ದಾವಣಗೆರೆ: ಟೆಕ್ಕಿ ಸಾವಿಗೆ ಸುಮಾರು 3 ಕೋಟಿ ರೂಪಾಯಿ ಅಪಘಾತದ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಹಿನ್ನೆಲೆಯಲ್ಲಿ ಬಸ್ ಜಪ್ತಿಗೆ ಕೋರ್ಟ್ ಆದೇಶಿಸಿದ್ದು, ಅದರಂತೆ ಕೋರ್ಟ್ ಸಿಬ್ಬಂದಿ ಮತ್ತೆ ಸಾರಿಗೆ ಇಲಾಖೆಯ ಅಪಘಾತಕ್ಕೀಡಾಗಿದ್ದ ಬಸ್ ಅನ್ನು ಜಫ್ತಿ ಮಾಡಿದ್ದಾರೆ. ಹಾವೇರಿ ಡಿಪೋಗೆ ಸೇರಿ ಬಸ್ ಅನ್ನು ದಾವಣಗೆರೆ ಕೇಂದ್ರ ಬಸ್ ನಿಲ್ದಾಣದಲ್ಲಿ ಜಫ್ತಿ ಮಾಡಲಾಗಿದೆ.
2013 ನವೆಂಬರ್ 06 ರಂದು ಸಾರಿಗೆ ಇಲಾಖೆ ಬಸ್ಸು ಡಿಕ್ಕಿ ಹೊಡೆದು ಸಾಫ್ಟ್ವೇರ್ ಎಂಜಿನಿಯರ್ ಸಂಜೀವ್ ಪಾಟೀಲ್ ಸಾವಿಗೀಡಾಗಿದ್ದರು. ಮೃತರ ಪತ್ನಿಗೆ 2.82 ಕೋಟಿ ರೂಪಾಯಿ ಪರಿಹಾರ ನೀಡುವಂತೆ ದಾವಣಗೆರೆ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಅದೇಶ ಮಾಡಿತ್ತು.
ಸಕಾಲಕ್ಕೆ ಪರಿಹಾರ ನೀಡದ ಹಿನ್ನೆಲೆ ನ್ಯಾಯಾಲಯ ಬಸ್ ಜಪ್ತಿಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ದಾವಣಗೆರೆ ಕೇಂದ್ರ ಬಸ್ ನಿಲ್ದಾಣದಲ್ಲಿನ ಹಾವೇರಿ ಡಿಪೋಗೆ ಸೇರಿದ ಬಸ್ ಇದೀಗ ಜಪ್ತಿಯಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದ ಕಳೆದ ಆರು ತಿಂಗಳ ಹಿಂದೆ ಆರು ಬಸ್ಗಳ ಜಪ್ತಿಗೆ ನ್ಯಾಯಾಲಯ ಆದೇಶಿಸಿತ್ತು. ಮೃತನ ಪತ್ನಿ ಗೌರಿ ಪಾಟೀಲ್ ಗೆ ಸ್ವಲ್ಪ ಪ್ರಮಾಣ ಪರಿಹಾರ ನೀಡಿತ್ತು. ಉಳಿದ ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆ ನ್ಯಾಯಾಲಯ ಮತ್ತೆ ಒಂದು ಬಸ್ ಜಪ್ತಿಗೆ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ:
2013, ನವೆಂಬರ್ 06 ರಂದು ಬೆಂಗಳೂರಿನಿಂದ ಬರುತ್ತಿದ್ದ ಹಾವೇರಿ ಡಿಪೊಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಕಾರಿಗೆ ಡಿಕ್ಕಿಯಾಗಿ ದಾವಣಗೆರೆಯ ನಗರದ ಹೊರವಲಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಸಂಜೀವ್ ಪಾಟೀಲ್ ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ಪರಿಹಾರವಾಗಿ 2.82 ಕೋಟಿ ಪರಿಹಾರ ನೀಡುವಂತೆ ದಾವಣಗೆರೆ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಮಾಡಿತ್ತು. ಆದರೆ ಕೆಎಸ್‌ಆರ್‌ಟಿಸಿ ಹಾವೇರಿ ವಿಭಾಗವು ಈ ಪರಿಹಾರವನ್ನು ನೀಡಿರಲಿಲ್ಲ. ಆಗ ಬಸ್ ಜಪ್ತಿ ಮಾಡುವಂತೆ ನ್ಯಾಯಾಲಯವು ಆದೇಶಿಸಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿ ಆರು ತಿಂಗಳ ಹಿಂದೆ ಆರು ಬಸ್ಸುಗಳ ಜಪ್ತಿಗೆ ಆದೇಶಿಸಿದ್ದ ನ್ಯಾಯಾಲಯ. ನ್ಯಾಯಾಲಯ ನೀಡಿದ ಪರಿಹಾರ ಮೊತ್ತಕ್ಕೆ ಬಡ್ಡಿ ಸಹಿತ ನೀಡಬೇಕಾಗಿದ್ದು, ಸುಮಾರು 67 ಲಕ್ಷ ರೂಪಾಯಿ ಬಡ್ಡಿಯೇ ಆಗಿದೆ. ಬಡ್ಡಿ ಮತ್ತು ಅಸಲು ನೀಡುವಂತೆ ಮೃತರ ಕುಟುಂಬ ನ್ಯಾಯಾಲಯದ ಮೊರೆ ಹೋದ ಹಿನ್ನೆಲೆ ಬಸ್ ಜಪ್ತಿಗೆ ಆದೇಶಿಸಿತ್ತು. ಅದರಂತೆ ಕೋರ್ಟ್‌ನ ಅಮೀನರಾದ ಶ್ರೀಧರ್, ಮಹೇಶ್, ರಾಜ್‌ಕುಮಾರ್, ಗುರು, ಪೊಲೀಸರು, ಪಂಚಾಯಿತಿದಾರರು ಬಂದು ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ.
Also Read:
ತರಕಾರಿ ಮಾರುತ್ತಿದ್ದ ಟೆಕ್ಕಿ ಯುವತಿಗೆ ಕರೆದು ಕೆಲಸ ಕೊಟ್ಟ ಸೋನು ಸೂದ್ The Real Hero
Also Read:
ಪತಿ ತೊರೆದಿದ್ದ ಅಸಹಾಯಕ ಮಹಿಳೆಗೆ ನಂಬಿಸಿ ಕೈಕೊಟ್ಟ ಟೆಕ್ಕಿ: 6 ವರ್ಷದ ಮಗನ ಕರೆದುಕೊಂಡು ಪರಾರಿ
Published On - 11:46 am, Fri, 1 October 21