Davanagere: ತಾಯಿ ಸಾವಿಗೆ ಕಾರಣವಾದ ತಂದೆಯನ್ನೇ ಹತ್ಯೆಗೈದ ಮಗ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 25, 2024 | 11:55 AM

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ‌ ಲಕ್ಕಿಂಪುರದಲ್ಲಿ ಒಂದು ದಾರುಣ ಘಟನೆಯೊಂದು ಸಂಭವಿಸಿದೆ. ಹೆತ್ತ ತಂದೆಯನ್ನೇ ಮಗ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ಪತಿಯ ಕಿರುಕುಳಕ್ಕೆ ಬೇಸತ್ತು ತಡರಾತ್ರಿ ನೇಣುಬಿಗಿದುಕೊಂಡು ಪತ್ನಿ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ತಾಯಿ ಸಾವಿಗೆ ತಂದೆ ಕಾರಣ ಎಂದು ರೊಚ್ಚಿಗೆದ್ದ ಮಗ ಹತ್ಯೆ ಮಾಡಿದ್ದಾನೆ.

Davanagere: ತಾಯಿ ಸಾವಿಗೆ ಕಾರಣವಾದ ತಂದೆಯನ್ನೇ ಹತ್ಯೆಗೈದ ಮಗ
ಮೃತ ಅಂಜನಪ್ಪ ಮನೆ ಮುಂದೆ ಜಮಾಯಿಸಿದ ಜನರು
Follow us on

ದಾವಣಗೆರೆ, ಏಪ್ರಿಲ್​ 25: ತನ್ನ ತಾಯಿ ಸಾವಿಗೆ ತಂದೆ ಕಾರಣ ಎಂದು ರೊಚ್ಚಿಗೆದ್ದ ಮಗ (son) ತಂದೆಯನ್ನು ಹತ್ಯೆಗೈದಿರುವಂತಹ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ‌ ಲಕ್ಕಿಂಪುರ ಗ್ರಾಮದಲ್ಲಿ ನಡೆದಿದೆ. ಕಲ್ಲು ಎತ್ತಿಹಾಕಿ ತಂದೆ (father) ಅಂಜನಪ್ಪ (60)ರನ್ನು ಮಗ ರಮೇಶ್​ ಹತ್ಯೆಗೈದಿದ್ದಾನೆ. ನಿತ್ಯ ಕುಡಿದು ಬಂದು ಮನೆಯಲ್ಲಿ ಜಗಳವಾಡುತ್ತಿದ್ದ ಪತಿ ಕಿರುಕುಳಕ್ಕೆ ಬೇಸತ್ತು ತಡರಾತ್ರಿ ಪತ್ನಿ ತಪ್ಪಮ್ಮ(52) ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಹೀಗಾಗಿ ತಾಯಿ ಸಾವಿಗೆ ತಂದೆಯೇ ಕಾರಣ ಎಂದು ಹತ್ಯೆ ಮಾಡಲಾಗಿದೆ. ಸದ್ಯ ಆರೋಪಿಯನ್ನು ಜಗಳೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು: ಇಬ್ಬರು ಸಾವು, ಮೂವರಿಗೆ ಗಾಯ 

ವಿಜಯಪುರ: ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವಂತಹ ಘಟನೆ ಇತ್ತೀಚೆಗೆ ನಡೆದಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಬಳಿ ಈ ದುರಂತ ನಡೆದಿತ್ತು. ಮೃತಪಟ್ಟವರನ್ನು ದೊಡ್ಡಯ್ಯ ಪುರಾಣಿಕಮಠ (37) ಹಾಗೂ ಪುಷ್ಪಾವತಿ ಹಿರೇಮಠ( 55) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಚುನಾವಣೆಗೂ ಮುನ್ನ ಬೆಂಗಳೂರಿನಲ್ಲಿ ಆತಂಕ: ವ್ಯಕ್ತಿಯ ಹತ್ಯೆ, ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಇತರೆ ಮೂವರು ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿತ್ತು. ಮೃತರು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕರಭಂಟನಾಳ ಗ್ರಾಮದವರು ಎಂದು ತಿಳಿದು ಬಂದಿದೆ. ಸಂಬಂಧಿಕರ ಮದುವೆ ಕಾರ್ಯಕ್ರಮ ಮುಗಿಸಿ ಢವಳಗಿ ಮಾರ್ಗವಾಗಿ ವಿಜಯಪುರ ನಗರಕ್ಕೆ ಆಗಮಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

16 ವರ್ಷದ ಬಾಲಕ ಸಿಡಿಲು ಬಡಿದು ಸಾವು

ಕೊಪ್ಪಳ: ಸಿಡಿಲು ಬಡಿದ ಪರಿಣಾಮ 16 ವರ್ಷದ ಬಾಲಕನೋರ್ವ ಮೃತಪಟ್ಟಿರುವಂತಹ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೋನಸಾಗರ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿ ಕುರಿ ಮೇಯಿಸುತ್ತಿದ್ದ ಶ್ರೀನಿವಾಸ್ ಗೊಲ್ಲರ್​ಗೆ ಸಿಡಿಲು ಬಡಿದಿದ್ದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಲಬುರ್ಗಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸಿಡಿಲು ಬಡಿದು 20ಕ್ಕೂ ಹೆಚ್ಚು ಕುರಿಗಳು ಸಾವು

ಗದಗ: ಜಿಲ್ಲೆಯ ಹಲವಡೆ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ. ಗದಗ ತಾಲೂಕಿನ ಕಿರಟಗೇರಿ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು 20ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿದ್ದವು. ಮಳೆ ಹಿನ್ನೆಯಲ್ಲಿ ಕುರಿಗಳ ಹಿಂಡು ಸಮೇತ ಕುರಿಗಾಹಿಗಳು ಮರದ ಕೆಳಗೆ ಆಶ್ರಯ ಪಡೆದಿದ್ದರು. ಈ ವೇಳೆ ಸಿಡಿಲು ಬಡಿದು 20ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿದ್ದವು.

ಇದನ್ನೂ ಓದಿ: ತುಮಕೂರು: ಹಿಂಬದಿಯಿಂದ ಲಾರಿಗೆ ಬುಲೆರೋ ವಾಹನ ಡಿಕ್ಕಿ: ಇಬ್ಬರು ಸಾವು

ಅದೃಷ್ಟವಶಾತ್ ಕುರಿಗಾಹಿಗಳು ಬಚಾವ್ ಆಗಿದ್ದರು. ಮತ್ತಪ್ಪ ದೊಡ್ಡಮನಿ, ಶಿವಪ್ಪ ಹರಿಜನ ಎಂಬುವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದ್ದವು. ವಿಷಯ ತಿಳಿದು ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:53 am, Thu, 25 April 24