ತವರಿಗೆ ತರಲಾಗದ ಸ್ಥಿತಿಯಲ್ಲಿ ಮೃತದೇಹಗಳು: ಅಮೆರಿಕದಲ್ಲೇ ದಾವಣಗೆರೆ ಮೂಲದ ದಂಪತಿ, ಮಗು ಅಂತ್ಯಕ್ರಿಯೆ

ಅಮೆರಿಕಾದಲ್ಲಿ ದಾವಣಗೆರೆ ಮೂಲದ ಮೂವರು ಸಾವನ್ನಪ್ಪಿ ಹನ್ನೊಂದು ದಿನಗಳಾಗಿವೆ. ಸದ್ಯ ಕ್ಯಾಟೊನ್ಸ್​ವಿಲ್ಲೆನಲ್ಲಿ ಯೋಗೇಶ್, ಪ್ರತಿಭಾ & ಯಶ್ ಅಂತ್ಯಕ್ರಿಯೆ ನೆರವೇರಿದೆ. ಪ್ರಕರಣ ಸಂಬಂಧ ಬಾಲ್ಟಿಮೋರ್ ಪೊಲೀಸರಿಂದ ತನಿಖೆ ಮುಂದುವರಿದಿದೆ. ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿದೆ. ಅಂತ್ಯಕ್ರಿಯೆ ವೇಳೆ ಯೋಗೇಶ್ & ಪ್ರತಿಭಾ ಕುಟುಂಬಸ್ಥರು ಭಾಗಿಯಾಗಿದ್ರು.

ತವರಿಗೆ ತರಲಾಗದ ಸ್ಥಿತಿಯಲ್ಲಿ ಮೃತದೇಹಗಳು: ಅಮೆರಿಕದಲ್ಲೇ ದಾವಣಗೆರೆ ಮೂಲದ ದಂಪತಿ, ಮಗು ಅಂತ್ಯಕ್ರಿಯೆ
ಕುಟುಂಬಸ್ಥರಿಂದ ಅಮೆರಿಕದಲ್ಲೇ ದಾವಣಗೆರೆ ಮೂಲದ ದಂಪತಿ, ಮಗು ಅಂತ್ಯಕ್ರಿಯೆ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಆಯೇಷಾ ಬಾನು

Updated on:Aug 27, 2023 | 1:09 PM

ದಾವಣಗೆರೆ, ಆ.27: ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ, ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿ ಭಾರತಕ್ಕೆ ಮೃತದೇಹ ತರಬೇಕು ಎಂದು ಕುಟುಂಬಸ್ಥರು ಸರ್ಕಾರದ ಮೊರೆ ಹೋಗಿದ್ದರು. ಆದರೆ ದೇಹ ಕೊಳೆತ ಹಿನ್ನಲೆ ಹಾಗೂ ತನಿಖೆ ವಿಚಾರವಾಗಿ ಅಮೆರಿಕದ ಕ್ಯಾಟೊನ್ಸ್​ವಿಲ್ಲೆನಲ್ಲಿ ಮೂವರ ಅಂತ್ಯಸಂಸ್ಕಾರ(Funeral) ನೆರವೇರಿದೆ. ಭಾರತೀಯ ಕಾಲಮಾನ ನಿನ್ನೆ ರಾತ್ರಿ 11.30ಕ್ಕೆ ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿದೆ. ಅಂತ್ಯಕ್ರಿಯೆ ವೇಳೆ ಯೋಗೇಶ್ & ಪ್ರತಿಭಾ ಕುಟುಂಬಸ್ಥರು ಭಾಗಿಯಾಗಿದ್ರು.

ಪತ್ನಿ, ಮಗನನ್ನು ಶೂಟ್ ಮಾಡಿ ಬಳಿಕ ಗಂಡ ಕೂಡ ಗುಂಡು ಹಾರಿಸಿಕೊಂಡಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಮಾಹಿತಿ ಇದೆ. ಸದ್ಯ ಕ್ಯಾಟೊನ್ಸ್​ವಿಲ್ಲೆನಲ್ಲಿ ಯೋಗೇಶ್, ಪ್ರತಿಭಾ & ಯಶ್ ಅಂತ್ಯಕ್ರಿಯೆ ನೆರವೇರಿದೆ. ಪ್ರಕರಣ ಸಂಬಂಧ ಬಾಲ್ಟಿಮೋರ್ ಪೊಲೀಸರಿಂದ ತನಿಖೆ ಮುಂದುವರಿದಿದೆ. ಅಮೆರಿಕಾದಲ್ಲಿ ದಾವಣಗೆರೆ ಮೂಲದ ಮೂವರು ಸಾವನ್ನಪ್ಪಿ ಹನ್ನೊಂದು ದಿನಗಳಾಗಿವೆ.

Davangere-based couple, child funeral done in America by family members investigation on

ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಕುಟುಂಬ, ಸ್ನೇಹಿತರು

ನಿನ್ನೆ (ಆ.26) ಘಟನಾ ಸ್ಥಳಕ್ಕೆ ಮೃತನ ತಾಯಿ ಸೇರಿ‌‌ ನಾಲ್ವರು ಕುಟುಂಬ ಸದಸ್ಯರು ತಲುಪಿದರು. ಮೃತ ಯೋಗೇಶ್ ತಾಯಿ ಶೋಭಾ, ಸಹೋದರ ಪುನೀತ್. ಹಾಗೂ ಮೃತ ಯೋಗೇಶ್ ಪತ್ನಿ ಪ್ರತಿಭಾಳ ತಾಯಿ ಪ್ರೇಮಾ ಹಾಗೂ ಪ್ರತಿಭಾಳ ಸಹೋದರ ಗಣೇಶ ಘಟನಾ ಸ್ಥಳ ಅಮೆರಿಕಾದ ಮೇರಿಲ್ಯಾಂಡ ರಾಜ್ಯದ ಬಾಲ್ಟಿಮೋರ್ ತಲುಪಿದರು. ಭಾರತೀಯ ಕಾಲಮಾನದಂತೆ ಸಂಜೆ ಏಳು ಗಂಟೆಗೆ ಪಾರ್ಥಿವ ಶರೀರಗಳ ದರ್ಶನ ಮಾಡಿದರು. ಭಾರತೀಯ ಕಾಲಮಾನ ರಾತ್ರಿ 11.30ಕ್ಕೆ ಅಂತ್ಯಸಂಸ್ಕಾರ ನೆರವೇರಿದೆ. ಭಾರತರದಿಂದ ತೆರಳಿದ ಮೃತರ ‌ನಾಲ್ಕು ಜನ ಕುಟುಂಬ ಸದಸ್ಯರು ಹಾಗೂ ಅಮೆರಿಕಾದಲ್ಲಿಯೇ ಇರುವ ಓರ್ವ ಸೋಮಶೇಖರ ಎಂಬ ಸಂಬಂಧಿಯ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿತು.

ಇದನ್ನೂ ಓದಿ: ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ-ಮಗು ಸಾವು; ಮೃತದೇಹಗಳನ್ನು ಸ್ವಗ್ರಾಮಕ್ಕೆ ತರಿಸುವಂತೆ ಮೃತರ ಸಂಬಂಧಿಕರಿಂದ ಸಿಎಂಗೆ ಮನವಿ

ಸಾಪ್ಟವೇರ್ ಇಂಜಿನೀಯರ್ ಯೋಗೇಶ್ ಆಗಸ್ಟ್ 15ರ ರಾತ್ರಿ ಪತ್ನಿ ಹಾಗೂ ಪುತ್ರನನ್ನ ಗುಂಡು ಹಾರಿಸಿ ಹತ್ಯೆ ಮಾಡಿ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪ್ರಾರ್ಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೇಕಲ್ಲು ಮೂಲದ ಯೋಗೇಶ್ ಹೊನ್ನಾಳ(37), ಪತ್ನಿ ಪ್ರತಿಭಾ ಹೊನ್ನಾಳ್(35), ಪುತ್ರ ಯಶ್ ಹೊನ್ನಾಳ್(6) ಮೃತಪಟ್ಟ ದುರ್ದೈವಿ ಟೆಕ್ಕಿಗಳು.

ದಾವಣಗೆರೆಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:08 am, Sun, 27 August 23

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ