ಬೆಳೆ ನಾಶ ಮಾಡದೆ ಉಚಿತವಾಗಿ ನೀಡಿ ಮಾನವೀಯತೆ ಮೆರೆದ ರೈತ

ಬೆಳೆ ನಾಶ ಮಾಡದೆ ಉಚಿತವಾಗಿ ನೀಡಿ ಮಾನವೀಯತೆ ಮೆರೆದ ರೈತ

ದಾವಣಗೆರೆ: ಕೊರೊನಾ ಅನ್ನೋ ಹೆಮ್ಮಾರಿ ಜನರನ್ನ ಹಿಂಡಿ ಹಿಂಸಿಸುತ್ತಿದೆ. ಕೂಲಿ ಕಾರ್ಮಿಕರ ಒಪ್ಪೊತ್ತಿನ ಊಟವನ್ನ ಕಸಿದುಕೊಂಡಿದೆ. ಕೊರೊನಾ ಹೊಡೆತಕ್ಕೆ ರೈತರು ಕಣ್ಣೀರಿಡುತ್ತಿದ್ದಾರೆ. ಬಂಗಾರದಂತಹ ಬೆಳೆ ಕೆಳೆದ್ಕೊಂಡು ಬೀದಿಗೆ ಬಿದ್ದಿದ್ದಾರೆ. ಇಂಥಾ ಸಂಕಷ್ಟ, ಇಂಥಾ ಪರದಾಟದ ಪರಿಸ್ಥಿತಿಯಲ್ಲೂ ಮಾನವೀಯತೆ ಮೆರದಿದ್ದಾರೆ. ತಮ್ಮ ಕಣ್ಣೀರ ನಡುವೆ ಕಂಡವರ ಕಣ್ಣೀರು ಒರೆಸಿ ದೇವರಾಗಿದ್ದಾರೆ. ಬೆಳೆದ ಬೆಳೆ ಭೂಮಿಯಲ್ಲೇ ಬೆಂದು ಹೋಗ್ತಿದೆ. ಬೆವರು ಹರಿಸಿ.. ಕಣ್ಣಲ್ಲಿ ಕಣ್ಣಿಟ್ಟು ಕಾದ ಫಸಲು ಮಾರುಕಟ್ಟೆಗೆ ಕೊಂಡೊಯ್ಯಲಾಗದೆ ಸಂಕಷ್ಟದ ಕೂಪಕ್ಕೆ ದೂಡಿದೆ. ಅನ್ನದಾತನ ಬಾಳಿಗೆ ಕೊರೊನಾ ಅನ್ನೋ […]

sadhu srinath

|

Apr 21, 2020 | 2:24 PM

ದಾವಣಗೆರೆ: ಕೊರೊನಾ ಅನ್ನೋ ಹೆಮ್ಮಾರಿ ಜನರನ್ನ ಹಿಂಡಿ ಹಿಂಸಿಸುತ್ತಿದೆ. ಕೂಲಿ ಕಾರ್ಮಿಕರ ಒಪ್ಪೊತ್ತಿನ ಊಟವನ್ನ ಕಸಿದುಕೊಂಡಿದೆ. ಕೊರೊನಾ ಹೊಡೆತಕ್ಕೆ ರೈತರು ಕಣ್ಣೀರಿಡುತ್ತಿದ್ದಾರೆ. ಬಂಗಾರದಂತಹ ಬೆಳೆ ಕೆಳೆದ್ಕೊಂಡು ಬೀದಿಗೆ ಬಿದ್ದಿದ್ದಾರೆ. ಇಂಥಾ ಸಂಕಷ್ಟ, ಇಂಥಾ ಪರದಾಟದ ಪರಿಸ್ಥಿತಿಯಲ್ಲೂ ಮಾನವೀಯತೆ ಮೆರದಿದ್ದಾರೆ. ತಮ್ಮ ಕಣ್ಣೀರ ನಡುವೆ ಕಂಡವರ ಕಣ್ಣೀರು ಒರೆಸಿ ದೇವರಾಗಿದ್ದಾರೆ.

ಬೆಳೆದ ಬೆಳೆ ಭೂಮಿಯಲ್ಲೇ ಬೆಂದು ಹೋಗ್ತಿದೆ. ಬೆವರು ಹರಿಸಿ.. ಕಣ್ಣಲ್ಲಿ ಕಣ್ಣಿಟ್ಟು ಕಾದ ಫಸಲು ಮಾರುಕಟ್ಟೆಗೆ ಕೊಂಡೊಯ್ಯಲಾಗದೆ ಸಂಕಷ್ಟದ ಕೂಪಕ್ಕೆ ದೂಡಿದೆ. ಅನ್ನದಾತನ ಬಾಳಿಗೆ ಕೊರೊನಾ ಅನ್ನೋ ಕ್ರೂರಿ ಕೊಳ್ಳಿ ಇಟ್ಟಿದೆ. ದಾವಣಗೆರೆಯಲ್ಲಿ ಸಂಕಷ್ಟದ ಕೆಂಡ ತುಳಿಯುತ್ತಿರೋ ಅನ್ನದಾತ ಹಸಿದವರಿಗೆ ಹೆಗಲಾಗಿದ್ದಾನೆ. ತಾನು ಬೆಳೆದ ಬೆಳೆಯನ್ನ ನಾಶ ಮಾಡದೆ ತುತ್ತೂಟಕ್ಕೂ ಪರದಾಡ್ತಿರೋರಿಗೆ ದಾನ ಮಾಡಿದ್ದಾನೆ.

ತಮ್ಮ ಕಣ್ಣೀರ ನಡುವೆ ಉದಾರತೆ ಮೆರೆದ ಅನ್ನದಾತ! ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕೊಂಡಜ್ಜಿ ಬಳಿ ಇರೋ ಒಡ್ಡಿನಹಳ್ಳಿ ಗ್ರಾಮದ ರೈತ ಹನುಮಂತಪ್ಪ ತಮ್ಮ ಬಳಿ ಇರೋ ಮುಕ್ಕಾಲು ಎಕರೆ ಜಮೀನಲ್ಲಿ ಎಲೆಕೋಸು ಬೆಳೆದಿದ್ರು ಲಾಕ್​ಡೌನ್​ನಿಂದಾಗಿ ಬೆಳೆಯನ್ನ ಮಾರುಕಟ್ಟೆಗೆ ಸಾಗಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ರು. ಆದ್ರೆ, ತಾವು ಬೆಳೆದ ಬೆಳೆ ಮಣ್ಣುಪಾಲು ಮಾಡದೆ ಸ್ವಸಹಾಯ ಸಂಘದವರಿಗೆ ಉಚಿತವಾಗಿ ನೀಡಿದ್ದಾರೆ. ಹಸಿದವರಿಗೆ, ಸಂಕಷ್ಟದಲ್ಲಿ ದಿನ ಕಳೆಯುತ್ತಿರೋರಿಗೆ ಸಹಾಯವಾಗಲಿ ಅಂತ ತರಕಾರಿಯನ್ನ ಉಚಿತವಾಗಿ ನೀಡಿ ಉದಾರತೆ ಮೆರೆದಿದ್ದಾರೆ.

ಇನ್ನು ದಾವಣಗೆರೆಯ ಒಡ್ಡಳ್ಳಿ ಗ್ರಾಮದ ರೈತ ಎಲ್ಲರಿಗೂ ಮಾದರಿಯಾಗಿದ್ದಾರೆ. ಆದ್ರೆ, ಕೆಲ ರೈತರು ಜೋಳ ಬೆಳೆದು ಜೋಳಿಗೆ ತುಂಬಿಸಿಕೊಳ್ಳೋಕು ಪರದಾಡ್ತಿದ್ದಾರೆ. ಆದ್ರೆ, ಹರಿಹರ ಶಾಸಕ ರಾಮಪ್ಪ ಜನತಾ ಸೇವೆ ಜನಾರ್ಧನ ಸೇವೆ ಅಂದ್ಕೊಂಡಿದ್ದು, ರೈತರ ಕಣ್ಣೀರು ಒರೆಸೋಕೆ ಮುಂದಾಗಿದ್ದಾರೆ. ರೈತರು ಬೆಳೆದಿರೋ ಜೋಳವನ್ನ ಅವರವರ ಮನೆ ಬಾಗಿಲಿಗೆ ತೆರಳಿ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ಖರೀದಿ ಮಾಡ್ತಿದ್ದಾರೆ. ಈ ಮೂಲಕ ಜನರ ನೆರವಿಗೆ ನಿಂತು ರೈತ ಬಾಳಿಗೆ ಬೆಳಕಾಗಿದ್ದಾರೆ.

ಒಟ್ನಲ್ಲಿ ಕೊರೊನಾ ಲಾಕ್​ಡೌನ್ ಸಿಡಿಲಿಗೆ ಸಿಲುಕಿ ರೈತರ ಬದುಕು ಬೀದಿಗೆ ಬಿದ್ದಿದೆ. ಒಬ್ರು ಸಂಕಷ್ಟಕ್ಕೆ ಸ್ಪಂದಿಸಿ ನಾಯಕನಾಗಿದ್ರೆ, ಮತ್ತೊಬ್ಬ ಜನನಾಯಕ ಹೇಗಿರ್ಬೇಕು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಕಷ್ಟದಲ್ಲೂ ಇರೋ ಒಂದು ತುತ್ತನ್ನ ಎಲ್ರೂ ಹಂಚಿ ತಿನ್ನೋಣ ಅನ್ನೋ ಉಳುವಾ ಯೋಗಿಯ ಉದಾರತೆಗೆ ನಮ್ಮದೊಂದು ಹ್ಯಾಟ್ಸ್​ ಆಫ್.

Follow us on

Related Stories

Most Read Stories

Click on your DTH Provider to Add TV9 Kannada