ಈಗಾಗಲೇ ರಾಜ್ಯದಲ್ಲಿ ಹೆಚ್ಚು ಚರ್ಚೆ ಆಗುತ್ತಿರುವ ಜಾತಿಗಣತಿ ಬಗ್ಗೆ ಸಿದ್ದರಾಮಯ್ಯ ಅಧಿಕೃತವಾಗಿ ನಾಳೆ ದಾವಣಗೆರೆಯಲ್ಲಿ ಹೋರಾಟ ನಡೆಸಲಿದ್ದಾರೆ. ಇಂತಹ ಮಹತ್ವದ ಹೋರಾಟಕ್ಕೆ ದಾವಣಗೆರೆಯನ್ನು ಆಯ್ಕೆ ಮಾಡಿಕೊಂಡಿದ್ದು ವಿಶೇಷ ಮತ್ತು ಈ ಆಯ್ಕೆಯ ಹಿಂದೆ ಇರುವ ಕಾರಣಗಳ ಬಗ್ಗೆಯೂ ಸದ್ಯ ಚರ್ಚೆಯಾಗುತ್ತಿದೆ.
ನಗರದ ಸಂಗೊಳ್ಳಿ ರಾಯಣ್ಣ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುವ ಹೋರಾಟದಲ್ಲಿ ನಾಳೆ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮೊದಲು ಬೆಲೆ ಎರಿಕೆ ವಿರುದ್ಧ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ ಬೈಕ್ ಮೆರವಣಿಗೆಯಲ್ಲಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ. ಬೆಲೆ ಏರಿಕೆ ವಿರೋಧಿಸಿ ನಡೆಯುವ ಈ ಹೋರಾಟ ಜಿಲ್ಲಾ ಕಿಸಾನ್ ಕಾಂಗ್ರೆಸ್ ನೇತ್ರತ್ವದಲ್ಲಿ ನಡೆಯಲಿದೆ.
ಈ ಹಿಂದೆ ಸಿಎಂ ಆಗುವ ಮೊದಲು ಸಿದ್ದರಾಮಯ್ಯ ದಾವಣಗೆರೆಯಲ್ಲಿ ಅಹಿಂದ ಸಮಾವೇಶ ನಡೆಸಿದ್ದರು. ವಿಧಾನಸೌಧ ಚುನಾವಣೆಗೆ ಒಂದೂವರೆ ವರ್ಷ ಬಾಕೀ ಇರುವಾಗಲೇ ಮತ್ತೆ ಈಗ ದಾವಣಗೆರೆಯಲ್ಲಿ ಇಂತಹ ಹೋರಾಟ ಆರಂಭ ಮಾಡುತ್ತಿದ್ದಾರೆ. ಇದರ ಹಿಂದೆ ಯಾವ ಉದ್ದೇಶ ಇದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಷಯ.
ಎಚ್.ಎಂ.ರೇವಣ್ಣ, ವಿ.ಆರ್.ಸುದರ್ಶನ್, ಕೆ.ರಮೇಶ್ ಕುಮಾರ್, ವಿ.ಎಸ್.ಉಗ್ರಪ್ಪ, ಲಕ್ಷ್ಮಿ ನಾರಾಯಣ್, ಸಿ.ಎಸ್.ದ್ವಾರಕನಾಥ್ ಇನ್ನಿತರರು ನಾಳೆ ಸಿದ್ದರಾಮಯ್ಯನವರಿಗೆ ಸಾಥ್ ನೀಡಲಿದ್ದಾರೆ. ಅಲ್ಲದೇ ಪ್ರತಿಭಟನೆಯಲ್ಲಿ ಸಾವಿರಾರು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.
KSRTC ನೌಕರ ನೀವೆ ನಮ್ಮ ಪಾಲಿಗೆ ಕೆಎಸ್ಆರ್ಟಿಸಿ ಎಂಡಿ ಎಂದು ಸಿದ್ದರಾಮಯ್ಯಗೆ ಗೋಗರೆದಿದ್ದು ಏಕೆ?
(Congress Leader Siddaramaiah to attend Davangere protest tomorrow)