
ದಾವಣಗೆರೆ (ಜೂ.27): 25 ವರ್ಷದ ಅಳಿಯನೋರ್ವ (Son In Law) 55 ವರ್ಷದ ಅತ್ತೆಯೊಂದಿಗೆ (mother in law ) ಓಡಿಹೋಗಿರುವ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ. ಗಣೇಶ್ ಎನ್ನುವಾತ ಕಟ್ಟಿಕೊಂಡ ಹೆಂಡಿತಿ ಹೇಮಾಳನ್ನ ಚನ್ನಗಿರಿ ಬಸ್ ನಿಲ್ದಾಣದಲ್ಲಿ ಬಿಟ್ಟು ಅತ್ತೆ ಶೋಭಾ ಜೊತೆ ಪರಾರಿಯಾಗಿದ್ದಾನೆ. ಅಳಿಯ ಗಣೇಶ 25 ವರ್ಷ ವಯಸ್ಸಿನವನಾಗಿದ್ದರೆ, ಅತ್ತೆ ಶೋಭಾ ಗಣೇಶನಿಗಿಂತ 30 ವರ್ಷ ಹಿರಿಯವರು ಅಂದರೆ 55 ವರ್ಷ. ಇನ್ನು ಮದುವೆಯಾದ ಎರಡೇ ತಿಂಗಳಿಗೆ ಪತಿ, ತನ್ನ ಅಮ್ಮನ ಜೊತೆ ಪತಿ ಎಸ್ಕೇಪ್ ಆಗಿರುವುದಕ್ಕೆ ಪತ್ನಿ ಕಣ್ಣೀರಿಟ್ಟಿದ್ದಾಳೆ.
ಶಾಂತಾ ಎನ್ನುವವರು ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಎಂಬುವರ ಎರಡನೇ ಪತ್ನಿ. 13 ವರ್ಷದ ಹಿಂದೆ ಮುದ್ದೇನಹಳ್ಳಿ ನಾಗರಾಜ್, ಶಾಂತಾಳನ್ನ ಮದ್ವೆಯಾಗಿದ್ದ. ಇನ್ನು ನಾಗರಾಜ್ ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಮಗ. ನಾಗರಾಜ್ ಜೊತೆ ವಾಸವಿದ್ದ ಹಿರಿಯ ಮಗಳು ಹೇಮಾಳನ್ನ, ಎರಡು ತಿಂಗಳ ಹಿಂದೆ ಅಷ್ಟೇ ಮದುವೆ ಮಾಡಿಕೊಟ್ಟಿದ್ದರು. ಆದ್ರೆ, ಇದೀಗ ಹೆಂಡ್ತಿಯನ್ನು ಬಿಟ್ಟು ಆಕೆಯ ತಾಯಿಯೊಂದಿಗೆ ಪರಾರಿಯಾಗಿದ್ದಾನೆ.
ಇನ್ನು ಮದುವೆಗೂ ಮುನ್ನ ಎರಡು ವರ್ಷಗಳ ಹಿಂದೆ ಗಣೇಶನನ್ನು ಮನೆಗೆ ಕರೆದುಕೊಂಡು ಬಂದಿದ್ದ ಶಾಂತಾ, ಮಗಳನ್ನು ಮದುವೆ ಮಾಡಿಕೊಡೋಣ ಮನೆ ಅಳಿಯ ಆಗಿ ಇರ್ತಾನೆ ಎಂದು ನಂಬಿಸಿದ್ದರು. ಅದರಂತೆ ಎರಡು ತಿಂಗಳ ಹಿಂದೆ ಅದ್ದೂರಿಯಾಗಿ ಗಣೇಶನ ಜೊತೆ ಹಿರಿಯ ಮಗಳು ಹೇಮಾಳನ್ನು ಅದ್ಧೂರಿಯಾಗಿ ಮದುವೆ ಮಾಡಲಾಗಿತ್ತು. ಆದ್ರೆ, ಮದುವೆ ಮಾಡಿಕೊಟ್ಟ15 ದಿನಕ್ಕೆ ಗಣೇಶ್ ತನ್ನ ಅತ್ತೆ ಅಂದರೆ ಹೆಂಡ್ತಿಯ(ಹೇಮಾ) ಮಲ ತಾಯಿ ಶಾಂತಾಳೊಂದಿಗೆ ಅಕ್ರಮ ಸಂಬಂಧ ಹೊಂದಿರೋದು ಬೆಳಕಿಗೆ ಬಂದಿದೆ. ಗಣೇಶ್ ಮೊಬೈಲ್‌ನಲ್ಲಿ ಶಾಂತಾ ಜೊತೆ ಅಶ್ಲೀವಾಗಿ ಮಸೇಜ್ ಮಾಡಿರುವುದನ್ನು ಹೇಮಾ ನೋಡಿದ್ದಾಳೆ.
ತಕ್ಷಣ ಮೆಸೇಜ್‌ಗಳನ್ನು ತನ್ನ ತಂದೆ ನಾಗರಾಜ್‌ಗೆ ಹೇಮಾ ಫಾರ್ವರ್ಡ್ ಮಾಡಿದ್ದಾಳೆ. ಗಣೇಶ್ ಹಾಗೂ ಶಾಂತಾಳ ಸರಸ ಕಂಡು ಶಾಕ್ ಆಗಿದ್ದಾರೆ. ಬಳಿಕ ಇವರಿಬ್ಬರ ಬಣ್ಣ ಬಯಲಾಗುತ್ತಿದ್ದಂತೆ ಶಾಂತಾ ಹಣ, ಆಭರಣ ಕದ್ದು ಗಣೇಶ್ ಜೊತೆ ಪರಾರಿಯಾಗಿದ್ದಾಳೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 4:59 pm, Fri, 27 June 25