ಮೆಡಿಕಲ್ ಶಾಪ್ಗೆ ಬರುವ ಹೆಣ್ಮಕ್ಳೇ ಅಮ್ಜಾದ್ನ ಟಾರ್ಗೆಟ್: ಸರಸ ಸಲ್ಲಾಪದ ವಿಡಿಯೋ ಮಾಡಿಕೊಳ್ಳುತ್ತಿದ್ದ
ಮೆಡಿಕಲ್ ಶಾಪ್ಗೆ ಬರುವ ಅಮಾಯಕ ಮಹಿಳೆ ಹಾಗೂ ಯುವತಿಯರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಬಳಿಕ ಮಾಡಬಾರದನ್ನು ಮಾಡುತ್ತಿದ್ದ. ಅದನ್ನು ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದ. ಅದರಂತೆ ಶಾಪ್ಗೆ ಬಂದಿದ್ದ ಬಾಲಕಿಯನ್ನ ಬುಟ್ಟಿಗೆ ಹಾಕಿಕೊಂಡು ಸರಸ ಸಲ್ಲಾಪ ನಡೆಸಿದ್ದಾನೆ. ಇಂತಹ ಅಶ್ಲೀಲ ದೃಶ್ಯಗಳನ್ನ ಮಹಿಳೆಯರು ಹಾಗೂ ಬಾಲಕಿಯರಿಗೆ ಗೊತ್ತಾಗದ ರೀತಿಯಲ್ಲಿ ರಿಕಾರ್ಡಿಂಗ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು, ಸದ್ಯ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ.

ದಾವಣಗೆರೆ, (ಜನವರಿ 31): ಮೆಡಿಕಲ್ ಶಾಪ್ ಬಂದ ಮಹಿಳೆ ಹಾಗೂ ಬಾಲಕಿಯನ್ನು ಪುಸಲಾಯಿಸಿ ತನ್ನ ಕಾಮದತೀಟೆ ತೀರಿಸಿಕೊಂಡಿದ್ದಾನೆ. ಸಾಲದಕ್ಕೆ ಅವರಿಗೆ ಗೊತ್ತಾಗದಂತೆ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿಕೊಂಡಿದ್ದಾನೆ. ಇದೀಗ ಅಶ್ಲೀಲ ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ ಈ ಪ್ರಕರಣ ಬೆಳಕಿಗೆ ಬಂದಿದೆ. ಈತನ ಹೆಸರು ಅಮ್ಜದ್ ಅಂತಾ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿರುವ ಮೆಡಿಕಲ್ ಸ್ಟೋರ್ ಮಾಲೀಕನಿಂದ ಪೈಶಾಚಕ ಕೃತ್ಯ ಚನ್ನಗಿರಿ ಅಮರ್ ಮೆಡಿಕಲ್ ಸ್ಟೋರ್ ನ ಮಾಲೀಕ. ಈ ಕಾಮುಕನ ಅಟ್ಟಹಾಸಕ್ಕೆ ಮಹಿಳೆಯರ ಮಾನ ಮರ್ಯಾದೆ ಹರಾಜು ಆಗಿದೆ. ಕೀಚಕನ ಕಿರಾತಕ ಕೃತ್ಯಕ್ಕೆ ಹಲವಾರು ಮಹಿಳೆಯರು ನೋವು ಅನುಭವಿಸುತ್ತಿದ್ದಾರೆ.
ಈ ವಿಕೃತ ಕಾಮಿ ಅಮ್ಜಾದ್ ದಾವಣಗೆರೆ ನಗರದ ದೇವರರಾಜ್ ಅರಸು ಬಡಾವಣೆಯ ಎ ಬ್ಲಾಕ್ ನಿವಾಸಿಯಾಗಿದ್ದು, ಮೆಡಿಕಲ್ ಸ್ಟೋರ್ ಗೆ ಬರುವ, ಕ್ಲಿನಿಕ್ ಗೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಹೀಗೆ ಒಂದು ಸಲ ಶಾಲಾ ಬಾಲಕಿಯನ್ನು ಪುಸಲಾಯಿಸಿ ಹೀನ ಕೃತ್ಯಕ್ಕೆ ಬಳಸಿಕೊಂಡು ದೌರ್ಜನ್ಯ ಎಸಗಿದ್ದಾನೆ. ಕೈಮುಗಿದು ಅತ್ತು ಕರೆದ್ರು ಬಿಟ್ಟಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದಂತೆ ಚನ್ನಗಿರಿ ಪಟ್ಟಣದಿಂದಲೇ ನಾಪತ್ತೆಯಾದ ಕಿರಾತಕ ಮೆಡಿಕಲ್ ಸ್ಟೋರ್ ಮಾಲೀಕನ ಹೀನ ಕೃತ್ಯಕ್ಕೆ ಅದೆಷ್ಟೋ ಮಹಿಳೆಯರ ಮಾನ ಹರಾಜು ಆಗಿದೆ. ಕೀಚಕನ ಮೊಬೈಲ್ ನಲ್ಲಿ 60ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ.
ಇದನ್ನೂ ಓದಿ: ಎದುರು ಮನೆ ವ್ಯಕ್ತಿ ಜತೆ ಲವ್ವಿಡವ್ವಿ: ಗೋಣಿಕೊಪ್ಪದ ಲಾಂಗ್..ಹಾಸನದ ಮೊಳೆ..ಆಂಟಿ ಆಟವೇ ಭೀಕರ..!
ಈತ ತನ್ನ ಸರಸ ಸಲ್ಲಾಪವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡು ಬಳಿಕ ಅವುಗಳನ್ನು ಲ್ಯಾಪ್ ಟಾಪ್ ಗೆ ಹಾಕಿಕೊಂಡು ವೀಕ್ಷಿಸಿ ವಿಕೃತ ಖುಷಿ ಪಡುತ್ತಿದ್ದ. ಇನ್ನು ಈತನ ನೀಚತನ ಖಂಡಿಸಿ ಕೆಲ ಸಂಘಟನೆಗಳಿಂದ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.
ಮಹಿಳೆಯರಿಗೆ ಗೊತ್ತಿಲ್ಲದೆ ವಿಡಿಯೋ ಮಾಡಿಕೊಂಡು ಅವರ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದ. ಬಾಲಕಿಯನ್ನ ಯಾವುದೋ ಮನೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ಮಾಡಿದ್ದಲ್ಲದೆ ವೀಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಹಿನ್ನೆಲೆ ಸಿ ಇ ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ 67, 67(ಎ), 67(ಬಿ) ಐಟಿ ಆಕ್ಟ್ ಮತ್ತು ಕಲಂ 77 ಹಾಗೂ ಕಲಂ 4, 6, 14, 15 ಪೋಕ್ಸೋ ಆಕ್ಟ್ 2012 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಇಂತಹ ದುಷ್ಟನ ಕೃತ್ಯಕ್ಕೆ ಎಷ್ಟೊ ಜನ ಹೆಣ್ಣು ಮಕ್ಕಳು ಹಾಗೂ ಬಾಲಕಿಯರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಇಲ್ಲಿ ಬಾಲಕಿಯ ಬಳಕೆ ಆಗಿದೆ. ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಈತ ಇನ್ನೆಷ್ಟು ಮಹಿಳೆ, ಬಾಲಕಿಯರನ್ನು ತಮ್ಮ ಕಾಮದಾಹಕ್ಕೆ ಬಳಸಿಕೊಂಡಿದ್ದ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ