AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ನರ್ಸ್​ ಪ್ರೀತಿಸಿ ಮದುವೆಯಾದ ವೈದ್ಯ ಮಗುವಾದ ಮೇಲೆ ಪರಾರಿ, ಎಸ್​ಪಿ ಎದುರು ಮಹಿಳೆ ಕಣ್ಣೀರು

ವೈದ್ಯ ಗಿರೀಶ್ ಹಾಗೂ ಕುಟುಂಬಸ್ಥರ ಮೇಲೆ FIR ದಾಖಲಾಗಿದೆ. ಹೀಗೆ ದೂರು ದಾಖಲಾಗುತ್ತಿದ್ದಂತೆ ವೈದ್ಯ ಗಿರೀಶ್ ಇಡೀ ಕುಟುಂಬ ನಾಪತ್ತೆಯಾಗಿದೆ.

ದಾವಣಗೆರೆ: ನರ್ಸ್​ ಪ್ರೀತಿಸಿ ಮದುವೆಯಾದ ವೈದ್ಯ ಮಗುವಾದ ಮೇಲೆ ಪರಾರಿ, ಎಸ್​ಪಿ ಎದುರು ಮಹಿಳೆ ಕಣ್ಣೀರು
ಡಾ.ಗಿರೀಶ್, ತ್ರಿವೇಣಿ
TV9 Web
| Updated By: ಆಯೇಷಾ ಬಾನು|

Updated on: Jan 25, 2023 | 3:58 PM

Share

ದಾವಣಗೆರೆ: ಗ್ರಾಮೀಣ ಪ್ರದೇಶದಲ್ಲಿ ಬಿಎಂಎಸ್ ವೈದ್ಯರು ಅಂದ್ರೆ ಒಂದು ರೀತಿ ಪ್ರಭಾವಿಗಳೇ. ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಸಾವಿರ ಆದಾಯ ಇರುತ್ತದೆ‌. ಇಂತಹ ವೈದ್ಯನೊಬ್ಬ ತನ್ನ ಪ್ರಭಾವ ಬಳಿಸಿ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದೂರು ದಾಖಲಾಗದಂತೆ ನೋಡಿಕೊಂಡಿದ್ದ‌. ಇತನ ಹಿಂಸೆ ತಾಳದೇ ತಾಳಿ ಕಟ್ಟಿಸಿಕೊಂಡ ಪತ್ನಿಯೇ ನೇರವಾಗಿ ಎಸ್ಪಿ ಮುಂದೆ ತನ್ನ ಮಗುವಿನೊಂದಿಗೆ ಹೋಗಿ ಕಣ್ಣೀರು ಹಾಕಿದ್ದು ಕಾನೂನು ಸಮರ ಶುರುವಾಗಿದೆ.

ವಿಜಯ‌ಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ‌ ಹಲವಾಗಲು ಗ್ರಾಮದಲ್ಲಿ ಪ್ರೀತಿಸಿ, ನಂಬಿಸಿ ಮದುವೆ ಆಗಿ ನಡು ನೀರಲ್ಲಿ ಕೈಬಿಟ್ಟ ಪತಿರಾಯನ ವಿರುದ್ಧ ಪತ್ನಿ ಹೋರಾಟ ಶುರು ಮಾಡಿದ್ದಾಳೆ. ಗಿರೀಶ ಎಂಬ ಬಿಎಂಎಸ್ ವೈದ್ಯ ಕ್ಲಿನಿಕ್ ನಡೆಸುತ್ತಿದ್ದು. ಜೊತೆಗೆ ಮೆಡಿಕಲ್ ಶಾಪ್ ಸಹ ಇಟ್ಟುಕೊಂಡಿದ್ದಾರೆ. ಇದೇ ಗ್ರಾಮದ ಅನ್ಯ ಜಾತಿಯ ಯುವತಿ ತ್ರಿವೇಣಿ ಗಿರೀಶ್ ಬಳಿ ಕೆಲಸಕ್ಕೆ ಬರುತ್ತಿದ್ದರು. ಈತನ ಕ್ಲಿನಿಕ್ ನಲ್ಲಿ ನರ್ಸ್ ಆಗಿ ಸೇವೆ ಆರಂಭಿದ್ದರು. ದಿನ ಕಳೆದಂತೆ ಇಬ್ಬರ ನಡುವೆ ಪ್ರೀತಿಯಾಗಿದೆ. ಜಾತಿ ಧರ್ಮ ಪ್ರೀತಿಯ ಮುಂದೆ ಯಾವ ಲೆಕ್ಕ ಅಂತಾ ಪಕ್ಕದ ಕುರವತ್ತಿ ಬಸವಣ್ಣನ ದೇವಸ್ಥಾನಕ್ಕೆ ಹೋಗಿ ಮದ್ವೆ ಕೂಡಾ ಆಗಿದ್ದಾರೆ. ಸಂಸಾರ ಚನ್ನಾಗಿಯೇ ಇತ್ತು. ಮಗು ಕೂಡಾ ಆಗಿದೆ. ಆದ್ರೆ ಇತ್ತೀಚಿಗೆ ಡಾ.ಗಿರೀಶ್ ವರ್ತನೆ ಬದಲಾಗಿದೆ. ತ್ರಿವೇಣಿ ಇರುವಾಗಲೇ ತಮ್ಮ ಜಾತಿಗೆ ಸೇರಿದ ಯುವತಿ ಯೊಬ್ಬಳನ್ನ ಮದ್ವೆ ಆಗಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮದುವೆಯಾಗಿ ಒಂದು ಮಗು ಆದ ಬಳಿಕ ಈಗ ಕಿರುಕುಳ ಆರೋಪ

ಬಿಎಂಎಸ್ ವೈದ್ಯನ ಕಿರುಕುಳಕ್ಕೆ ಪತ್ನಿ ಕಣ್ಣೀರು ಹಾಕುತ್ತಾ ತನಗೆ ಗಂಡ ಬೇಕು ಅಂತ ಠಾಣೆ ಮೆಟ್ಟಿಲೇರಿದ್ದಾರೆ. ಬೇರೆ ಜಾತಿಯ ಮದುವೆ ಆಗಿದ್ದಕ್ಕೆ ವೈದ್ಯರ ಕುಟುಂಬಸ್ಥರಿಂದ ಸಹ ಕಿರುಕಳ ಶುರುವಾಗಿದೆ. ನಿರಂತರ ವರದಕ್ಷಿಣೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಲಾಗಿದೆ. ಕಳೆದ ಆರು ವರ್ಷದ ಹಿಂದೆ ಇಬ್ಬರು ಅಂತರ್ಜಾತಿ ವಿವಾಹ ಆಗಿ ಇಬ್ಬರು ಗ್ರಾಮದಲ್ಲಿ ಕ್ರಾಂತಿ ಮಾಡಿದ್ದರು. ಆದ್ರೆ ಈಗ ತನಗೆ ನ್ಯಾಯ ಕೊಡಿಸಿ ಎಂದು ಹಲವಾಗಲು ಪೊಲೀಸ್ ಠಾಣೆಯಲ್ಲಿ ತ್ರಿವೇಣಿ ಹಲವಾರು ಸಲ ಹೋಗಿ ಅಂಗಲಾಚಿದ್ದಾರೆ. ಇಷ್ಟಾದರೂ ಪೊಲೀಸರಿಂದ ಯಾವುದೇ ನ್ಯಾಯ ಸಿಕ್ಕಿಲ್ಲ. ಆಗ ನೇರವಾಗಿ ಸಂತ್ರಸ್ತೆ ತ್ರಿವೇಣಿ ವಿಜಯನಗರ ಎಸ್.ಪಿ ಕಚೇರಿ ಮೆಟ್ಟಿಲೇರಿದ್ದಾರೆ. ಕೂಲಂಕುಷವಾಗಿ ಪರಿಶೀಲಿಸಿ FIR ದಾಖಲಿಸುವಂತೆ ಎಸ್.ಪಿ ಶ್ರೀಹರಿಬಾಬು ಪಿಎಸ್ಐಗೆ ಸೂಚಿಸಿದ್ದಾರೆ. ಎಸ್.ಪಿ ಶ್ರೀಹರಿಬಾಬು ಸೂಚನೆ ಮೇರೆಗೆ ವೈದ್ಯ ಗಿರೀಶ್ ಹಾಗೂ ಕುಟುಂಬಸ್ಥರ ಮೇಲೆ FIR ದಾಖಲಾಗಿದೆ. ಹೀಗೆ ದೂರು ದಾಖಲಾಗುತ್ತಿದ್ದಂತೆ ವೈದ್ಯ ಗಿರೀಶ್ ಇಡೀ ಕುಟುಂಬ ನಾಪತ್ತೆಯಾಗಿದೆ. ಗೀರಿಶ್ ಕುಟುಂಬಸ್ಥರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ