ದಾವಣಗೆರೆ: ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆ ಮಾರಾಟ ಆರೋಪ, ಮೂವರ ವಿರುದ್ಧ FIR

ಕೆಲಸ ಕೊಡಿಸುವುದಾಗಿ ನಂಬಿಸಿ ರಾಯಚೂರಿನ ಮಹಿಳೆಯನ್ನು ಮಾರಾಟ ಮಾಡಲಾಗಿರುವ ಆರೋಪ ಕೇಳಿಬಂದಿದೆ. ಮಹಿಳೆ ತನ್ನ ಸಹೋದರನಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದು ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಮೂವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ದಾವಣಗೆರೆ: ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆ ಮಾರಾಟ ಆರೋಪ, ಮೂವರ ವಿರುದ್ಧ FIR
ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಾಂತರ ರೂ ಹಣ ಗುಳಂ ಆರೋಪ, ಬ್ಯಾಂಕ್​ ಎಂಡಿ ಸೇರಿ ಹಲವರ ವಿರುದ್ಧ ಎಫ್​ಐಆರ್
Follow us
| Updated By: ಆಯೇಷಾ ಬಾನು

Updated on: May 21, 2024 | 9:09 AM

ದಾವಣಗೆರೆ, ಮೇ.21: ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರನ್ನ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದ್ದು ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ ‌ಪೊಲೀಸ್ ಠಾಣೆಯಲ್ಲಿ ಮೂರು ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಭದ್ರಾವತಿ ಮೂಲದ ರೋಜಿ ಲೀನಾ(43), ಮಲ್ಲಿಕಾರ್ಜುನ (47) ಹಾಗೂ ಲೋಕೇಶ (35) ವಿರುದ್ಧ ಎಫ್​ಐಆರ್ ದಾಖಲಾಗಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಗ್ರಾಮವೊಂದರ 30 ವರ್ಷದ ಮಹಿಳೆಯನ್ನ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಮಹಿಳೆಯ‌ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಗೆ ಐದು ವರ್ಷದ ಹಿಂದೆ ಮದ್ವೆ ಆಗಿತ್ತು. ಓರ್ವ ಮಗಾ ಇದ್ದಾನೆ.‌ ಪತಿ ನಿಧನದ ನಂತರ ಕಲ್ಯಾಣ ಮಂಟಪಗಳಲ್ಲಿ‌ಕೆಲ್ಸಾಕ್ಕೆ ‌ಹೋಗುತ್ತಿದ್ದ ಮಹಿಳೆ, ಮೇ 12 ರಂದು ಶಿವಮೊಗ್ಗಕ್ಕೆ ಹೋಗುವುದಾಗಿ ಹೇಳಿ ಹೋದವರು ವಾಪಸ್ಸು ಬಂದಿಲ್ಲ. ಇದರಿಂದ ಚಿಂತಿತನಾಗಿದ್ದ ಸಹೋದರನಿಗೆ ಮಹಿಳೆಯೇ ಬೇರೊಬ್ಬರ ಮೊಬೈಲ್​ನಿಂದ ಕರೆ ಮಾಡಿ ತನ್ನನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಒಂದು ಲಕ್ಷಕ್ಕೆ ಸೊಲ್ಲಾಪುರದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದು ಒಂದು ಲಕ್ಷ ರೂಪಾಯಿ ಕೊಟ್ಟರೇ ಬಿಡುವುದಾಗಿ ಹೇಳುತ್ತಿದ್ದಾರೆ ಎಂದು ಮಹಿಳೆ ತನ್ನ ಸಹೋದರನಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಇದೇ ಮಾಹಿತಿ ಆಧರಿಸಿ ಸಂತ್ರಸ್ತ ಮಹಿಳೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಸಹೋದರಿಯನ್ನ ರಕ್ಷಣೆ ಮಾಡುವಂತೆ ಪೊಲೀಸರಿಗೆ ವಿ‌ನಂತಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ವಿಡಿಯೋ ಕಾಲ್ ವಂಚನೆ: ನಕಲಿ ಸಿಬಿಐ ಅಧಿಕಾರಿಗಳ ಬಲೆಯಿಂದ ಪಾರಾದ ಸಂಗೀತ ಕಲಾವಿದ!

ಕಲುಷಿತ ನೀರು ಸೇವಿಸಿ ಐವರು ಅಸ್ವಸ್ಥ

ಮೈಸೂರು ತಾಲೂಕಿನ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಐವರು ಅಸ್ವಸ್ಥರಾಗಿದ್ದಾರೆ. ಇಬ್ಬರು ಮಕ್ಕಳು ಮತ್ತು ಮೂವರು ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕಲುಷಿತ ನೀರು ಸೇವಿಸಿ ಗ್ರಾಮಸ್ಥರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ. ಘಟನೆ ಬಳಿಕ ಗ್ರಾಮಕ್ಕೆ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಶಾಲಾ ಕಾಂಪೌಂಡ್ ಕುಸಿದು ವಿದ್ಯಾರ್ಥಿನಿ ಸಾವು

ಶಾಲಾ ಕಾಂಪೌಂಡ್​ ಗೋಡೆ ಕುಸಿದು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ‌ಉಳ್ಳಾಲ ತಾಲೂಕಿನ ನ್ಯೂಪಡ್ಪು ಶಾಲೆಯಲ್ಲಿ ಘಟನೆ ನಡೆದಿದ್ದು, ನ್ಯೂಪಡ್ಪು ಗ್ರಾಮದ ಸಿದ್ದೀಕ್ ಮತ್ತು ಜಮೀಲಾ ಪುತ್ರಿ ಶಾಜಿಯಾ ಕೊನೆಯುಸಿರೆಳೆದ್ದಿದ್ದಾಳೆ. ಶಾಜಿಯಾ 3ನೇ ತರಗತಿಯಲ್ಲಿ ಓದುತ್ತಿದ್ದು, ನಿನ್ನೆ NSS ಶಿಬಿರದಲ್ಲಿ ಭಾಗಿಯಾಗಿದ್ಲು. ಈ ವೇಳೆ ಆಟವಾಡುತ್ತಿದ್ದಾಗ ಕಾಂಪೌಂಡ್​ ಕುಸಿದು ಬಿದ್ದು ಸಂಭವಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ