AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮೀನಿಗೆ ಹೋದ ರೈತನ ಮೇಲೆ ಕರಡಿ ದಾಳಿ, ರೈತನ ಪ್ರಾಣ ಉಳಿಸಿದ ನಾಯಿಗಳು

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬೈರನಾಯಕನಹಳ್ಳಿ (ರಾಜನಹಟ್ಟಿ) ಗ್ರಾಮದ ಜಮೀನಿನಲ್ಲಿ ರೈತ ಕೆಲಸ ಮಾಡುವಾಗ ಕರಡಿಗಳು ದಾಳಿ ಮಾಡಿವೆ. ಈ ವೇಳೆ ನಾಯಿಗಳು ಬಂದು ಬೊಗಳಿದ್ದು ನಾಯಿಗಳ ಶಬ್ಧಕ್ಕೆ ಕರಡಿಗಳು ಓಡಿ ಹೋಗಿವೆ. ಇದರಿಂದ ರೈತನ ಪ್ರಾಣ ಉಳಿದಿದೆ.

ಜಮೀನಿಗೆ ಹೋದ ರೈತನ ಮೇಲೆ ಕರಡಿ ದಾಳಿ, ರೈತನ ಪ್ರಾಣ ಉಳಿಸಿದ ನಾಯಿಗಳು
ಜಮೀನಿಗೆ ಹೋದ ರೈತನ ಮೇಲೆ ಕರಡಿ ದಾಳಿ, ರೈತನ ಪ್ರಾಣ ಉಳಿಸಿದ ನಾಯಿಗಳು
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಆಯೇಷಾ ಬಾನು|

Updated on: Jun 16, 2024 | 8:16 AM

Share

ದಾವಣಗೆರೆ, ಜೂನ್.16: ಜಮೀನಿಗೆ ಹೋದ ರೈತನ (Farmer) ಮೇಲೆ ಕರಡಿ (Bear) ದಾಳಿ ನಡೆಸಿದ್ದು ಸಕಾಲಕ್ಕೆ ಬಂದ ನಾಯಿಗಳಿಂದ (Dogs) ರೈತನ ರಕ್ಷಣೆಯಾಗಿದೆ. ಸದ್ಯ ರೈತ ತೀವ್ರಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹನಮಂತಪ್ಪ (52) ಗಾಯಗೊಂಡ ರೈತ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬೈರನಾಯಕನಹಳ್ಳಿ (ರಾಜನಹಟ್ಟಿ) ಗ್ರಾಮದ ಜಮೀನಿನಲ್ಲಿ ಗ್ರಾಮದ ರೈತ ಹನುಮಂತಪ್ಪ ಕೆಲಸ ಮಾಡುವಾಗ ನಾಲ್ಕು ಕರಡಿಗಳು ಏಕಕಾಲದಲ್ಲಿ ದಾಳಿ ಮಾಡಿವೆ.

ಇದನ್ನು ಗಮನಿಸಿದ ನಾಯಿಗಳು ಜೋರಾಗಿ ಬೊಗಳಿ ಕರಡಿಗಳಿಂದ ರೈತನ‌ ರಕ್ಷಣೆ ಮಾಡಿದ್ದಾರೆ. ರಂಗಯ್ಯನ ದುರ್ಗ ಅರಣ್ಯಕ್ಕೆ ಹೊಂದಿಕೊಂಡ ಜಮೀನಿನಲ್ಲಿ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರಡಿಗಳಿದ್ದ ಇಲ್ಲೊಂದು ಕರಡಿ ಧಾಮ‌ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಇಬ್ಬರು ಸಾವು

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ತಡರಾತ್ರಿ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದು ಕಾರಿನಲ್ಲಿದ್ದ ಶಾಂತಯ್ಯ ಸ್ವಾಮಿ, ಲೋಕೇಶ್ ಎಂಬುವವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಬ್ಬನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಲಾರಿ ಚಾಲಕನ ಅಜಾಗುರತೆಯಿಂದ ಅಪಘಾತ ಸಂಭವಿಸಿಸುವ ಶಂಕೆ ವ್ಯಕ್ತವಾಗಿದೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Karnataka Rains: ಕರ್ನಾಟಕದಾದ್ಯಂತ ಕಡಿಮೆಯಾದ ಮುಂಗಾರು ಅಬ್ಬರ, ಇಂದು ಕರಾವಳಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಹೆದ್ದಾರಿ ದಾಟುವ ಧಾವಂತದಲ್ಲಿ ಬೈಕ್ ಸವಾರ ಸಾವು

ಅವಸರದಲ್ಲಿ ಹೆದ್ದಾರಿ ದಾಟಲು ಹೋದ ಬೈಕ್ ಸವಾರ ಎದುರಿಗೆ ಬಂದ ಕಾರು ಡಿಕ್ಕಿಯಾಗಿ ಸವಾರ ಮೃತಪಟ್ಟಿದ್ದಾನೆ. ದಾವಣಗೆರೆ ತಾಲೂಕಿನ ಹುನಸೆಕಟ್ಟಿ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಘಟನೆ ನಡೆದಿದ್ದು, ಭರಮಸಾಗರದ ನಿವಾಸಿ ಕಲ್ಲಯ್ಯ ಎಂಬಾತ ಮೃತಪಟ್ಟಿದ್ದಾನೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾರು ಗುದ್ದಿದ ರಭಸಕ್ಕೆ ಕಲ್ಲಯ್ಯ 10 ಮೀಟರ್ ದೂರ ಹೋಗಿ ಬಿದ್ದಿದ್ದಾನೆ.

ಸಫಾರಿ ಕಾರಿನಲ್ಲಿ ಬಂದು ದನ ಕದಿಯಲು ಯತ್ನ

ಗದಗ ನಗರದ ಶಹಪುರಪೇಟೆಯಲ್ಲಿ ಸಫಾರಿ ಕಾರಿನಲ್ಲಿ ಬಿಡಾಡಿ ದನ ಕಳ್ಳತನ ಮಾಡಲು ಯತ್ನಿಸಲಾಗಿದೆ. ಕಾರಿನ ಡಿಕ್ಕಿಯಲ್ಲಿ ಹಾಕಲು ವಿಫಲ ಯತ್ನ ನಡೆಸಿದ ಕಳ್ಳ ದುಷ್ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಫಾರಿ ಕಾರಿನಲ್ಲಿ ಬರುವ ಇಬ್ಬರು ಕಳ್ಳರು ದನವನ್ನ ಕಾರು ಹತ್ತಿಸಲು ಹರಸಾಹಸ ಮಾಡಿದ್ದಾರೆ. ಆದ್ರೆ ಕಾರಿನ ಡಿಕ್ಕಿಯಲ್ಲಿ ಹತ್ತದ ದನವನ್ನ ಬಿಟ್ಟು ಓಡಿ ಹೋಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ