ಉಲ್ಟಾ ಹೊಡೆದ ಪತಿ: ಫೈನಾನ್ಸ್ ಕಿರುಕುಳದಿಂದ ಶಿಕ್ಷಕಿ ಆತ್ಮಹತ್ಯೆ ಕೇಸಿಗೆ ಬಿಗ್ ಟ್ವಿಸ್ಟ್
ಫೈನಾನ್ಸ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಿನ್ನೆ (ಜನವರಿ 29) ತನ್ನ ಪತ್ನಿ ಸಾವಿಗೆ ಫೈನಾನ್ಸ್ ಟಾರ್ಚರ್ ಕಾರಣ ಎಂದು ಪತಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಆದ್ರೆ, ಇದೀಗ ಮೃತಪಟ್ಟಿರುವ ಸರ್ಕಾರಿ ಶಾಲೆಯ ಶಿಕ್ಷಕಿ ಪುಷ್ಪಲತಾ ಪತಿ ಉಲ್ಟಾ ಹೊಡೆದಿದ್ದಾರೆ. ಶವ ಸಿಕ್ಕ ಬಳಿಕ ತನ್ನ ಪತ್ನಿ ಆತ್ಮಹತ್ಯೆ ಮಾಡಿ ಕೊಂಡಿಲ್ಲ ಎಂದಿದ್ದಾನೆ, ಹೀಗಾಗಿ ಈ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ.

ದಾವಣಗೆರೆ, (ಜನವರಿ 30): ಮನೆಯಿಂದ ನಾಪತ್ತೆಯಾಗಿದ್ದ ಸರ್ಕಾರಿ ಶಾಲೆ ಶಿಕ್ಷಕಿ ಪುಷ್ಪತಲಾ ಮೃತದೇಹ ತುಂಗಾಭದ್ರ ನದಿಯಲ್ಲಿ ಪತ್ತೆಯಾಗಿದೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಜನವರಿ 26ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣ ರಾಘವೇಂದ್ರ ಮಠದ ಬಳಿ ಪುಷ್ಪತಲಾ ತುಂಗಭದ್ರ ನದಿಗೆ ಹಾರಿದ್ದಾಳೆಂದು ವರದಿಯಾಗಿತ್ತು. ಘಟನೆ ನಡೆದು ಮೂರನೇ ದಿನಕ್ಕೆ ಪುಷ್ಪತಲಾಳ ಶವ ಪತ್ತೆಯಾಗಿದ್ದು,ಇದೀಗ ಇದು ಆತ್ಮಹತ್ಯೆಯಲ್ಲ. ಬದಲಿಗೆ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪತಿ ಹೇಳುತ್ತಿದ್ದಾರೆ. ಈ ಮೊದಲು ಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದ ಪತಿ, ಇದೀಗ ಶವ ಪತ್ತೆ ಬಳಿಕ ಕಾಲು ಜಾರಿ ನದಿಗೆ ಬಿದ್ದಿದ್ದಾಳೆ ಎಂದು ಉಲ್ಟಾ ಹೊಡೆದಿದ್ದಾನೆ. ಹೀಗಾಗಿ ಸರ್ಕಾರಿ ಶಾಲಾ ಶಿಕ್ಷಕಿ ಪುಷ್ಪತಲಾ ಸಾವಿನ ಸುತ್ತ ಹತ್ತಾರು ಸಂಶಯಗಳು ಹುಟ್ಟಿಕೊಂಡಿವೆ.
ಶಿಕ್ಷಕಿ ಪುಷ್ಪತಲಾ ಮನೆ ಕಟ್ಟಲು ಶಿವಮೊಗ್ಗದ ಖಾಸಗಿ ಫೈನಾನ್ಸ್ ನಿಂದ ಸಾಲ ಪಡೆದಿದ್ದರು. ಒಂದು ಕಂತು ಡ್ಯೂ ಇರುವುದಕ್ಕೆ ಫೈನಾನ್ಸ್ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ಕೂರುತ್ತಿದ್ದರು. ಅದು ಸಾಲದು ಅಂತ ಶಾಲೆಯ ಬಳಿಗೂ ಬಂದು ಟಾರ್ಚರ್ ಮಾಡುತ್ತಿದ್ದರು. ಅಲ್ಲದೇ ಪೊಲೀಸ್ ಸ್ಟೇಷನ್ ನಲ್ಲೂ ದೂರು ದಾಖಲಿಸಿದ್ದರು, ಸೆನ್ಸಿಟೀವ್ ಅಗಿದ್ದ ಶಿಕ್ಷಕಿ ಪುಷ್ಪಲತಾ ಸಾಕಷ್ಟು ನೊಂದಿದ್ದಳು. ಹೀಗಾಗಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ಹಾಲೇಶ್ ಆರೋಪಿಸಿದ್ದ. ಆದ್ರೆ ಪೊಲೀಸರಿಗೆ ಪತಿ ನೀಡಿದ ದೂರಿನಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಿಗೆ ಕಾಲು ಜಾರಿ ನದಿಗೆ ಬಿದ್ದಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತಿಯನ್ನೇ ಹತ್ಯೆಗೈದ ಪತ್ನಿ
ಕಳೆದ ನಾಲ್ಕು ದಿನಗಳ ಹಿಂದೆ ಕೂಡ ಅವರು ಕೆಲಸ ಮಾಡುತ್ತಿದ್ದ ಫೈನಾನ್ಸ್ ಸಿಬ್ಬಂದಿ ಶಾಲೆಯ ಬಳಿಗೂ ಹೋಗಿದ್ದರು. ಜನವರಿ 26 ರಂದು ರಿಪಬ್ಲಿಕ್ ಡೇ ಮುಗಿಸಿಕೊಂಡು ಬಂದು ನದಿಗೆ ಹಾರಿದ್ದ ಶಿಕ್ಷಕಿ. ತುಂಗಭದ್ರ ನದಿಯ ಬಳಿಯ ರಾಘವೇಂದ್ರ ಮಠದ ಬಳಿ ಅವರ ಬ್ಯಾಗ್ ಹಾಗೂ ಮೊಬೈಲ್ ಪತ್ತೆ ಆಗಿತ್ತು. ಮನೆಯನ್ನು ಮಾರಿ ಸಾಲ ಕಟ್ಟಿ ಕೈತೊಳೆದುಕೊಳ್ಳಬೇಕು ಎಂದು ಕೊಂಡಿದ್ದೆ ಎಂದು ಹೇಳಿದ್ದ. ಅವಳ ಸಾವಿನ ಬಗ್ಗೆ ಯಾವುದೇ ಸಂಶವಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸ್ಪಷ್ಚಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



