆ ಓದಿ. ನೆಲಮಂಗಲ: ಕೊರೋನಾ ಎಂಬ ಮಹಾಮಾರಿ ಜನರ ಆರ್ಥಿಕ ಪರಿಸ್ಥಿತಿಯನ್ನ ನೆಲ ಕಚ್ಚಿಸಿದ್ದು, ಲಕ್ಷಾಂತರ ಜನ ಬೆಂಗಳೂರಿನಲ್ಲಿ ಮನೆ ಬಾಡಿಗೆ ಸಹ ಕಟ್ಟಲಾಗದೆ ಬೆಂಗಳೂರು ತೊರೆದು ಹಳ್ಳಿಗಳ್ಳತ್ತ ಗಂಟು ಮೂಟೆ ಕಟ್ಟಿಕೊಂಡು ಹೊರಟೇ ಹೋದ್ರು. ಕೆಲಸ ಕಾರ್ಯವಿಲ್ಲದೆ ಬಳಗವಿಲ್ಲದೆ ತುತ್ತು […]

ಕರುಣಾಜನಕ ಕತೆ.. ಕೊರೊನಾ Bad Timeನಲ್ಲಿ ಮಾರಾಟವಾಗಿದ್ದ ಮಗು ತಾಯಿ ಮಡಿಲಿಗೆ!
ಸಾಧು ಶ್ರೀನಾಥ್​
|

Updated on:Aug 29, 2020 | 10:54 AM

Share

ಮನೆ ಬಾಡಿಗೆ ಕಟ್ಟಲು ಸಹ ಹಣವಿಲ್ಲದೆ 3 ವರ್ಷದ ಹೆಣ್ಣು ಮಗುವನ್ನ 11,000 ರುಪಾಯಿಗೆ ಷರತ್ತುಬದ್ದ ಮಾರಾಟ ಮಾಡಲಾಗಿತ್ತು. ಷರತ್ತಿನ ಪ್ರಕಾರ ಮಗುವನ್ನ ತಾಯಿಗೆ ನೋಡಲು ಬಿಡದಿದ್ದಕ್ಕೆ ಠಾಣೆ ಮೆಟ್ಟಿಲೇರಿದ ನೊಂದ ಮಾತೃ ಹೃದಯ.. ಮುಂದೆ ಓದಿ.

ನೆಲಮಂಗಲ: ಕೊರೋನಾ ಎಂಬ ಮಹಾಮಾರಿ ಜನರ ಆರ್ಥಿಕ ಪರಿಸ್ಥಿತಿಯನ್ನ ನೆಲ ಕಚ್ಚಿಸಿದ್ದು, ಲಕ್ಷಾಂತರ ಜನ ಬೆಂಗಳೂರಿನಲ್ಲಿ ಮನೆ ಬಾಡಿಗೆ ಸಹ ಕಟ್ಟಲಾಗದೆ ಬೆಂಗಳೂರು ತೊರೆದು ಹಳ್ಳಿಗಳ್ಳತ್ತ ಗಂಟು ಮೂಟೆ ಕಟ್ಟಿಕೊಂಡು ಹೊರಟೇ ಹೋದ್ರು. ಕೆಲಸ ಕಾರ್ಯವಿಲ್ಲದೆ ಬಳಗವಿಲ್ಲದೆ ತುತ್ತು ಅನ್ನಕ್ಕಾಗಿ ಜನರು ಪರದಾಡುವ ಪರಿಸ್ಥಿರಿ ಎದುರಾಗಿದ್ದು ಮುಂದಿನ ಜೀವನ ಹೇಗಪ್ಪ ಅನ್ನೋ ಭಾರಿ ದೊಡ್ಡ ಪ್ರಶ್ನೆ ಎದುರಾಗಿದೆ. ಕೊರೋನಾ ಸಂಕಷ್ಟದಲ್ಲಿ ಮನೆಯ ಬಾಡಿಗೆ ಕಟ್ಟಲಾಗದ ಪರಿಸ್ಥಿತಿಯಲ್ಲಿ ಹೆತ್ತ ಮಗಳನ್ನೇ ಮಾರಿದ ಕರುಣಾ ಜನಕ ಕಥೆಯೊಂದು ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ರೇಣುಕಾನಗರದ ನಿವಾಸಿ ನಾಗಲಕ್ಷ್ಮಮ್ಮರಿಗೆ 1 ಗಂಡು ಹಾಗೂ ಎರಡು ಹೆಣ್ಣುಮಕ್ಕಳಿದ್ದರು. ಮನೆಯಲ್ಲಿ ಕಿತ್ತು ತಿನ್ನೋ ಬಡತನ ಇತ್ತು ಈ ವೇಳೆ ಗಂಡ ಶಂಕರ್ ಕುಟುಂಬವನ್ನ ತೊರೆದು ಹೊರಟು ಹೋದ. ಕುಟುಂಬದ ಸಂಪೂರ್ಣ ಜವಾಬ್ದಾರಿ ನಾಗಲಕ್ಷ್ಮಿ ಹೆಗಲಿಗೆ ಬಿದ್ದ ಕಾರಣ ಈಕೆ ಹೋಟೆಲ್‌ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡರು.

ಗಂಡ ತೊರೆದ ಬೆನ್ನಲ್ಲೇ ಗಂಡು ಮಗುವೊಂದು 10 ತಿಂಗಳ ಹಿಂದೆ ಮೃತಪಟ್ಟಿತ್ತು. ಮತ್ತೊಂದು ಮಗುವನ್ನ ನಾಗಲಕ್ಷ್ಮಿ ಸಂಕೇಶ್ವರದ ತನ್ನ ತಾಯಿ ಮನೆಗೆ ಕಳುಹಿಸಿದ್ದರು. ಈ ನಡುವೆ ಲಾಕ್‌ಡೌನ್ ಆದಾಗಿನಿಂದ ಹೋಟೆಲ್‌ನಲ್ಲೂ ಕೆಲಸವಿಲ್ಲದೆ ಮನೆಯ ಬಾಡಿಗೆ ಸಹ ಕಟ್ಟಲಾಗದೆ ಕಂಗೆಟ್ಟುಹೋಗಿದ್ದರು.

ಈ ವೇಳೆ ನಾಗಲಕ್ಷ್ಮಿ ಮನೆಯ ಪಕ್ಕದಲ್ಲಿದ್ದ ಸಂಗೀತಾ 3 ವರ್ಷದ ಹೆಣ್ಣು ಮಗುವನ್ನ ಮಾರಿ ಬಿಡು ಎಂದು ಪ್ರಚೋದನೆ ಮಾಡಿದ್ದಾರೆ. ಒಲ್ಲೆ ಎಂದ ನಾಗಲಕ್ಷ್ಮಿಗೆ ಮನವೊಲಿಸಿ ತುಮಕೂರು ಮೂಲದ ಕೃಷ್ಣಮೂರ್ತಿ ಎನ್ನುವವರಿಗೆ 11,000 ರುಪಾಯಿಗೆ ಮಾರಾಟ ಮಾಡಿದ್ದಾರೆ.

ಆದ್ರೆ.. ತಾನು ಕೇಳಿದಾಗ ಮಗುವನ್ನ ತೋರಿಸಬೇಕು ಎಂದು 50 ರೂಪಾಯಿ ಬಾಂಡ್ ಪೇಪರ್‌ನಲ್ಲಿ ಅಗ್ರಿಮೆಂಟ್ ಮಾಡಿಕೊಂಡು ದತ್ತು ಪಡೆದ ರೀತಿಯಲ್ಲಿ ಆಗಸ್ಟ್ 11ರಂದು ಮಗುವನ್ನ ಮಾರಾಟ ಮಾಡಲಾಗಿದೆ. ನನ್ನ ಮಗುವನ್ನು ತೋರಿಸಿ ಎಂದು ಪೋನ್ ಮಾಡಿದಾಗ ದತ್ತು ಪಡೆದ ಕೃಷ್ಣಮೂರ್ತಿ ಫೋನ್ ಸ್ವೀಕರಿಸದ ಹಿನ್ನೆಲೆ ಮಗುವನ್ನ ಕಳೆದುಕೊಂಡ ಮಾತೃ ಹೃದಯ ಹಂಬಲಿಸುತ್ತಾ ನೆಲಮಂಗಲ ಟೌನ್ ಠಾಣೆ ಮೆಟ್ಟಿಲೇರಿದರು.

ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ವೃತ್ತ ನಿರೀಕ್ಷಕರಾದ ಶಿವಣ್ಣ ಮಗು ದತ್ತು ಪಡೆದ ಕೃಷ್ಣಮೂರ್ತಿಯನ್ನ ಠಾಣೆಗೆ ಕರೆಸಿ, 3 ವರ್ಷದ ಹೆಣ್ಣು ಮಗುವನ್ನ ತಾಯಿ ಮಡಿಲು ಸೇರಿಸಿದರು. ಮಗುವನ್ನ ನೋಡಿದ ತಾಯಿ ಕಣ್ಣೀರಿಡುತ್ತಾ.. ಬಿಗಿದಪ್ಪಿ ಪೊಲೀಸರಿಗೆ ಧನ್ಯವಾದ ತಿಳಿಸಿದರು.

Published On - 10:29 am, Sat, 29 August 20

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!