ಯಾದಗಿರಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತಿಯನ್ನೇ ಹತ್ಯೆಗೈದ ಪತ್ನಿ
ಆತನಿಗೆ ಹೆಂಡತಿ ಅಂದ್ರೆ ಪಂಚಪ್ರಾಣ. ಆದ್ರೆ, ಆಕೆ ಪರಪುರುಷನೊಂದಿಗೆ ವ್ಯಾಮೋಹಕ್ಕೆ ಸಿಲುಕಿದ್ದಳು. ಆಕೆಗೆ ಪತಿ ಮನೆಯಲ್ಲಿ ಪ್ರೀತಿಗೆ ಯಾವುದೇ ಕೊರತೆ ಇರಲಿಲ್ಲ. ಮದುವೆಯಾಗಿ ಮಕ್ಕಳಿದ್ರೂ ಅಡ್ಡ ದಾರಿ ಹಿಡಿದಿದ್ಲು. ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಗೆ ಚಟ್ಟ ಕಟ್ಟಿ ಹೃದಯಾಘಾತದ ಕಥೆ ಕಟ್ಟಿದ್ದಾಳೆ. ಪರ ಪುರುಷನ ಸಂಗಕ್ಕೆ ಗಂಡನ ಹೆಣ ಬೀಳಿಸಿದ ಪತ್ನಿ ಇದೀಗ ಕಂಬಿ ಎಣಿಸುತ್ತಿದ್ದಾಳೆ.

ಯಾದಗಿರಿ, (ಜನವರಿ 30): ಪರ ಪುರುಷನ ವ್ಯಾಮೋಹಕ್ಕೆ ಸಿಲುಕಿದ್ದ ಪತ್ನಿಯೇ ಪತಿಯನ್ನೇ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿದೆ ನಡೆದಿದೆ. ಹುಣಸಗಿ ಪಟ್ಟಣದ ನಿವಾಸಿ 34 ವರ್ಷದ ಮಾನಪ್ಪ ಬಂಕಲದೊಡ್ಡಿ ಎಂಬಾತ ಕಳೆದ 11 ವರ್ಷಗಳ ಹಿಂದೆ ಲಕ್ಷ್ಮೀ ಎಂಬಾಕೆಯನ್ನ ಮದುವೆಯಾಗಿದ್ದ. ಇಬ್ಬರು ಅನ್ಯೋನ್ಯವಾಗಿಯೇ ಇದ್ದರು. ಆದ್ರೆ, ಈ ಮಧ್ಯೆ ಲಕ್ಷ್ಮೀ ಪರಪುರುಷರ ವ್ಯಾಮೋಹಕ್ಕೆ ಸಿಲುಕಿ ಪತಿಯನ್ನೇ ಕೊಲೆ ಮಾಡಿದ್ದಾಳೆ. ನಂತರ ಹಾರ್ಟ್ ಅಟ್ಯಾಕ್ನಿಂದ ಗಂಡ ಸಾವನ್ನಪ್ಪಿದ್ದಾನೆಂದು ಕಥೆ ಕಟ್ಟಿದ್ದಾಳೆ.
ಯಾದಗಿರಿ ಜಿಲ್ಲೆ ಹುಣಸಗಿ ಪಟ್ಟಣದ ಈ ಮಾನಪ್ಪ ಬಂಕಲದೊಡ್ಡಿ, 11 ವರ್ಷಗಳಿಂದೆ ಈ ಲಕ್ಷ್ಮೀಯನ್ನ ಮದುವೆ ಆಗಿದ್ದ. ಆದರೆ ಇತ್ತೀಚೆ ಲಕ್ಷ್ಮೀ ದಾರಿ ತಪ್ಪಿದ್ದಳು. ಕೆಲವರ ಜತೆ ಅಕ್ರಮ ಸಂಬಂಧ ಇಟ್ಕೊಂಡಿದ್ದಳು. ಈ ವಿಷಯ ಗಂಡನಿಗೆ ಗೊತ್ತಾಗಿ ಜಗಳ ಆಗಿತ್ತು. ಮೊನ್ನೆ ರಾತ್ರಿ ದಂಪತಿ ನಡುವೆ ಮತ್ತೆ ಗಲಾಟೆ ಆಗಿದೆ. ಅದೇ ರಾತ್ರಿ ಪ್ರಿಯಕರನನ್ನ ಮನೆಗೆ ಕರೆಸಿಕೊಂಡಿರುವ ಲಕ್ಷ್ಮೀ, ದಿಂಬಿನಿಂದ ಪತಿಯ ಉಸಿರು ಗಟ್ಟಿಸಿಕೊಂದಿದ್ದಾಳೆ. ಬಳಿಕ ಹೃದಯಾಘಾತದ ನಾಟಕವಾಡಿದ್ದಾಳೆ.
ಇದನ್ನೂ ಓದಿ: ಮೈಸೂರು: ಪರ ಪುರಷನೊಂದಿಗೆ ಓಡಿಹೋಗಿದ್ದ ಹೆಂಡ್ತಿಯ ಶಿರಚ್ಛೇದ ಮಾಡಿದ ಪತಿ
ಕೊಲೆ ಬಳಿಕ ತನಗೇನು ಗೊತ್ತೇ ಇಲ್ಲ ಎನ್ನುವಂತೆ ಮೃತ ಗಂಡನ ಮುಂದೆ ಕುಳಿತು ಕಣ್ಣೀರ ಕೋಡಿ ಹರಿಸಿದ್ದಾಳೆ. ಹೃದಯಾಘಾತದಿಂದ ಸತ್ತ ಎಂದು ಸಂಬಂಧಿಕರನ್ನ ನಂಬಿಸೋಕೆ ಯತ್ನಿಸಿದ್ದಾಳೆ. ಆದ್ರೆ, ಶವದ ಮೇಲಿದ್ದ ರಕ್ತಗಾಯ, ಹೆಪ್ಪುಗಟ್ಟಿದ್ದ ರಕ್ತ ಮರೆಮಾಚುವುದಕ್ಕೆ ಸಾಧ್ಯವಾಗಿಲ್ಲ. ಮೃತ ಮುಖದ ಮೇಲಿನ ರಕ್ತ ನೋಡಿಯೇ ಊರಿನ ಜನರಿಗೆ ಈಕೆ ಮೇಲೆ ಅನುಮಾನ ಹುಟ್ಟಿದೆ. ಇದು ಹೃದಯಘಾತ ಅಲ್ವೇ ಅಲ್ಲ. ಇದೊಂದು ಕೊಲೆ ಎಂದು ಹೆಣದ ಮುಂದೆ ಕೂಗಾಡಿದ್ದಾರೆ. ನಂತರ ಲಕ್ಷ್ಮೀ ಊರಿನ ಜನರ ಜತೆಗೆ ಜಗಳಕ್ಕಿಳಿದಿದ್ದಾಳೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಸಿಪಿಐ, ಆನಂದ ವಾಗ್ಮೋಡೆ, ಡಿವೈಎಸ್ಪಿ ಜಾವೀದ್ ಇನಾಮದಾರ್ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದಿದ್ದಾರೆ. ಬಳಿಕ ಪತ್ನಿ ಲಕ್ಷ್ಮೀಯನ್ನು ಬಂಧಿಸಿದ್ದು, ಇನ್ನು ಆಕೆಗೆ ಸಹಕರಿಸಿದ ಪ್ರೀಯಕರನಿಗಾಗಿ ಬಲೆ ಬೀಸಿದ್ದಾರೆ.
ಒಟ್ಟಿನಲ್ಲಿ ಜೀವಕ್ಕೆ ಜೀವ ಅಂತ ಪ್ರೀತಿಸ್ತಿದ್ದ ಗಂಡನಿಗೆ ಪಾಪಿ ಪತ್ನಿ ಚಟ್ಟ ಕಟ್ಟಿದ್ದಾಳೆ. ಸುಮನಾತಿ ಹೆಂಡತಿಯ ಹೇಯ ಕೃತ್ಯಕ್ಕೆ ಇಡೀ ಊರಿಗೆ ಊರೇ ಬೆಚ್ಚಿಬಿದ್ದಿರೋದಂತೂ ಸುಳ್ಳಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ